Home Crime Acid on Cow: ಶ್ರೀಕೃಷ್ಣ ಜನ್ಮಾಷ್ಠಮಿಯಂದು ಹಸುವಿನ ಮೇಲೆ ಆಸಿಡ್‌, ಕುದಿಯುವ ಎಣ್ಣೆ ಸುರಿದ ಕಿಡಿಗೇಡಿಗಳು

Acid on Cow: ಶ್ರೀಕೃಷ್ಣ ಜನ್ಮಾಷ್ಠಮಿಯಂದು ಹಸುವಿನ ಮೇಲೆ ಆಸಿಡ್‌, ಕುದಿಯುವ ಎಣ್ಣೆ ಸುರಿದ ಕಿಡಿಗೇಡಿಗಳು

Acid on Cow

Hindu neighbor gifts plot of land

Hindu neighbour gifts land to Muslim journalist

Acid on Cow: ಗೋವುಗಳನ್ನು ದೇವರೆಂದು ಪೂಜಿಸುವ ಭಾರತದಂತಹ ದೇಶದಲ್ಲಿ ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದಿದ್ದಾರೆ. ಮೂಕಪ್ರಾಣಿಯೆಂದು ನೋಡದೇ ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆಸಿಡ್‌ ಮತ್ತು ಕಾದ ಎಣ್ಣೆಯನ್ನು ಕಿಡಿಗೇಡಿಗಳು ಸುರಿದಿರುವ ಘಟನೆಯೊಂದು ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್‌ ನಗರದಲ್ಲಿ ನಡೆದಿದೆ. ಮೂಕ ಪ್ರಾಣಿಯ ರೋದನೆ ಮುಗಿಲು ಮುಟ್ಟಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ಘಟನೆ ನಡೆದಿದೆ. ಹಸುವಿನ ಚರ್ಮ ಸುಲಿದಿದೆ. ರಸ್ತೆ ತುಂಬ ರಕ್ತ ಹರಡಿದೆ. ಈ ಘಟನೆಯ ನಂತರ ಹಸು ಕಾಣೆಯಾಗಿದ್ದು, ಈ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬಜರಂಗದಳ ಕಾರ್ಯಕರ್ತರು ಗಲ್‌ಪೇಟೆ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ತೀರಾ ಗಾಯಗೊಂಡ ಹಸುವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಂತೆ ಮನವಿ ಮಾಡಲಾಗಿದೆ. ಗಾಯಗೊಂಡ ಹಸುಗಳನ್ನು ನೋಡಿ ಸ್ಥಳೀಯರು ಮರುಗಿದ್ದು, ಚಿತ್ರಹಿಂಸೆ ನೀಡಿದವರ ವಿರುದ್ಧ ಕ್ರಮಗೊಳ್ಳುವಂತೆ ಆಗ್ರಹ ಮಾಡಿದ್ದಾರೆ.