Home Crime Mangaluru: ಎಂಡಿಎಂಎ ಮಾರಾಟ ಮಾಡುತ್ತಿದ್ದ ಓರ್ವ ಅರೆಸ್ಟ್: ಲಕ್ಷ ಮೌಲ್ಯದ ಮಾದಕ ವಸ್ತು ವಶ!

Mangaluru: ಎಂಡಿಎಂಎ ಮಾರಾಟ ಮಾಡುತ್ತಿದ್ದ ಓರ್ವ ಅರೆಸ್ಟ್: ಲಕ್ಷ ಮೌಲ್ಯದ ಮಾದಕ ವಸ್ತು ವಶ!

Hindu neighbor gifts plot of land

Hindu neighbour gifts land to Muslim journalist

Mangaluru: ನಗರದ (Mangaluru) ಲಾಲ್‌ಬಾಗ್ ಪ್ರದೇಶದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುಳ್ಯದ ಪೆರುವಾಜೆ ಗ್ರಾಮದ ಮಾಣಿಕ್ಕರ ಪೋಸ್ಟ್‌ನ ಆಲಂತಡ್ಕ ಮನೆಯ ಮೊಹಮ್ಮದ್ ಅಶ್ರಫ್ ಆಲಂತಡ್ಕ (50) ಎಂದು ಗುರುತಿಸಲಾಗಿದೆ.

ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ದೆಹಲಿಯಿಂದ ಕೊರಿಯರ್ ಮೂಲಕ ತಂದು ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ, ಸಿಸಿಬಿ ಪೊಲೀಸರು ಮಾದಕ ವಸ್ತುವನ್ನು ಸಾಗಿಸಲು ಬಳಸಲಾಗುತ್ತಿದ್ದ ದ್ವಿಚಕ್ರ ವಾಹನವನ್ನು ಪತ್ತೆಹಚ್ಚಿ, ಆರೋಪಿಯಿಂದ 1 ಲಕ್ಷ ರೂ. ಮೌಲ್ಯದ 11 ಗ್ರಾಂ ನಿಷೇಧಿತ ಎಂಡಿಎಂಎ, ಒಂದು ಮೊಬೈಲ್ ಫೋನ್ ಮತ್ತು ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 1.6 ಲಕ್ಷ ರೂ. ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ದೆಹಲಿಯಲ್ಲಿರುವ ಸ್ನೇಹಿತನ ಮೂಲಕ ಎಂಡಿಎಂಎ ಖರೀದಿಸಿ ಕೊರಿಯ‌ರ್ ಮೂಲಕ ತನ್ನ ಊರಾದ ಸುಳ್ಯಕ್ಕೆ ತಲುಪಿಸಲು ವ್ಯವಸ್ಥೆ ಮಾಡಿದ್ದ. ಅಕ್ರಮ ಲಾಭಗಳಿಸುವ ಉದ್ದೇಶದಿಂದ, ನಂತರ ತನ್ನ ದ್ವಿಚಕ್ರ ವಾಹನದಲ್ಲಿ ಮಂಗಳೂರಿಗೆ ಮಾದಕ ವಸ್ತುವನ್ನು ಸಾಗಿಸುತ್ತಿದ್ದನು,.