Home Crime Mumbai: ಪತ್ನಿ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

Mumbai: ಪತ್ನಿ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

Hindu neighbor gifts plot of land

Hindu neighbour gifts land to Muslim journalist

Mumbai: ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 41 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಹೆಸರನ್ನು ಬರೆದು ಹೋಟೆಲ್‌ ರೂಂ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿಶಾಂತ್‌ ತ್ರಿಪಾಠಿ ಎಂಬಾತ ಮೃತ ವ್ಯಕ್ತಿ. ಅನಿಮೇಷನ್‌ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಇವರು ಫೆ.28 ರಂದು ವಿಲೇ ಪಾರ್ಲೆಯ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಕಂಪನಿಯ ವೆಬ್‌ಸೈಟ್‌ನಲ್ಲಿ ವಿದಾಯ ಸಂದೇಶವನ್ನು ಅಪ್‌ಲೋಡ್‌ ಮಾಡಿದ್ದರು.

ತಮ್ಮ ಪತ್ನಿ ಅಪೂರ್ವ ಪಾರಿಖ್‌ ಮತ್ತು ಆಕೆಯ ಚಿಕ್ಕಮ್ಮ ಪ್ರಾರ್ಥನಾ ಮಿಶ್ರಾ ರಿಂದ ಕಿರುಕುಳ ಅನುಭವಿಸುತ್ತಿದ್ದ ಕುರಿತು ವರದಿಯಾಗಿದೆ. ಪೊಲೀಸರ ಪ್ರಕಾರ ಆತ್ಮಹತ್ಯೆ ಮಾಡುವ ಮೂರು ದಿನಗಳ ಮೊದಲು ಕೊಠಡಿಯನ್ನು ಬುಕ್‌ ಮಾಡಿದ್ದರು. ಘಟನೆಯ ದಿನದಂದು ಬಾಗಿಲಿನ ಮೇಲೆ ಡಿಸ್ಟರ್ಬ್‌ ಮಾಡಬೇಡಿ ಎಂಬ ಫಲಕವನ್ನು ಕೂಡಾ ಹಾಕಿದ್ದರು.

ತನ್ನ ಸಾವಿಗೆ ಹೆಂಡತಿ ಮತ್ತು ಅವಳ ಚಿಕ್ಕಮ್ಮ ಕಾರಣ ಎಂದು ಆರೋಪ ಮಾಡಿ ಇನ್ನು ಮುಂದೆ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.