Home Crime Malpe: ಮೀನು ಕದ್ದಿದ್ದಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣ; ಡಿಸಿ ಮತ್ತು ಎಸ್ಪಿಯಿಂದ...

Malpe: ಮೀನು ಕದ್ದಿದ್ದಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣ; ಡಿಸಿ ಮತ್ತು ಎಸ್ಪಿಯಿಂದ ಖಂಡನೆ, ಮೂವರ ಬಂಧನ!

Hindu neighbor gifts plot of land

Hindu neighbour gifts land to Muslim journalist

Malpe: ಮೀನು ಕದ್ದ ಆರೋಪದ ಮೇಲೆ ಮಹಿಳೆಯೋರ್ವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿರುವ ಪ್ರಕರಣಕ್ಕೆ ಕುರಿತಂತೆ ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಕದ್ದ ಆರೋಪದ ಮೇಲೆ ಮಹಿಳೆ ಕಪಾಳಕ್ಕೆ ಬಾರಿ ಅಮಾನವೀಯ ರೀತಿಯಲ್ಲಿ ವರ್ತನೆ ಮಾಡಲಾಗಿದೆ. ಈ ಘಟನೆ ನಡೆದಾಗ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಹಾಗೂ ಹಲ್ಲೆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ಬಂಧನವಾಗಿದೆ. ಪೊಲೀಸರು ಸುಂದರ್‌, ಶಿಲ್ಪ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಂಧನ ಮಾಡಿದ್ದಾರೆ. ವಿಡಿಯೋ ಪರಿಶೀಲನೆ ಮಾಡಿ ಇನಷ್ಟು ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕುಮಾರ್‌ ಅವರು, ವಿಜಯನಗರ ಜಿಲ್ಲೆಯಿಂದ ಬಂದಿರುವ ಮಹಿಳೆಯ ಮೇಲೆ ಸ್ಥಳೀಯ ಮಹಿಳೆಯರಿದಂದ ಹಲ್ಲೆ ನಡೆದಿದೆ. ಮೀನು ಕದ್ದ ಆರೋಪದ ಮೇಲೆ ಲಕ್ಷ್ಮೀ ಬಾಯಿ ಅವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ ಎಂದು ಮಾಧ್ಯಮದೊಂದಿಗೆ ಹೇಳಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತೀವ್ರವಾಗಿ ಖಂಡನೆ ಮಾಡಿದ್ದಾರೆ. ಸಣ್ಣ ತಪ್ಪಿಗೆ ಈ ರೀತಿ ಹಲ್ಲೆ ಮಾಡಿರುವುದು ತಪ್ಪು. ಹಲ್ಲೆ ಮಾಡುವವರು ಒಂದು ಕಡೆಯಾದರೆ, ಉಳಿದವರು ನಗುತ್ತಾ ನಿಂತಿದ್ದರು. ಯಾರೂ ಹಲ್ಲೆ ತಡೆಯುವ ಪ್ರಯತ್ನ ಮಾಡಿಲ್ಲ. ಜನರ ಮನಸ್ಥಿತಿ ಈ ರೀತಿಯಾದರೆ ಕಷ್ಟ ಎಂದಿದ್ದಾರೆ.