Home Crime Maharashtra: ಚಲಿಸುತ್ತಿದ್ದ ಬಸ್‌ನಲ್ಲಿ ಮಗುವಿಗೆ ಜನನ: ಕಿಟಕಿಯಿಂದ ಹೊರಗೆಸೆದು ಹತ್ಯೆ

Maharashtra: ಚಲಿಸುತ್ತಿದ್ದ ಬಸ್‌ನಲ್ಲಿ ಮಗುವಿಗೆ ಜನನ: ಕಿಟಕಿಯಿಂದ ಹೊರಗೆಸೆದು ಹತ್ಯೆ

Baby Alive before Cremation

Hindu neighbor gifts plot of land

Hindu neighbour gifts land to Muslim journalist

Maharashtra: ಮಹಾರಾಷ್ಟ್ರದ ಪರ್ಭಾನಿಯಲ್ಲಿ 19 ವರ್ಷದ ಯುವತಿಯೊಬ್ಬಳು ಚಲಿಸುತ್ತಿರುವ ಬಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ಕಿಟಕಿಯಿಂದ ಎಸೆದಿರುವ ಘಟನೆ ನಡೆದಿದೆ.

ಪತಿ ಎಂದು ಹೇಳಿಕೊಂಡಿರುವ ವ್ಯಕ್ತಿಯ ಸಹಾಯದಿಂದ ನವಜಾತ ಗಂಡು ಮಗುವನ್ನು ಕಿಟಕಿಯಿಂದ ಎಸೆಯಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬಸ್ಸಿನಿಂದ ರಸ್ತೆಗೆ ಎಸೆಯಲಾಗಿದೆ. ಪರಿಣಾಮ ಮಗು ಸಾವಿಗೀಡಾಗಿದೆ.

ಮಂಗಳವಾರ 6.30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ನೋಡಿದ್ದು ನಂತರ ವಿಷಯ ಬಯಲಿಗೆ ಬಂದಿದೆ.

ದಂಪತಿಗಳನ್ನು ರಿತಿಕಾ ಧೇರೆ ಮತ್ತು ಅಲ್ತಾಫ್‌ ಶೇಖ್‌ ಎಂದು ಗುರುತಿಸಲಾಗಿದೆ. ತಮ್ಮದೇ ಆದ ಪ್ರಯಾಗ್‌ ಟ್ರಾವೆಲ್ಸ್ನ್‌ ಸ್ಲೀಪರ್‌ ಕೋಚ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣ ಮಾಡುತ್ತಿದ್ದು, ಆಗ ಗಂಡು ಮಗು ಜನನವಾಗಿದೆ. ನಂತರ ಮಗುವನ್ನು ಬಟ್ಟೆಯಲ್ಲಿ ಸುತ್ತಿ ವಾಹನದಿಂದ ಹೊರಗೆ ಎಸೆದಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಈ ಜೋಡಿಗಳು ತಾವು ವಿವಾಹಿತರು ಎಂದು ಹೇಳಿಕೊಂಡರು ಇವರಿಬ್ಬರ ಬಳಿ ಯಾವುದೇ ದಾಖಲೆ ಇಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೋಡಿ ಮಗುವನ್ನು ಬಸ್ಸಿನಿಂದ ಹೊರಗೆ ಎಸೆದಿರುವುದಾಗಿ ಒಪ್ಪಿಕೊಂಡಿದೆ. ಮತ್ತು ಮಗುವನ್ನು ಬೆಳೆಸಲು ಸಾಧ್ಯವಿಲ್ಲದ ಕಾರಣ ಹೀಗೆ ಮಾಡಿದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: Seating Arrangements: ಸಿನಿಮಾದಿಂದ ದೊಡ್ಡ ಪ್ರೇರಣೆ: ಹೊಸ ಆಸನ ವ್ಯವಸ್ಥೆ ಅಳವಡಿಸಿಕೊಂಡ ಕೇರಳದ ಶಾಲೆಗಳು