Home Crime Davanagere: ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ; ಕೂಡಿಹಾಕಿ ಥಳಿಸಿದ ವಿದ್ಯಾರ್ಥಿಗಳು!

Davanagere: ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ; ಕೂಡಿಹಾಕಿ ಥಳಿಸಿದ ವಿದ್ಯಾರ್ಥಿಗಳು!

Hindu neighbor gifts plot of land

Hindu neighbour gifts land to Muslim journalist

Davanagere: ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಉಪನ್ಯಾಸಕನನ್ನು ವಿದ್ಯಾರ್ಥಿಗಳೇ ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿಯ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಉಪನ್ಯಾಸಕನನ್ನು ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.

ವಿದ್ಯಾರ್ಥಿನಿಯರಿಗೆ ಪ್ರೀತಿ ಮಾಡುವಂತೆ ಅಶ್ಲೀಲ ಸಂದೇಶವನ್ನು ಉಪನ್ಯಾಸಕ ಕಳುಹಿಸುತ್ತಿದ್ದ. ಈ ಕುರಿತು ಮಾಹಿತಿ ಪಡೆದಿದ್ದ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜು ಪ್ರಾರಂಭವಾಗುತ್ತಿದ್ದಂತೆ ಉಪನ್ಯಾಸಕನನ್ನು ಪ್ರಶ್ನೆ ಮಾಡಿದ್ದಾರೆ. ನಂತರ ಆತನಿಂದ ಮೊಬೈಲ್‌ ಪಡೆದು ಸಂದೇಶಗಳನ್ನು ನೋಡಿದ್ದು, ಪ್ರಶ್ನೆ ಮಾಡಿದಾಗ ಸರಿಯಾಗಿ ಉತ್ತರ ನೀಡಲಿಲ್ಲ.

ವಿದ್ಯಾರ್ಥಿಗಳು ಉಪನ್ಯಾಸಕನನ್ನು ಕೊಠಡಿಯಲ್ಲಿ ಥಳಿಸಿ ಪ್ರತಿಭಟನೆ ಮಾಡಿದ್ದಾರೆ. ನಂತರ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಉಪನ್ಯಾಸಕನನ್ನು ಚನ್ನಗಿರಿ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.