Home Crime Free Bus: ಫ್ರೀ ಟಿಕೆಟ್ ಪಡೆದರೂ, ಬಸ್ ಕಂಡಕ್ಟರ್’ನ ಕೆಲಸ ಕಿತ್ತುಕೊಂಡ ಮಹಿಳೆಯರು !!

Free Bus: ಫ್ರೀ ಟಿಕೆಟ್ ಪಡೆದರೂ, ಬಸ್ ಕಂಡಕ್ಟರ್’ನ ಕೆಲಸ ಕಿತ್ತುಕೊಂಡ ಮಹಿಳೆಯರು !!

Free Bus

Hindu neighbor gifts plot of land

Hindu neighbour gifts land to Muslim journalist

Free Bus: ಕಾಂಗ್ರೆಸ್ ಸರ್ಕಾರವು(Congress Government) ತಾನು ಅಧಿಕಾರಕ್ಕೆ ಬರುವ ಮುಂಚೆ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಬಳಿಕ ತಾನು ಅಧಿಕಾರದ ಚುಕ್ಕಾಣಿ ಹಿಡಿದಾಗ ಆ ಐದು ಗ್ಯಾರಂಟಿಗಳನ್ನು(5 Guarantees) ಅನುಷ್ಠಾನಗೊಳಿಸಿತು. ಅದರಲ್ಲಿ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಉಚಿತ ಬಸ್(Free bus) ಪ್ರಯಾಣದ ‘ಶಕ್ತಿ ಯೋಜನೆ'(Shakthi Yojane) ಕೂಡ ಒಂದು. ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಈ ಯೋಜನೆ ಈಗ ರಾಜ್ಯದಾದ್ಯಂತ ಯಶಸ್ವಿಯಾಗಿ ಮುಂದುವರೆದುಕೊಂಡು ಬರುತ್ತಿದೆ. ವಿಶೇಷ ಅಂದ್ರೆ ಈ ಯೋಜನೆ ಜಾರಿ ಆದಾಗಿಂದ ಇಲ್ಲಿವರೆಗೂ ಸುಮಾರು 2 ಕೋಟಿಗೂ ಅಧಿಕ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆಂದ ಸರ್ಕಾರ ತಿಳಿಸಿದೆ. ಇದೀಗ ಈ ಉಚಿತ ಪ್ರಯಾಣದ ಬಗ್ಗೆ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಮಹತ್ವದ ಸೂಚನೆಯೊಂದನ್ನು ನೀಡುತ್ತಿದ್ದೇವೆ.

ಹೌದು, ಉಚಿತ ಪ್ರಯಾಣದ ವೇಳೆ ಕೆಲ ಮಹಿಳೆಯರು ತಮ್ಮ ಸೇಫ್ಟಿಯನ್ನು ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಈ ಸಮಯದಲ್ಲಿ ಮಹಿಳೆಯರು ಸಾರ್ವಜನಿಕ ವಿಚಾರಗಳ ಕುರಿತು ಗಮನ ನೀಡಬೇಕು. ಸರ್ಕಾರ ಕಲ್ಪಿಸಿದ ಈ ಅವಕಾಶವನ್ನು ಬೇಕಾಬಿಟ್ಟಿ ಬಳಸುವುದಲ್ಲ. ಅದನ್ನು ಗೌರವಿಸಿ, ಉಚಿತ ಪ್ರಯಾಣದ ಟಿಕೆಟ್ ನೀಡಿ ಸುರಕ್ಷತೆಯಿಂದ ಕರೆದೊಯ್ಯುವ ಕಂಡಕ್ಟರ್ ಹಾಗೂ ಡ್ರೈವರ್(Conductor and Drivers) ಗಳನ್ನೂ, ಅವರ ಕೆಲಸ-ಕಾರ್ಯಗಳನ್ನು ಗೌರವಿಸಬೇಕು. ನಮ್ಮ ಬೇಜವಾಬ್ದಾರಿ ತನದಿಂದ ಅವರ ಕಾರ್ಯಕ್ಕೆ ಅಡ್ಡಿಪಡಿಸುವುದಲ್ಲ. ಹೀಗಾಗಿ ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಮಹಿಳೆಯರು ಕೆಲವೊಂದು ವಿಚಾರಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಹುಷಾರಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಕಂಡಕ್ಟರ್(Conductor) ಕೆಲಸ ಹೋಗುತ್ತದೆ. ಇದಕ್ಕೆ ಒಂದು ಉದಾಹರಣೆಯನ್ನೂ ನಾವು ಹೇಳುತ್ತೇವೆ.

ಕಂಡಕ್ಟರ್ ಕೆಲಸವನ್ನೇ ಕಳೆದ ಮಹಿಳೆಯರು :

ಮದ್ದೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಮೂವರು ಮಹಿಳೆಯರು ಬಸ್ ಹತ್ತಿದ್ದಾರೆ. ಬಸ್ ಹತ್ತಿರ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಒಬ್ಬರು ಇಳಿದುಕೊಂಡಿದ್ದಾರೆ. ಆದರೆ ಮೂವರು ಸೇರಿ ಬಸ್ ಹತ್ತಿದಾಗ ಒಂದೇ ಟಿಕೆಟ್ ಪಡೆದುಕೊಂಡಿದ್ದರು. ಆ ಟಿಕೆಟ್ ಮಧ್ಯದಲ್ಲಿ ಇಳಿದುಕೊಂಡ ಮಹಿಳೆಯ ಬಳಿಯೇ ಇತ್ತು.

ದುರಾದೃಷ್ಟವಶಾತ್ ಈ ಸಂದರ್ಭದಲ್ಲಿ ಟಿಕೆಟ್ ಚೆಕ್ಕಿಂಗ್ ನವರು ಬಂದಿದ್ದಾರೆ. ಟಿಕೆಟ್ ಚೆಕ್ ಮಾಡಲು ಬಂದಂತಹ ಬಸ್ ನಿರ್ವಾಹಕರು ಮೂರು ಸದಸ್ಯರಲ್ಲಿ ಒಬ್ಬರು ಇಲ್ಲದೆ ಇರುವುದನ್ನು ನೋಡಿ, ಜೊತೆಗೆ ಟಿಕೆಟ್ ಕೂಡ ಇರದುದನ್ನು ನೋಡಿ ಕಂಡಕ್ಟರ್ ಅನ್ನು ಪ್ರಶ್ನಿಸಿದ್ದಾರೆ. ಪಾಪ ಕಂಡಕ್ಟರ್ ನಡೆದ ವಾಸ್ತವವನ್ನು ವಿವರಿಸಿದ್ದಾರೆ. ಆದರೆ ಇದನ್ನು ನಂಬದ ಅವರು ಆ ಮಹಿಳೆಯರ ಬಳಿ ಕೇಳಿದಾಗ ಬಂದಿರೋದು ನಾವಿಬ್ಬರೇ ಎಂಬುದಾಗಿ ಹೇಳಿ ಅಲ್ಲಿಂದ ಜಾರಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಅಧಿಕಾರಿಗಳು ಕಂಡಕ್ಟರ್ ಬೇಕು ಅಂತಾನೆ ಒಂದು ಟಿಕೆಟ್ ಹೆಚ್ಚಾಗಿ ತೆಗೆದಿದ್ದಾನೆ ಅನ್ನುವುದಾಗಿ ಹೇಳಿ ಆತನಿಗೆ ಮೆಮೊ ಜಾರಿ ಮಾಡಿ, ಕಂಡಕ್ಟರ್ ಅನ್ನು ಸಸ್ಪೆಂಡ್ ಮಾಡಿದ್ದಾರೆ.

ನೋಡಿ ಮಹಿಳೆಯರ ಬೇಜವಾಬ್ದಾರಿ ಎಷ್ಟು ಸಮಸ್ಯೆ ಉಂಟು ಮಾಡಿದೆ ಎಂದು. ಸರ್ಕಾರ ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದೆ ನಿಜ. ಎಷ್ಟು ಟೀಕೆಗಳು ಬಂದರೂ ಮಹಿಳೆಯರಿಗೆ ಇದು ಅನುಕೂಲ ಎಂದು ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆಯಲೇ ಇಲ್ಲ. ಆದರೆ ಈ ಯೋಜನೆ ಏನು ಅರಿಯದಂತಹ ಅಮಾಯಕ ಕಂಡಕ್ಟರ್ ಅಥವಾ ಸಿಬ್ಬಂದಿಯ ಕೆಲಸ ಹೋಗೋದಕ್ಕೆ ಕಾರಣವಾಗಬಾರದು. ನೀವು ಎಲ್ಲಿಗೆ ಟಿಕೆಟ್ ಪಡೆದಿರುತ್ತೀರೋ ಅದೇ ಸ್ಥಳದಲ್ಲಿ ಇಳಿಯಿರಿ. ಇಲ್ಲ ಸರಿಯಾದ ಸ್ಥಳಕ್ಕೆ ಟಿಕೆಟ್ ಪಡೆಯಿರಿ. ಇದು ನಿಮ್ಮಲ್ಲಿ ಕಳಕಳಿಯ ಮನವಿ.