Home Crime Crime: ಕಾಶಿ ಯಾತ್ರೆಗೆಂದು ಹೋದ ಪೋಷಕರು, ಚಿನ್ನಾಭರಣ ದೋಚಿದ ಮಗಳು!

Crime: ಕಾಶಿ ಯಾತ್ರೆಗೆಂದು ಹೋದ ಪೋಷಕರು, ಚಿನ್ನಾಭರಣ ದೋಚಿದ ಮಗಳು!

Crime

Hindu neighbor gifts plot of land

Hindu neighbour gifts land to Muslim journalist

Crime: ವೃದ್ಧ ತಂದೆ-ತಾಯಿ ಯಾತ್ರೆಗೆ ಹೋದ ಸಮಯ ನೋಡಿಕೊಂಡು ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ಮಗಳನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್.ಶೋಭಾ (36) ಬಂಧಿತೆ.

ಯಮಲೂರಿನ ಆ‌ರ್. ರಾಜು ದಂಪತಿ, ತಮ್ಮ ಪುತ್ರಿ ಶೋಭಾ ಅವರನ್ನು ಕೆಲ ವರ್ಷಗಳ ಹಿಂದೆ ಕ್ಯಾಬ್ ಚಾಲಕನೊಬ್ಬನಿಗೆ ಮದುವೆ ಮಾಡಿಕೊಟ್ಟಿದ್ದರು. ಶೋಭಾ ಕಗ್ಗದಾಸಪುರದಲ್ಲಿ ಗಂಡನ ಜತೆ ವಾಸವಿದ್ದರು. ಆಟೋ ಚಾಲಕರಾಗಿರುವ ರಾಜು (72) ತಮ್ಮ ಪತ್ನಿಯೊಂದಿಗೆ ಮಾರ್ಚ್ 20ರಂದು ಕಾಶಿಯಾತ್ರೆಗೆ ತೆರಳಿದ್ದರು. ಮಾ.27ರಂದು ವಾಪಸ್ ಮನೆಗೆ ಬಂದಿದ್ದರು. ಏಪ್ರಿಲ್ 11ರಂದು ಪುನಃ ಧರ್ಮಸ್ಥಳಕ್ಕೆ ಹೋಗಿ, ಏ.14ರಂದು ವಾಪಸ್ ಬಂದಿದ್ದರು. ಆ ಬಳಿಕ ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮ ಪುತ್ರಿ ಶೋಭಾ, ಸಹೋದರಿ ಹಾಗೂ ಅವರ ಮಗನ ಮೇಲೆ ಅನುಮಾನ ಇರುವುದಾಗಿಯೂ ರಾಜು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ನಿಟ್ಟಿನಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಶೋಭಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಂದೆ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದನ್ನು ಒಪ್ಪಿಕೊಂಡಿದ್ದರು. ಆರೋಪಿ ಹಂತಹಂತವಾಗಿ ಕಳವು ಮಾಡಿದ್ದ 21 ಲಕ್ಷ ರೂ. ಮೌಲ್ಯದ 258 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್ ಚಾಲಕನಾಗಿರುವ ಗಂಡನ ದುಡಿಮೆ ಸಂಸಾರದ ಖರ್ಚುಗಳಿಗೆ ಸಾಕಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಹೆತ್ತವರ ಮನೆಯಲ್ಲಿ ಆಭರಣಗಳನ್ನು ಕಳವು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾರೆ ಹೇಳಿದರು ಎಂದು ಪೊಲೀಸರು