Home Crime Chikkamagaluru: ಕಾಫಿನಾಡಲ್ಲಿ ಬೀದಿನಾಯಿ ಜೊತೆ ಕಾಮುಕನ ಲೈಂಗಿಕ ಕ್ರಿಯೆ

Chikkamagaluru: ಕಾಫಿನಾಡಲ್ಲಿ ಬೀದಿನಾಯಿ ಜೊತೆ ಕಾಮುಕನ ಲೈಂಗಿಕ ಕ್ರಿಯೆ

Hindu neighbor gifts plot of land

Hindu neighbour gifts land to Muslim journalist

Chikkamagaluru: ಕಾಫಿನಾಡಿನಲ್ಲಿ ಬೀದಿ ನಾಯಿ ಜೊತೆ ವ್ಯಕ್ತಿಯೋರ್ವ ಲೈಂಗಿಕ ಕ್ರಿಯೆ ನಡೆಸುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ. ಈ ದುರ್ಘಟನೆ ನಡೆದಿರುವುದು ಕೊಪ್ಪ ತಾಲೂಕಿನ ಜಯಪುರದಲ್ಲಿ.

ಅ.18 ರಂದು ಈ ಘಟನೆ ನಡೆದಿದೆ. ಜಯಪುರ ಬಸ್‌ ನಿಲ್ದಾಣದಲ್ಲಿ ಶಿವರಾಜ್‌ ಎಂಬ ಆರೋಪಿ ಈ ಹೀನಾಯ ಕೃತ್ಯ ಮಾಡಿದ್ದಾನೆ. ನವೆಂಬರ್‌ 9 ರಂದು ಜಯಪುರ ಠಾಣೆಯಲ್ಲಿ ಸುಮೋಟೋ ಕೇಸ್‌ ಶಿವರಾಜ್‌ ಮೇಲೆ ದಾಖಲಿಸಲಾಗಿದೆ. ಪೊಲೀಸರು ಶಿವರಾಜ್‌ನನ್ನು ವಿಚಾರಣೆ ಮಾಡುತ್ತಿದ್ದು, ಈ ಕುರಿತು ಠಾಣಾ ಪಿಸಿ ಅವರು ದೂರು ನೀಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಯನ್ನು ಹಿಡಿದು ಅದರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದು, ನಾಯಿಗೆ ತೊಂದರೆ ನೀಡುತ್ತಿದ್ದು, ಪ್ರಾಣಿ ಹಿಂಸೆ ಮಾಡುತ್ತಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವೀಡಿಯೋ ಬಸ್‌ ನಿಲ್ದಾಣದಲ್ಲಿರುವ ಜಯಪುರ ಎಂಟರ್‌ಪ್ರೈಸಸ್‌ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅ.10 ರಂದು ಬೆಳಗ್ಗೆ 4 ನಾಲ್ಕು ಗಂಟೆಯ ಸುಮಾರಿಗೆ ಜಯಪುರ ಪಟ್ಟಣದ ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಕುಳಿತು ಬೀದಿ ನಾಯಿಯ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಈ ವೀಡಿಯೋ ತೋರಿಸಿ ವ್ಯಕ್ತಿ ಯಾರು ಎಂದು ಅಂಗಡಿಯ ಮಾಲೀಕ ಪ್ರಶ್ನೆ ಮಾಡಿದ್ದು, ಇದು ಕಟ್ಟೆ ಮನೆ ಶಿವರಾಜ ಎಂದು ಹೇಳಿದ್ದ ಎಂದು ಎಫ್‌ಐಆರ್‌ನಲ್ಲಿ ಬರೆಯಲಾಗಿದೆ.

ಈತನ ವಿರುದ್ಧ ಬೀದಿ ನಾಯಿಗಳ ಜೊತೆ ಅಸಭ್ಯ ವರ್ತನೆ, ಸಾರ್ವಜನಿಕರಿಗೆ ಸಮಸ್ಯೆ ಮಾಡುವ ಕುರಿತು ಕಾನೂನು ಕ್ರಮ ಜರುಗಿಸಲು ಒತ್ತಾಯ ಮಾಡಲಾಗಿದೆ.