Home Crime ಧಮ್ಕಿ ಆರೋಪಿ ರಾಜೀವ್‌ ಗೌಡಗೆ ಬಿಗ್‌ ರಿಲೀಫ್‌, ಜಾಮೀನು ಮಂಜೂರು

ಧಮ್ಕಿ ಆರೋಪಿ ರಾಜೀವ್‌ ಗೌಡಗೆ ಬಿಗ್‌ ರಿಲೀಫ್‌, ಜಾಮೀನು ಮಂಜೂರು

Hindu neighbor gifts plot of land

Hindu neighbour gifts land to Muslim journalist

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅವಾಚ್ಯ ಶಬ್ದಗಳ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ರಾಜೀವ್‌ ಗೌಡಗೆ ಜಾಮೀನು ದೊರಕಿದೆ.

ಮಂಗಳೂರಿನಲ್ಲಿ ಸ್ಥಳ ಮಹಜರು ಮುಗಿಸಿ ಇಂದು (ಜ.30) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆ ಶಿಡ್ಲಘಟ್ಟದ ಜೆಎಂಎಫ್‌ಸಿ ಕೋರ್ಟ್‌ ರಾಜೀವ್‌ ಗೌಡನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಪೊಲೀಸರ ತನಿಖೆಗೆ ಸಹಕರಿಸಲು ಸೂಚನೆ, ಜೊತೆಗೆ 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್‌ ನೀಡಲು ಹೇಳಿದೆ. ಅಲ್ಲದೇ ಜಾಮೀನು ಸಿಕ್ಕ ಖುಷಿಯಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡದಂತೆ ಜಡ್ಜ್‌ ತಾಕೀತು ಮಾಡಿದ್ದಾರೆ.