Home Crime Belthangady: ಉಜಿರೆಯ ಧರ್ಮಸ್ಥಳ ಕ್ರೀಡಾ ವಸತಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆ

Belthangady: ಉಜಿರೆಯ ಧರ್ಮಸ್ಥಳ ಕ್ರೀಡಾ ವಸತಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆ

Belthangady

Hindu neighbor gifts plot of land

Hindu neighbour gifts land to Muslim journalist

Belthangady: ಉಜಿರೆಯ ಧರ್ಮಸ್ಥಳ ಕ್ರೀಡಾ ವಸತಿ ನಿಲಯದಿಂದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಕ್ರೀಡಾ ವಸತಿ ನಿಲಯದ ವಾರ್ಡನ್‌ ಮೋಹಿನಿ ಎಂಬುವವರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Fridge ಖರೀದಿಸುವವರಿಗೆ ಗುಡ್ ನ್ಯೂಸ್! ಈ ಸೂಪರ್ ಆಫರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ

ದಿವ್ಯಾ ಎಂಬಾಕೆಯ ನಾಪತ್ತೆಯಾದ ವಿದ್ಯಾರ್ಥಿನಿ. ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈಕೆ ಶ್ರೀ ಧರ್ಮಸ್ಥಲ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಇದನ್ನೂ ಓದಿ: Sticker On Fruits: ಹಣ್ಣುಗಳ ಮೇಲೆ ಯಾವ ಸ್ಟಿಕ್ಕರ್ ಯಾಕೆ ಹಾಕೋದು ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್!

ಹಾಸನ ಜಿಲ್ಲೆ ಬೇಲೂರಿನ ದಿವ್ಯಾ 29.05.2024 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕ್ರೀಡಾಂಗಣಕ್ಕೆ ಹೋಗಿ ಬರುತ್ತೇನೆಂದು ವಾರ್ಡನ್‌ ಹತ್ತಿರ ಹೇಳಿ ಅನುಮತಿ ಪಡೆದು ಹೋಗಿದ್ದಳು. ಆದರೆ ಅನಂತರ ವಾಪಸ್‌ ಬರದೇ ಕಾಲೇಜು, ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ.

ಈಕೆಯ ಕುರಿತು ಯಾವುದೇ ಮಾಹಿತಿ ದೊರಕದ ಕಾರಣ ಇದೀಗ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.