

Ricky Rai: ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ನಡೆದಿರುವ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುಷ್ಕರ್ಮಿಗಳು ಸ್ಥಳದಲ್ಲಿಯೇ ಬೇಸಿಕ್ ಮೊಬೈಲ್ ಸೆಟ್ ಬಿಟ್ಟು ಹೋಗಿದ್ದಾರೆ. ಸಿಮ್ ಇಲ್ಲದ ಈ ಮೊಬೈಲ್ ಕುರಿತು ಕೆಲವೊಂದು ವಿಷಯ ಬೆಳಕಿಗೆ ಬಂದಿದೆ.
ಶೂಟರ್ಸ್‌ಗಳು ಗುಂಡಿನ ದಾಳಿಗೆ ಸಿಮ್ ಕಾರ್ಡ್ ಇಲ್ಲದ ಮೊಬೈಲನ್ನು ಬಳಸಿದ್ದು, ಶಾರ್ಪ್ ಶೂಟರ್‌ಗಳ ಈ ಪ್ಲಾನ್‌ಗೆ ರಾಮನಗರ ಪೊಲೀಸರು ಶಾಕ್‌ಗೊಳಗಾಗಿದ್ದಾರೆ. ತಡರಾತ್ರಿ ಕತ್ತಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಲು ಕಾದು ಕುಳಿತಿದ್ದ ಶೂಟರ್‌ಗಳು ಈ ಸಿಮ್ ಇಲ್ಲ ಮೊಬೈಲ್ ಮೂಲಕ ಕತ್ತೆಯಲ್ಲಿ ಟಾರ್ಚ್‌ಗೆ ಬಳಕೆ ಮಾಡಿದ್ದಾರೆ. ಬೇಸಿಕ್ ಮೊಬೈಲ್ ಶೂಟ್ ಮಾಡಿದ ಸ್ಥಳವನ್ನು ಮಹಜರು ಮಾಡಿದ ಪೊಲೀಸರಿಗೆ ನಿನ್ನೆ ದೊರಕಿತ್ತು.
ಇದರ ಜೊತೆಗೆ ರಿಕ್ಕಿ ರೈ ಮೇಲೆ ಫೈರಿಂಗ್‌ಗೆಂದು ಬಳಸಿದ ಗನ್‌ನ ಗುರುತು ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಟ್ವೆಲ್ ಬೋರ್ ಗನ್ ಬಳಸಿರುವ ಕುರಿತು ವರದಿಯಾಗಿದೆ. ಸ್ಥಳದಲ್ಲಿ ಸಿಕ್ಕ ಕಾಟ್ರೆಡ್ಜ್, ಗುಂಡುಗಳ ಪರಿಶೀಲನೆ ಮೂಲಕ ಫೈರಿಂಗ್ ಟ್ವೆಲ್ (12) ಬೋರ್ ಶಾರ್ಟ್ ಗನ್ ಬಳಕೆ ಮಾಡಿದ್ದಾರೆ ಎಂದು ವರದಿಯಾಗಿದೆ.













