Home Crime Ajekar: ಮೃತ ಬಾಲಕೃಷ್ಣನ ಆತ್ಮವೇ ಸತ್ಯ ಬಯಲಿಗೆಳೆದಿದೆಯೇ? ನಡೆಯುತ್ತಿದೆ ಭಾರೀ ಚರ್ಚೆ

Ajekar: ಮೃತ ಬಾಲಕೃಷ್ಣನ ಆತ್ಮವೇ ಸತ್ಯ ಬಯಲಿಗೆಳೆದಿದೆಯೇ? ನಡೆಯುತ್ತಿದೆ ಭಾರೀ ಚರ್ಚೆ

Hindu neighbor gifts plot of land

Hindu neighbour gifts land to Muslim journalist

Ajekar: ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌ವೊಂದು ದೊರಕಿದೆ. ಅದೇನೆಂದರೆ ಆತ್ಮ ಶುದ್ಧೀಕರಣ ವೇಳೆ ಸತ್ಯ ಹೊರಗೆ ಬಂದಿದೆ ಎನ್ನಲಾಗಿದೆ. ಮೃತ ಬಾಲಕೃಷ್ಣ ಆತ್ಮ ಸಂಬಂಧಿ ದೇಹವನ್ನು ಒಳ ಹೊಕ್ಕಿದೆ ಎನ್ನುವ ಚರ್ಚೆ ಆಗುತ್ತಿದೆ. ಆತ್ಮವೇ ಸತ್ಯ ಬಯಲಿಗೆಳೆದಿದ್ದು ಆತ್ಮ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಬಾಲಕೃಷ್ಣ ಅವರ ಆತ್ಮವೇ ಸತ್ಯ ಬಾಯಿ ಬಿಡಿಸಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹೆಂಡತಿಯ ಬಾಯಿಯಲ್ಲಿ ಸತ್ಯ ನುಡಿಸಿದೆ ಎಂಬ ಚರ್ಚೆ ಭಾರೀ ಜೋರಾಗಿದೆ. ಬಾಲಕೃಷ್ಣ ಅವರು ಸತ್ತ ದಿನವೇ ಪೋಸ್ಟ್‌ಮಾರ್ಟಂ ಮಾಡಲು ಹೇಳಲಾಗಿತ್ತು. ಬಾಲಕೃಷ್ಣ ಅವರ ಮರಣದ ಐದು ದಿನದ ನಂತರ ಧೂಳಪ್ಪ ಎಂಬ ಕಾರ್ಯಕ್ರಮ ನಡೆಯುತ್ತದೆ. ಆ ಸಮಯದಲ್ಲಿ ಗ್ರಾಮಸ್ಥರು, ಕುಟುಂಬಸ್ಥರು ಸೇರಿದ ಸಂದರ್ಭದಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಾ, ಎರಡು ಗಂಟೆಯೊಳಗೆ ನಮಗೆ ಸತ್ಯ ಗೊತ್ತಾಗಲೇ ಬೇಕು ಎಂದು ಹೇಳುತ್ತಾರೆ.

ಕೂಡಲೇ ಆ ಸಮಯದಲ್ಲಿ ಆರೋಪಿ ಪ್ರತಿಮಾ ಅವರ ತಂಗಿ ಮನೆಯೊಳಗೆ ಹೋಗಿ, ನಿಜ ಹೇಳು, ನೀನು ಏನು ಮಾಡಿದ್ದೀ? ಎಂದು ಕೇಳಿದಾಗ, ಮೊದಲಿಗೆ ಅಲ್ಲಗೆಳೆದ ಪ್ರತಿಮಾ ನಂತರ ಒಮ್ಮೆಲೇ ಅವನು (ದಿಲೀಪ್‌) ಬಂದು ಕೊಲೆ ಮಾಡಿ ಹೋಗಿದ್ದು, ನನ್ನದು ತಪ್ಪಾಯಿತು, ಕ್ಷಮಿಸು ಎಂದು ಅಳುತ್ತಾ ಹೇಳಿದಾಗ, ಇದನ್ನೆಲ್ಲ ಅಣ್ಣನ ಬಳಿ ವಿವರವಾಗಿ ಹೇಳು ಎಂದು ಹೇಳಿದಾಗ, ಆಕೆ ಮನೆಯ ರೂಂ ಗೆ ಹೋಗಿ ಬಾಗಿಲು ಹಾಕಿ ಅಣ್ಣ ಸಂದೀಪ್‌ ಬಳಿ ಬಾಲಕೃಷ್ಣ ಮೃತ ಹೊಂದಿದ ರಾತ್ರಿ ನಡೆದ ಎಲ್ಲಾ ಘಟನೆಯನ್ನು ಹೇಳಿ, ತನ್ನನ್ನು ರಕ್ಷಿಸು, ತನ್ನ ತಪ್ಪೇನಿಲ್ಲ ಎಂದು ಹೇಳಿದ್ದಾಳೆ.

ಈ ಮೂಲಕ ಬಾಲಕೃಷ್ಣ ಮೃತ ಹೊಂದಿದ ಐದು ದಿನಕ್ಕೆ ಸತ್ಯ ಬಾಯಿ ಬಿಟ್ಟಿದ್ದಾಳೆ ಪ್ರತಿಮಾ. ಹೀಗಾಗಿ ಗ್ರಾಮಸ್ಥರು ಇದು ಬಾಲಕೃಷ್ಣನ ಆತ್ಮವೇ ಈ ಮೂಲಕ ಸತ್ಯ ಹೊರಗೆ ಬರುವ ಹಾಗೆ ಮಾಡಿದೆ ಎಂದು ಚರ್ಚೆ ಮಾಡುತ್ತಿದ್ದಾರೆ.

“ಪ್ರತಿಮಾಳೇ ಪಾಯಿಸನ್‌ ಹಾಕಿ ಕೊಂದದ್ದು ಎಂಬ ಬಲವಾದ ನಂಬಿಕೆ ನಮಗೆ ಇತ್ತು, ಆತ (ದಿಲೀಪ್)‌ ಕೂಡಾ ಬಂದು ಕೊಲೆ ಮಾಡಿದ್ದಾನೆ ಎನ್ನುವ ಸಂಶಯ ಕೂಡಾ ನಮಗೆ ಇರಲಿಲ್ಲ. ಆದರೆ ಇದೀಗ ಎಲ್ಲಾ ಸತ್ಯ ಹೊರಗೆ ಬಂದಿದೆ” ಎನ್ನುವ ಮಾತು ಬಾಲಕೃಷ್ಣ ಅವರ ಸ್ನೇಹಿತರು ಮಾಧ್ಯಮಕ್ಕೆ ಹೇಳಿದ್ದಾರೆ.