Home Crime Maharastra : ಕ್ಯಾನ್ಸರ್ ಚಿಕಿತ್ಸೆಗೆ ಬಂದಿದ್ದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ಬಾಲಕಿ...

Maharastra : ಕ್ಯಾನ್ಸರ್ ಚಿಕಿತ್ಸೆಗೆ ಬಂದಿದ್ದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ಬಾಲಕಿ ಗರ್ಭಿಣಿ, ಕಾಮುಕ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

Maharastra : ಕ್ಯಾನ್ಸರ್ ಚಿಕಿತ್ಸೆಗೆಂದು ಬಿಹಾರದಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಹಾಯದ ನೆಪದಲ್ಲಿ ಕಮುಕಾನೋರ್ವ ಅತ್ಯಾಚಾರ ಎಸಗಿ, ಅವಳು ಗರ್ಭವಾತಿ ಆಗುವ ಹಾಗೆ ಮಾಡಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಬಿಹಾರ ಮೂಲದ 13 ವರ್ಷದ ಬಾಲಕಿ ಕ್ಯಾನ್ಸರ್ ಚಿಕಿತ್ಸೆಗೆಂದು ಮಹಾರಾಷ್ಟ್ರಕ್ಕೆ ಬಂದಿದ್ದಳು. ಬಿಹಾರದ ಬಾಲಕಿಯ ಹಳ್ಲಿಯಿಂದಲೇ ಬಂದಿದ್ದ ಆರೋಪಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಬದ್ಲಾಪುರದಲ್ಲಿ ಬಾಲಕಿ ಹಾಗೂ ಕುಟುಂಬ ವಾಸಿಸಲು ಒಂದು ಮನೆಯನ್ನು ಬಾಡಿಗೆ ಪಡೆದಿದ್ದ.

ಮೊದಲೇ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ ಬಾಲಕಿಯ ಮೇಲೆ ಮೂರು ಬಾರಿ ಅತ್ಯಾಚಾರವೆಸಾಗಿದ್ದಾನೆ. ಈ ಬಗ್ಗೆ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ. ಇತ್ತ ಬಾಲಕಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಿಮೋ ಥೆರಪಿಗೆ ಚಿಕಿತ್ಸೆ ಪಡೆಯುತ್ತಿರುವಾಗ ಬಾಲಕಿ ಗರ್ಭಿಣಿ ಎಂಬುವುದು ಗೊತ್ತಾಗಿದೆ. ಕೂಡಲೇ ವೈದ್ಯರು ಬಾಲಕಿಯ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ.

ಸದ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.