

IPL 2024: ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜೇಂದ್ರ ಚಹಾಲ್ ಐಪಿಎಲ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ಇದೀಗ ಚಹಾಲ್ ನಿರ್ಮಿಸಿದ್ದಾರೆ. ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ವಿಕೆಟ್ ಪಡೆಯುವ ಮೂಲಕ ಯುಜೇಂದ್ರ ಚಹಾಲ್ ಈ ಸಾಧನೆ ಮಾಡಿದ್ದಾರೆ. ಯುಜುವೇಂದ್ರ ಚಹಾಲ್ 2013ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದು, ಅವರು ತಮ್ಮ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್‌ಗಾಗಿ ಆಡಿದ್ದರು. ಇದೀಗ, ಅವರು ಅದೇ ತಂಡದ ವಿರುದ್ಧದ ಪಂದ್ಯದಲ್ಲಿ 200 ವಿಕೆಟ್ ಗಳನ್ನು ಪಡೆದ ಮೊದಲ ಬೌಲರ್ ಆಗಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: Vastu Tips : ಒಲೆಯ ಮೇಲಿನ ಹಾಲು ಯಾವ ಕಡೆ ಉಕ್ಕಿ ಹರಿದರೆ ಒಳ್ಳೆಯದು ಗೊತ್ತಾ? : ನೀವು ಇದನ್ನು ತಿಳಿಯಲೇ ಬೇಕು
ಇನ್ನು ಇದಕ್ಕೂ ಮುಂಚೆ ಇಬ್ಬರು ಬೌಲರ್‌ಗಳು ಟಿ20 ಕ್ರಿಕೆಟ್‌ನಲ್ಲಿ ಚಹಾಲ್‌ಗಿಂತ ಮೊದಲು 200 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ಟಿ20 ಬ್ಲಾಸ್ಟ್‌ನಲ್ಲಿ ಡ್ಯಾನಿ ಬ್ರಿಗ್ಸ್ (219 ವಿಕೆಟ್) ಮತ್ತು ಸಮಿತ್ ಪಟೇಲ್ (208 ವಿಕೆಟ್) ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: Sri Ram Photo: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್ ಬಿರಿಯಾನಿ ನೀಡಿದ ಅಂಗಡಿ ಮಾಲೀಕ
ಯುಜುವೇಂದ್ರ ಚಹಾಲ್ ಮುಂಬೈ ಇಂಡಿಯನ್ಸ್‌ಗೆ ಪದಾರ್ಪಣೆ ಮಾಡಿದರೂ ಆ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆ ತಂಡದ ಪರ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಬಳಿಕ ಅವರು 2014 ರಿಂದ 2021 ರವರೆಗೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಚಹಲ್. ಆ ತಂಡದ ಪರ ಗರಿಷ್ಠ 139 ವಿಕೆಟ್‌ಗಳನ್ನು ಕಬಳಿಸಿದ್ದರು. RCB ತೊರೆದ ನಂತರ, ಅವರು 2022 ರಲ್ಲಿ ರಾಜಸ್ಥಾನ ರಾಯಲ್ಸ್ಗೆ ತೆರಳಿ ಆ ತಂಡದ ಪರ 61 ವಿಕೆಟ್ ಕಬಳಿಸಿದರು.
ಆರ್ ಪಿ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 50 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. 2010ರ ಋತುವಿನಲ್ಲಿ ಅವರು ಈ ಸಾಧನೆ ಮಾಡಿದ್ದರು. ಲಸಿತ್ ಮಾಲಿಂಗ (2013) 100 ವಿಕೆಟ್ ಮತ್ತು 150 ವಿಕೆಟ್ ಪಡೆದ ಮೊದಲ ಬೌಲರ್ (2017), ಯುಜೇಂದ್ರ ಚಹಾಲ್ 200 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 33 ವರ್ಷದ ಚಹಾಲ್ ಇದುವರೆಗೆ 153 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದು.. ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಮುನ್ನಡೆಯಲ್ಲಿದ್ದಾರೆ.













