Home Breaking Entertainment News Kannada Actor Ashish Vidyarthi Marriage: ನಟ ಆಶಿಶ್ ವಿದ್ಯಾರ್ಥಿಯ ಎರಡನೇ ಮದುವೆ ಬಗ್ಗೆ ಮೊದಲ ಹೆಂಡತಿಯ...

Actor Ashish Vidyarthi Marriage: ನಟ ಆಶಿಶ್ ವಿದ್ಯಾರ್ಥಿಯ ಎರಡನೇ ಮದುವೆ ಬಗ್ಗೆ ಮೊದಲ ಹೆಂಡತಿಯ ಮಗ ಕೊನೆಗೂ ನೀಡಿದ ತನ್ನ ಪ್ರತಿಕ್ರಿಯೆ!

Actor Ashish Vidyarthi
image Source: times of india

Hindu neighbor gifts plot of land

Hindu neighbour gifts land to Muslim journalist

Actor Ashish Vidyarthi: ಕನ್ನಡ ಮಾತ್ರವಲ್ಲದೇ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (Actor Ashish Vidyarthi) ಅವರು ತಮ್ಮ 60 ನೇ ವಯಸ್ಸಿಗೆ 2ನೇ ಮದುವೆಯಾಗಿ ಸಿನಿ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಜೊತೆ ನಟ ಆಶಿಶ್ ವಿದ್ಯಾರ್ಥಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ಸಾಕಷ್ಟು ವರ್ಷಗಳ ಹಿಂದೆಯೇ ಆಶಿಶ್-ರಾಜೋಶಿ ಬಿರುಕು ಮೂಡಿತ್ತು. ಆನಂತರ ಮೊದಲನೇ ಪತ್ನಿಗೆ ಡೈವೋರ್ಸ್​ ಕೊಟ್ಟು ಆಶಿಷ್ ವಿದ್ಯಾರ್ಥಿ ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರೂಪಾಲಿ ಜೊತೆಗೆ ಎರಡನೇ ಮದುವೆಯಾಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿ ಪುತ್ರ ಅರ್ಥ್‌ನ ಪ್ರತಿಕ್ರಿಯೆ ಏನು ಗೊತ್ತಾ?

ಆಶಿಷ್ ಹಾಗೂ ರಾಜೋಶಿ ಇಷ್ಟವಿದ್ದೇ ಡಿವೋರ್ಸ್ ತೆಗೆದುಕೊಂಡಿದ್ದಾರೆ. ದಾಂಪತ್ಯ ಜೀವನ ಜೀವನ ಮುಂದುವರಿಸಲು ಆಗದೇ ಇದ್ದಾಗ ಇವರು ವಿಚ್ಚೇದನ ಪಡೆದರು.ಆದರೆ, ಇವರಿಬ್ಬರ ಈ ನಿರ್ಧಾರ ಮಗನಾದ ಅರ್ಥ್‌ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬುದು ನಟನಿಗೆ ತಿಳಿದಿತ್ತು. ಹಾಗಾಗಿ ಈ ವಿಚಾರವಾಗಿ ಮಗನಿಗೆ ಅರ್ಥೈಸಲು ಪ್ರಯತ್ನಿಸಿದರು.

ಗಂಡ-ಹೆಂಡತಿಯಲ್ಲಿ ಭಿನ್ನಾಭಿಪ್ರಾಯ, ಜಗಳಗಳು ಉಂಟಾದಾಗ ಮೊದಲು ಪರಿಣಾಮ ಬೀರುವುದು ಮಕ್ಕಳ ಮೇಲೆ. ಅವರ ಮನಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳ ಯೋಚಾನಾ ಶೈಲಿಯೇ ಬದಲಾಗಬಹುದು. ಹಾಗಾಗಿಯೇ ತಮ್ಮ ಡಿವೋರ್ಸ್ ಬಗ್ಗೆ, ಎರಡನೇ ಮದುವೆ ಬಗ್ಗೆ ಮಗ ಅರ್ಥ್‌ಗೆ ತಿಳಿಹೇಳುವುದು ದೊಡ್ಡ ಸವಾಲಿನ ಕೆಲಸವಾಗಿತ್ತು ಎಂದು ಆಶಿಷ್ ಹೇಳುತ್ತಾರೆ.

ಅರ್ಥ್ ವಯಸ್ಕ ಹುಡುಗ. ಹಾಗೂ ಆತನಿಗೂ ಸಂಬಂಧಗಳ ಆಳ ಹಾಗೂ ಮಹತ್ವತೆಯ ಬಗ್ಗೆ ಅರಿವಿದೆ. ಹಾಗಾಗಿ ತನ್ನ ತಂದೆ -ತಾಯಿಯ ನಿರ್ಧಾರಗಳನ್ನು ಗೌರವಿಸಿದ್ದಾನೆ. ನಿರ್ಧಾರದ ಹಿಂದಿನ ವಿಚಾರಗಳನ್ನು ಅರ್ಥೈಸಿಕೊಂಡಿದ್ದಾನೆ. ಒಂದು ಸಮಸ್ಯೆ ಇಬ್ಬರಿಗೂ ನೋವು ಕೊಡುತ್ತದೆ ಎಂದಾದರೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು ಎಂದು ಅರ್ಥ್ ಹೇಳಿದ್ದಾನೆ. ಈ ಮೂಲಕ ಆತ ಒಬ್ಬ ಜವಾಬ್ದಾರಿಯುತ ಪುತ್ರ ಎಂಬುದನ್ನು ನೆನಪಿಸಿದೆ ಎಂದು ಆಶಿಶ್ ಹೇಳಿದರು.

ನಟ ಆಶಿಶ್ ಖಳ ನಟನಾಗಿ ಜನಮೆಚ್ಚುಗೆ ಪಡೆದು ನೂರಾರು ಚಿತ್ರಗಳಲ್ಲಿ ಪೋಷಕ ನಟನಾಗಿ ತಮ್ಮ ಖದರ್ ಮತ್ತು ಪ್ರತಿಭೆ ತೋರಿಸಿದ ಆಶಿಶ್ ವಿದ್ಯಾರ್ಥಿ ಅವರು ‘ದ್ರೋಕಾಲ್’ ಎಂಬ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಈಗ ಅವರು ಹಲವು ನಗರಗಳಿಗೆ ತೆರಳಿ ವ್ಲಾಗಿಂಗ್ ಮಾಡುತ್ತಿದ್ದಾರೆ.

 

ಇದನ್ನು ಓದಿ: Vastu Tips: ನಿಮ್ಮ ಮನೆಯ ಡೈನಿಂಗ್ ಹಾಲ್, ಜೊತೆಗೆ ಟೇಬಲ್, ಕಲರ್ ಈ ರೀತಿ ಇದ್ದರೆ ಉತ್ತಮ!