Home Breaking Entertainment News Kannada Actress Niharika Konidela: ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ‘ಪುಷ್ಪ 2’ ಸಿನಿಮಾಗೆ ಎಂಟ್ರಿ ; ನಿಹಾರಿಕಾ...

Actress Niharika Konidela: ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ‘ಪುಷ್ಪ 2’ ಸಿನಿಮಾಗೆ ಎಂಟ್ರಿ ; ನಿಹಾರಿಕಾ ಕೊನಿಡೆಲಾ ಪಾತ್ರ ಯಾವುದು?

Actress Niharika Konidela
Source: vistara news

Hindu neighbor gifts plot of land

Hindu neighbour gifts land to Muslim journalist

Actress Niharika Konidela: ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ (Actress Niharika Konidela) ಚೈತನ್ಯ ಅವರನ್ನು ಪ್ರೀತಿಸಿ, 2020ರಲ್ಲಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಈ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿತ್ತು. ಡಿವೋರ್ಸ್ ಸುದ್ದಿ ಬೆನ್ನಲ್ಲೇ ಇದೀಗ ನಿಹಾರಿಕಾ ‘ಪುಷ್ಪ 2’ (pushpa-2) ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (rashmika mandanna) ನಟನೆಯ ಪುಷ್ಪ (pushpa) ಚಿತ್ರ ಎಲ್ಲೆಡೆ ಜನಪ್ರಿಯತೆ ಗಳಿಸಿದೆ. ಸಖತ್ ಹಿಟ್ ಆಗಿದ್ದು, ಜನರು ಸಿನಿಮಾವನ್ನು ಮೆಚ್ಚಿ, ಇದೀಗ Pushpa 2 ಕೂಡ ತೆರೆ ಮೇಲೆ ಬರಲು ಸಜ್ಜಾಗಿದೆ. Pushpa 2 ಚಿತ್ರಕ್ಕೆ ನಿಹಾರಿಕಾ ಕೊನಿಡೆಲಾ ಎಂಟ್ರಿ ಕೊಟ್ಟಿದ್ದಾರೆ. ಯಾವ ಪಾತ್ರ ಗೊತ್ತಾ?

‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರ ಪತ್ನಿಯ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಈ ಪಾತ್ರಕ್ಕೆ ಸಾಯಿ ಪಲ್ಲವಿ (Sai pallavi) ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರು ಪಾತ್ರ ಮಾಡಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ನಿಹಾರಿಕ ʼಒಕ ಮನಸ್ಸುʼ ಹಾಗೂ ʼಹ್ಯಾಪಿ ವೆಡ್ಡಿಂಗ್‌ʼ ಸಿನಿಮಾದ ನಟನೆಯ ಮೂಲಕ ಖ್ಯಾತಿ ಪಡೆದಿದ್ದಾರೆ. ಚಿರಂಜೀವಿ ನಟನೆಯ ʼಸೈರಾ ನರಸಿಂಹ ರೆಡ್ಡಿʼ ಸಿನಿಮಾದಲ್ಲಿ ನಟಿಸಿದ್ದು, ‘ಸೂರ್ಯಕಾಂತಂ’, ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

 

ಇದನ್ನು ಓದಿ: Washing shoes: ನಿಮ್ಮ ಶೂಗಳನ್ನು ಹೀಗೆ ಈಸಿಯಾಗಿ ವಾಶ್​ ಮಾಡಿ!