

Tirthanand Rao: ಕಪಿಲ್ ಶರ್ಮಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ತೀರ್ಥಾನಂದ್ ರಾವ್ (Tirthanand Rao) ಅವರು ಕಾಮಿಡಿ ಸರ್ಕಸ್ ಕೆ ಅಜೂಬೆʼ ಶೋನಲ್ಲಿ (Comedy Circus Ke Ajoobe) ನಮಗೆಲ್ಲರಿಗೂ ಚಿರಪರಿಚಿತ. ಇದೀಗ ತೀರ್ಥಾನಂದ ರಾವ್ ಅವರು ಜನತೆಗೆ ಬಿಗ್ ಶಾಕ್ ನೀಡಿದ್ದಾರೆ.
ಹೌದು, ಫೇಸ್‌ಬುಕ್ ಲೈವ್‌ಗೆ ಬಂದು ತೀರ್ಥಾನಂದ ವಿಷ ಕುಡಿದಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್ ಮೂಲಕ ಲೈವ್ ವಿಡಿಯೊದಲ್ಲಿ, ತೀರ್ಥಾನಂದ ರಾವ್ ತಮ್ಮ ಈ ಸ್ಥಿತಿಗೆ ಒಬ್ಬ ಮಹಿಳೆಯೇ ಕಾರಣ ಎಂದು ಆರೋಪಿಸಿದ್ದಾರೆ.
ತೀರ್ಥಾನಂದ ಅವರು ಫೇಸ್‌ಬುಕ್ ಲೈವ್‌ನಲ್ಲಿ, ಮಹಿಳೆಯೊಂದಿಗೆ “ಲಿವ್-ಇನ್” ರಿಲೇಶನ್‌ಶಿಪ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಆಕೆ ವಿಪರೀತ ಹಣ ಕೀಳುತ್ತಿರುವುದಾಗಿ, ಬ್ಲ್ಯಾಕ್ಮೇಲ್ ಮಾಡುತ್ತಿರುವ ಬಗ್ಗೆ, ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.
ತೀರ್ಥಾನಂದ್ ರಾವ್ ಈ ಬಗ್ಗೆ ಮಾತನಾಡಿ ‘.ಕಳೆದ ವರ್ಷ ಅಕ್ಟೋಬರ್‌ನಿಂದ ಒಬ್ಬ ಮಹಿಳೆಯ ಪರಿಚಯವಾಯಿತು. ಈ ಮಹಿಳೆಯಿಂದಾಗಿ ನಾನು 3-4 ಲಕ್ಷ ರೂ. ಸಾಲದಲ್ಲಿದ್ದೇನೆ. ಆಕೆ ನನ್ನ ವಿರುದ್ಧ ಭಾಯಂದರ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಅದು ಯಾವ ಕಾರಣಕ್ಕಾಗಿ ಎಂದು ನನಗೆ ತಿಳಿದಿಲ್ಲ. ನಂತರ ಆಕೆಯೂ ನನಗೆ ಕರೆ ಮಾಡಿ ಭೇಟಿಯಾಗಬೇಕೆಂದು ಹೇಳುತ್ತಿದ್ದಳು” ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲಾ ಘಟನಾ ಹಿನ್ನೆಲೆ ಬಳಿಕ ತೀರ್ಥಾನಂದ ರಾವ್ ವಿಷದ ಬಾಟಲಿ ತೆಗೆದುಕೊಂಡು ಕುಡಿದ್ದಾರೆ.
ಸದ್ಯ ಲೈವ್ ವಿಡಿಯೊವನ್ನು ನೋಡಿದ ಅವರ ಸ್ನೇಹಿತರು ತಕ್ಷಣವೇ ಅವರ ಮನೆಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ನಟ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ರೀತಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಇದೇ ಮೊದಲೇನೂ ಅಲ್ಲ. ಮೊದಲ ಘಟನೆಯು 2021 ಡಿಸೆಂಬರ್ 27ರಂದು ನಡೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ: Pratap Simha: ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಜೊತೆ ಡಬಲ್ ಗೇಮ್: ಪ್ರತಾಪ್ ಸಿಂಹ ಆರೋಪ!













