Home Breaking Entertainment News Kannada ಕರ್ನಾಟಕದ ಯುವಕರಿಗೆ ಧನ್ಯವಾದ ಸಲ್ಲಿಸಿ, ರಕ್ತದಾನಕ್ಕೆ ಮುಂದಾದ ಸನ್ನಿ!! ನಟಿಯ ಈ ನಿರ್ಧಾರಕ್ಕೆ ಕಾರಣವೇನು!??

ಕರ್ನಾಟಕದ ಯುವಕರಿಗೆ ಧನ್ಯವಾದ ಸಲ್ಲಿಸಿ, ರಕ್ತದಾನಕ್ಕೆ ಮುಂದಾದ ಸನ್ನಿ!! ನಟಿಯ ಈ ನಿರ್ಧಾರಕ್ಕೆ ಕಾರಣವೇನು!??

Hindu neighbor gifts plot of land

Hindu neighbour gifts land to Muslim journalist

ಮೇ 13 ರಂದು ಸಂಭ್ರಮದಿಂದ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನ ಮೋಹಕ ತಾರೆ, ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸನ್ನಿ ಲಿಯೋನ್ ಕರ್ನಾಟಕದ ಯುವಕರ ಕೆಲಸಕ್ಕೆ ಆಶ್ಚರ್ಯಗೊಂಡು, ಹೃದಯಂತರಾಳದಿಂದ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.

ಹೌದು. ಮಂಡ್ಯದ ಯುವಕರ ತಂಡವೊಂದು ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ವಿಶೇಷವಾಗಿ-ಅರ್ಥಪೂರ್ಣವಾಗಿ ಆಚರಿಸಿ ಸುದ್ದಿಯಾಗಿತ್ತು.’ಕೊಮ್ಮೇರಹಳ್ಳಿ ಸನ್ನಿ ಲಿಯೋನ್ ಅಭಿಮಾನಿ ಬಳಗವು’ ಹುಟ್ಟು ಹಬ್ಬದ ದಿನದಂದು ರಕ್ತದಾನ ಶಿಬಿರ ಹಾಗೂ ಉತ್ತಮ ಬಾಡೂಟದ ವ್ಯವಸ್ಥೆ ಮಾಡಿತ್ತು.ಈ ಸುದ್ದಿಯು ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು.

ಹೀಗೆ ಬಿತ್ತರವಾದ ಸುದ್ದಿ ಸನ್ನಿ ಲಿಯೋನ್ ರನ್ನೂ ತಲುಪಿದ್ದು, ಮೊದಲಿಗೆ ಯುವಕರ ಕೆಲಸವನ್ನು ಕಂಡು ಆಶ್ಚರ್ಯಗೊಂಡ ಅವರು ಬಳಿಕ ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖುಷಿ ಹಂಚಿಕೊಂಡರು. ಯುವಕರ ಕೆಲಸಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ತಾನೂ ರಕ್ತದಾನ ಮಾಡುತ್ತೇನೆ, ನಿಮ್ಮ ಕಾರ್ಯಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.