Home Breaking Entertainment News Kannada Guruprasad : ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ – 2ನೇ ಪತ್ನಿಯಿಂದ ಪೊಲೀಸರಿಗೆ ದೂರು, ದೂರಿನಲ್ಲಿ ಆ...

Guruprasad : ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ – 2ನೇ ಪತ್ನಿಯಿಂದ ಪೊಲೀಸರಿಗೆ ದೂರು, ದೂರಿನಲ್ಲಿ ಆ ಕಾರಣ ಬಹಿರಂಗ ?!

Hindu neighbor gifts plot of land

Hindu neighbour gifts land to Muslim journalist

Guruprasad : ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೀಗ ಅವರ ಎರಡನೇ ಪತ್ನಿ ಸುಮಿತ್ರಾ ಪೊಲೀಸರಿಗೆ ದೂರು ನೀಡಿ ದೂರಿನಲ್ಲಿ ಅವರ ಸಾವಿಗೆ ಕಾರಣ ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?
2020 ರಲ್ಲಿ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರನ್ನು ನಾನು ವಿವಾಹವಾದೆ. ನಮಗೆ ಮೂರೂವರೆ ವರ್ಷದ ಹೆಣ್ಣು ಮಗುವಿದೆ. ಈ ಹಿಂದೆ ಗುರುಪ್ರಸಾದ್‌ಗೆ ಆರತಿ ಜೊತೆ ಮದುವೆಯಾಗಿ ನಂತರ ಡಿವೋರ್ಸ್‌ ಆಗಿತ್ತು. ಮದುವೆಯಾದ ನಂತರ 4 ವರ್ಷಗಳ ಕಾಲ ಕನಕಪುರ ರಸ್ತೆಯಲ್ಲಿ ಎನ್.ಎ.ಪಿ.ಎ ವ್ಯಾಲಿ, ರಾಜರಾಜೇಶ್ವರಿ ನಗರದ ಈಸಿ ಡಿವೈನ್ ಬ್ಲಾಕ್ ಹಾಗೂ ಬಸವೇಶ್ವರನಗರದ ಬಾಲಾಜಿ ರೆಸಿಡೆನ್ಸಿಯಲ್ಲಿ ಜೀವನ ಸಾಗಿಸುತ್ತಿದ್ದೆವು. ನಂತರ ನಾನು ನನ್ನ ಯಜಮಾನರು 6 ತಿಂಗಳಿನಿಂದ ಮನೆ ಖಾಲಿ ಮಾಡಿಕೊಂಡು ಹುಸ್ಕೂರು ರಸ್ತೆಯಲ್ಲಿರುವ ನ್ಯೂ ಹೆವನ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದೆವು.

ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನಮ್ಮ ಯಜಮಾನರು ನನ್ನನ್ನು ತಾಯಿಯ ಮನೆಯಲ್ಲಿ ಇರಲು ಹೇಳಿ ಕಳುಹಿಸಿಕೊಟ್ಟರು. ಲೋಕಸಭೆ ಚುನಾವಣೆ ಸಮಯದಲ್ಲಿ ಕೊನೆಯ ಬಾರಿ ಸಿಕ್ಕಿದ್ದೆವು. ನಮ್ಮ ಯಜಮಾನರು ಚಲನಚಿತ್ರ ಕೆಲಸದಲ್ಲಿ ಬ್ಯೂಸಿ ಆಗಿದ್ದರಿಂದ ನಾನು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೆವು. ಅನಂತರ ದಿನಾಂಕ 25.10.2024ರಂದು ನಾನು ನನ್ನ ಯಜಮಾನರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು, ಅವರು ರಿಸೀವ್ ಮಾಡಲಿಲ್ಲ. ಅವರು ಬ್ಯೂಸಿ ಇರಬಹುದು ಎಂದು ಸುಮ್ಮನಾದನು.’

ಅಕ್ಕ ಪಕ್ಕದವರ ಸಹಾಯದಿಂದ ಮತ್ತು ಪೊಲೀಸರ ನೆರವಿನೊಂದಿಗೆ ಬಾಗಿಲನ್ನು ಮೀಟಿ ಒಳಗೆ ಹೋಗಿ ನೋಡಲಾಗಿ, ನನ್ನ ಗಂಡ ಗುರುಪ್ರಸಾದ್ ನೇಣು ಬಿಗಿದ ಸ್ಥಿತಿಯಲ್ಲಿ ಶರೀರವೆಲ್ಲಾ ಊದಿಕೊಂಡು ದುರ್ವಾಸನೆ ಬರುತ್ತಿತ್ತು. ನಮ್ಮ ಯಜಮಾನರು ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡಿದ್ದು, ಈ ವಿಚಾರ ತಿಳಿದಿದ್ದು, ನಾನು ನಮ್ಮ ಯಜಮಾನರಿಗೆ ತೀರಿಸೋಣವೆಂದು ಧೈರ್ಯ ಹೇಳಿದ್ದೆ. ಆದರೂ ನನ್ನ ಮಾತನ್ನು ಲೆಕ್ಕಿಸದೇ ನನ್ನ ಗಂಡ ಸಾಲದ ಭಾದೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಪೆಗೊಂಡು 3-4 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ನನ್ನ ಗಂಡನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ನಾನು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ’ ಎಂದು ಎರಡನೇ ಪತ್ನಿ ಸುಮಿತ್ರಾ ದೂರು ನೀಡಿದ್ದಾರೆ.