Home Breaking Entertainment News Kannada SIIMA 2025: ಅತ್ಯುತ್ತಮ ನಟ ಸೈಮಾ ಅವಾರ್ಡ್ ಗೆದ್ದ ಸುದೀಪ್, ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ...

SIIMA 2025: ಅತ್ಯುತ್ತಮ ನಟ ಸೈಮಾ ಅವಾರ್ಡ್ ಗೆದ್ದ ಸುದೀಪ್, ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ : ಉಪೇಂದ್ರ ಅತ್ಯುತ್ತಮ ನಿರ್ದೇಶಕ

Hindu neighbor gifts plot of land

Hindu neighbour gifts land to Muslim journalist

SIIMA 2025: ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (SIIMA) 2025 ಸೆಪ್ಟೆಂಬರ್ 5 ರ ಶುಕ್ರವಾರದಂದು ಎಕ್ಸ್‌ಪೋ ಸಿಟಿಯ ದುಬೈ ಪ್ರದರ್ಶನ ಕೇಂದ್ರದಲ್ಲಿ ಪ್ರಾರಂಭವಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಮೊದಲ ದಿನದಂದು ತೆಲುಗು ಚಿತ್ರರಂಗದ ಗಣ್ಯರನ್ನು ಸನ್ಮಾನಿಸಲಾಯಿತು, ನಂತರ ಸೆಪ್ಟೆಂಬರ್ 6 ರ ಶನಿವಾರ ತಮಿಳು ಮತ್ತು ಮಲಯಾಳಂ, ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ದುಬೈನಲ್ಲಿ ನಡೆದ ಸೈಮಾ 2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2024ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಅವಾರ್ಡ್ ನೀಡಲಾಯಿತು. ಕನ್ನಡ ಚಿಂತ್ರರಂಗದಲ್ಲಿ ‘ಮ್ಯಾಕ್ಸ್’ ಸಿನಿಮಾದ ನಟನೆಗೆ ಸುದೀಪ್‌ಗೆ ಅತ್ಯುತ್ತಮ ನಟ, ’02’ ಸಿನಿಮಾಗೆ ಆಶಿಕಾ ರಂಗನಾಥ್‌ಗೆ ಅತ್ಯುತ್ತಮ ನಟಿ, ಉಪೇಂದ್ರಗೆ ‘ಅತ್ಯುತ್ತಮ ನಿರ್ದೇಶಕ’ (UI) ಪ್ರಶಸ್ತಿ ದೊರೆತಿದೆ. ‘ಭೀಮ’ ಸಿನಿಮಾಗೆ ‘ದುನಿಯಾ’ ವಿಜಯ್‌ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತರೆ, ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ ಅವಾರ್ಡ್ ಗೆದ್ದುಕೊಂಡಿತು.

ಇದನ್ನೂ ಓದಿ:Ethanol petrol: ಎಥೆನಾಲ್ ಪೆಟ್ರೋಲ್‌ನಿಂದ ಎಷ್ಟು ಮೈಲೇಜ್‌ ಸಿಗುತ್ತೆ ಗೊತ್ತಾ? ತಜ್ಞರ ಏನ್‌ ಹೇಳ್ತಾರೆ?

ತೆಲುಗಿನಲ್ಲಿ ಕನ್ನಡತಿ ಕಮಾಲ್

‘ಪುಷ್ಪ 2: ದಿ ರೂಲ್’ ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು 2025ರ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲಿ (SIIMA) ಅತ್ಯುತ್ತಮ ನಟ ಮತ್ತು ನಟಿ (ತೆಲುಗು) ಪ್ರಶಸ್ತಿ ಗೆದ್ದರು. ‘ಕಲ್ಕಿ 2898 AD’ ಅತ್ಯುತ್ತಮ ಚಿತ್ರ (ತೆಲುಗು) ಪ್ರಶಸ್ತಿಯನ್ನು ಪಡೆದುಕೊಂಡಿತು, ‘ಪುಷ್ಪ 2’ ಚಿತ್ರಕ್ಕಾಗಿ ಸುಕುಮಾ‌ರ್ ಅತ್ಯುತ್ತಮ ನಿರ್ದೇಶಕ (ತೆಲುಗು), ‘ಕಲ್ಕಿ…’ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಅತ್ಯುತ್ತಮ ಪೋಷಕ ನಟ (ತೆಲುಗು) ಪ್ರಶಸ್ತಿ ಪಡೆದರು.