Home Breaking Entertainment News Kannada Actress Geetha Bhat: ಗುಂಡಮ್ಮ ಈಗ ಹೇಗಿದ್ದಾಳೆ ಅಂತೀರಾ! ಮತ್ತೆ ತೂಕದಲ್ಲಿ ಬದಲಾವಣೆ!

Actress Geetha Bhat: ಗುಂಡಮ್ಮ ಈಗ ಹೇಗಿದ್ದಾಳೆ ಅಂತೀರಾ! ಮತ್ತೆ ತೂಕದಲ್ಲಿ ಬದಲಾವಣೆ!

Actress Geetha Bhat
Image source: Times of india

Hindu neighbor gifts plot of land

Hindu neighbour gifts land to Muslim journalist

Actress Geetha Bhat: ಗೀತಾ ಭಟ್ ಅಂದಾಕ್ಷಣ ನೆನಪಾಗೋದು ಬ್ರಹ್ಮಗಂಟು ಧಾರಾವಾಹಿ. ಹೌದು, ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್ (Actress Geetha Bhat) ಅದ್ಭುತವಾಗಿ ನಟಿಸಿದ್ದು ಮಾತ್ರವಲ್ಲದೆ ದಪ್ಪಗಿದ್ದವರ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ, ಅವರಿಗಾಗುವ ನೋವಿನ ಕಥೆಗೆ ಸ್ಫೂರ್ತಿ ಆಗಿದ್ದರು. ಅಲ್ಲದೆ ಬಿಗ್ ಬಾಸ್ ಮೂಲಕವೂ ಜನಕ್ಕೆ ಹತ್ತಿರ ಆಗಿದ್ದರು. ಗುಂಡಮ್ಮನ ಪಾತ್ರದ ಮೂಲಕ ಗೀತಾ ಅಭಿಮಾನಿಗಳ ಮನ ಗೆದ್ದಿದ್ದರು.

ಆದರೆ ನಟಿ ಗೀತಾ ಭಟ್ ಫಿಗರ್ ಈಗ ಹೇಗಿದೆ ಅಂದರೆ ಒಂದು ಬಾರಿ ನೀವು ಬಾಯಲ್ಲಿ ಬೆರಳು ಇಟ್ಟುಕೊಳ್ಳುವುದರಲ್ಲಿ ಸಂಶಯ ಇಲ್ಲ. ಹೌದು, ತೂಕ ಇಳಿಸಿಕೊಂಡು ಸಣ್ಣ ಆಗಿದ್ದು ಅಲ್ಲದೆ ಸಖತ್ ಲುಕ್ ಹೊಂದಿದ್ದಾರೆ. ಸದ್ಯ ಗುಂಡಮ್ಮನ ದೇಹದ ವಿರುದ್ಧ ಕೇರೆಕ್ಟರ್ ಆಗಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಗೀತಾ ಭಟ್ ಈಗಾಗಲೇ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದು ಸುದ್ದಿಯಾಗಿತ್ತು. ಇದೀಗ ಮತ್ತೆ ನಟಿ ತೂಕ ಇಳಿಸಿಕೊಂಡು ಸಣ್ಣ ಆಗಿದ್ದಾರೆ.
ಹೌದು, ನಟಿ ಗೀತಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಅನ್ನುವಂತೆ ಕಾಣಿಸುತ್ತಿದ್ದಾರೆ. ಅಲ್ಲದೇ ಅವರು ಫೋಟೋಗಳಿಗೆ 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದಾರೆ.

Actress Geetha Bhat

ಎಷ್ಟೊಂದು ಸಣ್ಣ ಆಗಿದ್ದೀರಿ, ನಂಬೋಕೆ ಆಗ್ತಾ ಇಲ್ಲ, ಇದು ನೀವೇನಾ?, ಫೋಟೋ ಎಡಿಟ್ ಮಾಡಿಲ್ಲ ತಾನೇ, ನಿಮ್ಮ ಡಯಟ್ ಗೆ ನಮ್ಮ ಸಲಾಂ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.

ಅಷ್ಟಕ್ಕೂ ಗೀತಾ ಅವರ ಡಯಟ್ ಪ್ಲ್ಯಾನ್ ಹೇಗಿದೆ ಗೊತ್ತಾ! ಪ್ರೋಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚು ಸೇವಿಸಬೇಕು. ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯಬೇಕು. ತಪ್ಪದೆ 7-8 ಗಂಟೆ ನಿದ್ರೆ ಮಾಡಬೇಕು. ಡಯಟ್ ಪ್ಲ್ಯಾನ್ ಮಾಡಿದ ಮೇಲೆ ಅದನ್ನು ತಪ್ಪದೇ ಪಾಲಿಸಬೇಕು. ಆರಂಭದಲ್ಲಿ ಜೋಶ್ ಇರುತ್ತೆ. ಆಮೇಲೆ ಬೇಸರವಾಗುತ್ತೆ. ಅದನ್ನೆಲ್ಲಾ ಮೆಟ್ಟಿ ನಿಂತು ಡಯಟ್ ಮಾಡಬೇಕು ಅಂದಿದ್ದಾರೆ.

ಇನ್ನು ಜಿಮ್‍ಗೆ ಹೋಗಿ ವರ್ಕೌಟ್ ಮಾಡಬಹುದು. ಆದ್ರೆ ಡಯಟ್ ಮಾಡೋದು ಕಷ್ಟ. ಎಲ್ಲರೂ ಪಾನಿಪೂರಿ, ಬಜ್ಜಿ ತಿಂತಾ ಇದ್ರೆ, ಅಯ್ಯೋ ನಾವು ಇವನ್ನೆಲ್ಲಾ ಬಿಟ್ಟು ಇನ್ನೂ ಬದುಕಿರಬೇಕಾ ಎನ್ನಿಸುತ್ತೆ. ಆ ಆಸೆಯನ್ನು ಬದಿಗಿಟ್ಟು ನಮ್ಮ ಡಯಟ್ ಮುಂದುವರಿಸಬೇಕು ಎಂದು ಗೀತಾ ಹೇಳಿದ್ದಾರೆ.

ಇದನ್ನೂ ಓದಿ: Indian English: ಭಾರತೀಯರು ಮಾತ್ರ ಬಳಸುವ ವಿಶಿಷ್ಟ ಇಂಗ್ಲಿಷ್ ಪದಗಳು ಯಾವುದು ಗೊತ್ತಾ! ಸಖತ್ ಇಂಟರೆಸ್ಟಿಂಗ್ ಆಗಿದೆ!