Home Breaking Entertainment News Kannada Sandalwood: ಚಿತ್ರರಂಗದ ಏಳಿಗೆಗಾಗಿ ವಿಶೇಷ ಹೋಮ, ಹವನ – ನಾಗಾರಾಧನೆ ವೇಳೆ ದೇವರು ಬಂದಂತೆ ಆಡಿದ...

Sandalwood: ಚಿತ್ರರಂಗದ ಏಳಿಗೆಗಾಗಿ ವಿಶೇಷ ಹೋಮ, ಹವನ – ನಾಗಾರಾಧನೆ ವೇಳೆ ದೇವರು ಬಂದಂತೆ ಆಡಿದ ಹಿರಿಯ ನಟಿ !!

Hindu neighbor gifts plot of land

Hindu neighbour gifts land to Muslim journalist

Sandalwood ಸಿನಿಮಾ ರಂಗದ ಏಳಿಗೆಗಾಗಿ ಇಂದು ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಯುತ್ತಿದೆ. ಈ ಪೂಜೆಯಲ್ಲಿ ಸಿನಿ ಕಲಾವಿದರ ದಂಡೇ ಪೂಜೆ ಕಾರ್ಯದಲ್ಲಿ ಭಾಗಿಯಾಗಿದ್ದು, ನಾಗಾರಾಧನೆ ವೇಳೆ ಹಿರಿಯ ನಟಿ ಜ್ಯೋತಿ (Actress Jyothi) ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ಹೌದು, ನಾಗಾರಾಧನೆ ನಡೆಯುತ್ತಿದ್ದ ವೇಳೆ, ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಈ ಘಟನೆ ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, “ನನಗೆ ಆಗಾಗ ಈ ರೀತಿ ಆಗುತ್ತದೆ. ಏನಾಯ್ತು ಅಂತ ಗೊತ್ತು ಆಗೋದಿಲ್ಲ. ಆಗೆಲ್ಲ ದೇವರ ತೀರ್ಥ ಕೊಟ್ಟಾಗ ಸರಿ ಹೋಗುತ್ತದೆ. ನಾಲ್ಕೈದು ಜನ ನನ್ನನ್ನು ಹಿಡಿಯಬೇಕಾಗುತ್ತದೆ. ಮನೆಯಲ್ಲಿಯೂ ಈ ರೀತಿ ಆಗುತ್ತದೆ” ಎಂದಿದ್ದಾರೆ.

ಅಂದಹಾಗೆ, ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದ್ದು, ಹಿರಿಯ ನಟಿ ಗಿರಿಜಾ ಲೋಕೇಶ್, ಜಗ್ಗೇಶ್, ಶರಣ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಅಭಿಷೇಕ್ ಅಂಬರೀಶ್, ಗುರುಕಿರಣ್, ಪದ್ಮಜಾ ರಾವ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಉಡುಪಿಯ ಪ್ರಕಾಶ್ ಅಮ್ಮಣ್ಣಾಯ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದೆ.