Home Breaking Entertainment News Kannada Salman Khan: ರಶ್ಮಿಕಾ ಗೆ ಮದುವೆಯಾಗಿ ಮಕ್ಕಳಾದ್ರೂ ಕೂಡ ನಾನು ಅವಳೊಂದಿಗೆ… ಸಲ್ಮಾನ್ ಖಾನ್ ಅಚ್ಚರಿ...

Salman Khan: ರಶ್ಮಿಕಾ ಗೆ ಮದುವೆಯಾಗಿ ಮಕ್ಕಳಾದ್ರೂ ಕೂಡ ನಾನು ಅವಳೊಂದಿಗೆ… ಸಲ್ಮಾನ್ ಖಾನ್ ಅಚ್ಚರಿ ಹೇಳಿಕೆ!!

Hindu neighbor gifts plot of land

Hindu neighbour gifts land to Muslim journalist

Salman Khan: ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ( Salman Khan and rashmika mandanna) ಅಭಿನಯದ, ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ‘ಸಿಕಂದರ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಭಾನುವಾರ ಮುಂಬೈಯಲ್ಲಿ ನೆರವೇರಿತು. ಈ ಚಿತ್ರದಲ್ಲಿ 59 ವರ್ಷದ ಸಲ್ಮಾನ್ ಮತ್ತು 28 ವರ್ಷದ ರಶ್ಮಿಕಾ ಮಂದಣ್ಣ ಅವರ ಮಧ್ಯೆ ಇರುವ ವಯಸ್ಸಿನ ಅಂತರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಈ ಕುರಿತಾಗಿ ಸಲ್ಮಾನ್ ಖಾನ್ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ ಕಾರ್ಯಕ್ರಮದಲ್ಲಿ ಚಿತ್ರದ ತಂಡದೊಂದಿಗೆ ಭಾಗವಹಿಸಿ ಮಾತನಾಡಿದ ಸಲ್ಮಾನ್ ಖಾನ್ ಅವರು ತಮಗಿಂತ ಹೆಚ್ಚಿನ ವಯಸ್ಸಿನ ಅಂತರವಿರುವ ರಶ್ಮಿಕಾ ಜೊತೆ ಅಭಿನಯಿಸಿದ್ದು, ತಮ್ಮ ಮತ್ತು ರಶ್ಮಿಕಾ ನಡುವಿನ 31 ವರ್ಷಗಳ ವಯಸ್ಸಿನ ಅಂತರದ ವಿಷಯವನ್ನು ಪ್ರಸ್ತಾಪಿಸಿದರು. ಚಿತ್ರದಲ್ಲಿ ನೀವು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ನಿರೂಪಕರು ಹೊಗಳಿದಾಗ ಸಲ್ಮಾನ್ ಖಾನ್, ಈ ಸಮಯದಲ್ಲಿ ವಿಚಾರಗಳು ಎಷ್ಟು ಗೊಂದಲಮಯವಾಗಿವೆಯೆಂದರೆ ನಾನು ಆರೇಳು ದಿನ ರಾತ್ರಿ ನಿದ್ದೆಯೇ ಮಾಡುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನ ನನ್ನ ಬೆನ್ನು ಬಿದ್ದಿದ್ದಾರೆ. ನಾನಿನ್ನೂ ಚಲಾವಣೆಯಲ್ಲಿದ್ದೇನೆ ಎಂದು ಅವರಿಗೆ ತೋರಿಸಬೇಕಾಗಿದೆ ಎಂದರು. ಅಲ್ಲದೆ ವಯಸ್ಸಿನ ಅಂತರದ ಬಗ್ಗೆ ಬಂದ ಪ್ರಶ್ನೆಯ ಕುರಿತು ಕೂಡ ಮಾತನಾಡಿದರು.

ಈ ಕುರಿತು ಮಾತನಾಡಿರುವ ಸಲ್ಮಾನ್ ಖಾನ್, ಈ ಚಿತ್ರದಲ್ಲಿ ನನ್ನ ಮತ್ತು ನಾಯಕಿಯ ನಡುವೆ 31 ವರ್ಷಗಳ ವಯಸ್ಸಿನ ಅಂತರವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಹೇಳುತ್ತಾರೆ. ಹೀರೋಯಿನ್‌ಗೆ ಯಾವುದೇ ಸಮಸ್ಯೆ ಇಲ್ಲ, ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ದೇನು, ನಿಮಗ್ಯಾಕೇ ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಕೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ನಾಳೆ ಮದುವೆಯಾಗುತ್ತೆ, ಮಕ್ಕಳಾಗುತ್ತೆ, ಆಗಲೂ ಕೂಡ ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತೆ ಎಂದುಕೊಂಡಿದ್ದೇನೆ. ಅಲ್ಲದೆ ರಶ್ಮಿಕಾಗೆ ಮದುವೆಯಾಗಿ ಮಗು ಹುಟ್ಟಿದಾಗ ನಾನು ಆಕೆಯ ಮಗಳ ಜೊತೆ ಕೂಡ ನಟಿಸುತ್ತೇನೆ, ಒಂದೇ ವ್ಯತ್ಯಾಸವೆಂದರೆ ಆಗ ಆಕೆಯ ತಾಯಿಯ ಅನುಮತಿ ಬೇಕಾಗಬಹುದು ಎಂದು ರಶ್ಮಿಕಾ ಮುಖ ನೋಡಿ ನಗುತ್ತಾ ಹೇಳಿದರು. ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದೌದು ಎಂಬಂತೆ ರಶ್ಮಿಕಾ ಮಂದಣ್ಣ ಹಿಂದೆ ನಿಂತು ತಲೆಯಾಡಿಸಿದ್ದಾರೆ.