Home Breaking Entertainment News Kannada Nitish Rana-Saachi Marwah: KKR ಕ್ಯಾಪ್ಟನ್‌ ನಿತೀಶ್ ರಾಣಾ ಪತ್ನಿಗೆ ಕಿರುಕುಳ ನೀಡಿದ ಆರೋಪಿಯ ಬಂಧನ!

Nitish Rana-Saachi Marwah: KKR ಕ್ಯಾಪ್ಟನ್‌ ನಿತೀಶ್ ರಾಣಾ ಪತ್ನಿಗೆ ಕಿರುಕುಳ ನೀಡಿದ ಆರೋಪಿಯ ಬಂಧನ!

Nitish Rana-Saachi Marwah
Image source: sportsGrail

Hindu neighbor gifts plot of land

Hindu neighbour gifts land to Muslim journalist

Nitish Rana-Saachi Marwah: ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಪತ್ನಿ ಸಾಂಚಿ ಮರ್ವಾಗೆ( Nitish Rana-Saachi Marwah) ಕಿರುಕುಳ ನೀಡಿದ ಇಬ್ಬರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸಾಂಚಿ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ, ಇಬ್ಬರು ಅಪರಿಚಿತ ಹುಡುಗರು ಕಾರನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಸಾಂಚಿ ಶಕರಪುರದಿಂದ ಮಾಡೆಲ್ ಟೌನ್‌ನಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಇಬ್ಬರು ಹುಡುಗರು ಆಕೆಯನ್ನು ಹಿಂಬಾಲಿಸತೊಡಗಿದರು. ಅಷ್ಟೇ ಅಲ್ಲ ಇಬ್ಬರೂ ಸಾಂಚಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಈ ಘಟನೆಯಿಂದ ಭಯಗೊಂಡ ಸಾಂಚಿ ಅವರು, ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ದೆಹಲಿ ಪೊಲೀಸರಿಗೆ ಮೇಲ್ ಕಳುಹಿಸುವ ಮೂಲಕ ದೂರು ನೀಡಿದ್ದು, ನಂತರ ಪೊಲೀಸರು 354, 354 (ಡಿ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಕುಳಿತಿದ್ದ ಮಹಿಳೆಗೆ ಚೇಳು ಕಡಿತ! ಏರ್ ಇಂಡಿಯಾ ನೀಡಿತು ಉತ್ತರ!