Home Breaking Entertainment News Kannada Narendra Modi: RRRನ ನಾಟು-ನಾಟು ಹಾಡಿಗೆ ಹೆಜ್ಜೆಹಾಕಿದ ಕೊರಿಯನ್ನರು! ಡ್ಯಾನ್ಸ್ ನೋಡಿ ಫಿದಾ ಆಗಿ, ಭೇಷ್...

Narendra Modi: RRRನ ನಾಟು-ನಾಟು ಹಾಡಿಗೆ ಹೆಜ್ಜೆಹಾಕಿದ ಕೊರಿಯನ್ನರು! ಡ್ಯಾನ್ಸ್ ನೋಡಿ ಫಿದಾ ಆಗಿ, ಭೇಷ್ ಅಂದ್ರು ಮೋದಿ!

Narendra Modi

Hindu neighbor gifts plot of land

Hindu neighbour gifts land to Muslim journalist

RRR : ದಿನಕ್ಕೊಂದರಂತೆ ಪ್ರಶಸ್ತಿಗಳನ್ನೂ ಬಾಚುತ್ತಿರುವ ಆರ್​ಆರ್​ಆರ್ (RRR) ಸಿನಿಮಾದ ಖ್ಯಾತಿ ಇಡೀ ವಿಶ್ವದೆಲ್ಲೆಡೆ ಹಬ್ಬಿದೆ. ಅದರಲ್ಲೂ ಸಿನಿಮಾದಲ್ಲಿ ರಾಮ್ ಚರಣ್ ತೇಜ(Ramcharan Theja) ಹಾಗೂ ಜೂನಿಯರ್ NTR ಹೆಜ್ಜೆ ಹಾಕಿ ಸಖತ್ ಸೌಂಡ್ ಮಾಡಿದ ನಾಟು-ನಾಟು(Natu Natu) ಹಾಡಿಗೆ ಫಿದಾ ಆಗದವರೇ ಇಲ್ಲ ಬಿಡಿ. ಅಲ್ಲದೆ ಈ ಹಾಡಿಗೆ ಜನ ಕುಣಿದು ಕುಪ್ಪಳಿಸುತ್ತಿದ್ದಾರೆ. ಅದರಲ್ಲಿಯೂ ವಿದೇಶಿಗರಿಗಂತೂ ಈ ಹಾಡು ಸಖತಾಗೇ ಮೋಡಿ ಮಾಡಿದೆ. ಇದೀಗ ಕೆಲ ಕೊರಿಯನ್ ಅಧಿಕಾರಿಗಳು ನಾಟು-ನಾಟು ಹಾಡಿಗೆ ಕುಣಿದಿದ್ದು ಅವರ ನೃತ್ಯ ಕಂಡು ಸ್ವತಃ ಪ್ರಧಾನಿ ಮೋದಿ (Narendra Modi) ಭೇಷ್ ಎಂದಿದ್ದಾರೆ.

ಹೌದು, ಭಾರತದ ಕೊರಿಯನ್ ರಾಯಭಾರಿ ಕಚೇರಿಯ ಸಿಬ್ಬಂದಿ ನಾಟು-ನಾಟು ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು ಅದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಕೊರಿಯ ರಾಯಭಾರಿ ಚಾಂಗ್ ಜೆ ಬೊಕ್(Chang J Bok) ಸಹ ತಮ್ಮ ಕಚೇರಿಯ ಅಧಿಕಾರಿಗಳೊಟ್ಟಿಗೆ ನಾಟು-ನಾಟು ಹಾಡಿಗೆ ಸ್ಟೆಪ್ ಹಾಕಿದ್ದಾರೆ. ರಾಯಭಾರ ಕಚೇರಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಡಾನ್ಸ್ ವಿಡಿಯೋ ಶೇರ್ ಮಾಡಲಾಗಿದೆ. ಈ ನೃತ್ಯಕ್ಕೆ ಫಿದಾ ಆಗಿ, ವಿಡಿಯೋ ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೃತ್ಯಕ್ಕೆ ಭೇಷ್ ಎಂದು ‘ಲವ್ಲಿ ಮತ್ತು ತಂಡದ ಅದ್ಭುತ ಪ್ರಯತ್ನ’ ಎಂದಿದ್ದಾರೆ.

ಸಿನಿಮಾದಲ್ಲಿ ರಾಮ್ ಚರಣ್ ತೇಜ-ಜೂ ಎನ್​ಟಿಆರ್ ನಾಟು ನಾಟು ಹಾಡಿಗೆ ಮಾಡಿದ್ದ ಕೆಲವು ಹುಕ್ ಸ್ಟೆಪ್​ಗಳನ್ನೇ ಕೊರಿಯನ್ ರಾಯಭಾರಿ ಕಚೇರಿಯ ಅಧಿಕಾರಿಗಳು ಮಾಡಲು ಪ್ರಯತ್ನಿಸಿದ್ದು, ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕಚೇರಿಯ ಮಹಿಳಾ ಉದ್ಯೋಗಿಗಳು, ಪುರುಷ ಉದ್ಯೋಗಿಗಳೆಲ್ಲರೂ ಒಟ್ಟಿಗೆ ಸೇರಿ, ಕೊರಿಯನ್ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಹಾಡಿಗೆ ಸ್ಟೆಪ್ ಹಾಕಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋ ಹಂಚಿಕೊಂಡಿರುವ ಭಾರತದ ಕೊರಿಯನ್ ರಾಯಭಾರಿ ಕಚೇರಿ, ”ನಿಮಗೆ ನಾಟು-ನಾಟು ಗೊತ್ತೆ? ಕೊರಿಯನ್ ರಾಯಭಾರಿ ಕಚೇರಿಯ ನಾಟು-ನಾಟು ಸಾಂಗ್ ಕವರ್ ಅನ್ನು ನಾವು ಪ್ರಸ್ತುತ ಪಡಿಸುತ್ತಿದ್ದೇವೆ. ಕೊರಿಯನ್ ರಾಯಭಾರಿ ಚಾಂಗ್ ಜೆ ಬೊಕ್ ಸಹ ಕಚೇರಿಯ ಎಲ್ಲ ಸಿಬ್ಬಂದಿಗಳೊಂದಿಗೆ ಡ್ಯಾನ್ಸ್ ಮಾಡಿರುವುದು ಕಾಣಬಹುದು” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಪೋಸ್ಟ್ ಶೇರ್ ಒಂದು ಗಂಟೆಯೊಳಗೆ ಸುಮಾರು 3.2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸಿಕ್ಕಾಪಟ್ಟೆ ಶೇರ್ ಆಗಿದೆ. ಜನರು ಕೂಡ ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.

ರಾಜಮೌಳಿ(Rajmouli) ನಿರ್ದೇಶನದ, ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಸದ್ಯ ನಾಟು ನಾಟು ಪ್ರತಿಷ್ಠಿತ ಅಕಾಡೆಮಿ ಅವಾರ್ಡ್ ನ ಅಂತಿಮ ರೇಸ್ ನಲ್ಲಿದೆ. ಆರ್ ಆರ್ ಆರ್ ತಂಡ ಆಸ್ಕರ್ ಗೆದ್ದು ಭಾರತೀಯರನ್ನು ಹೆಮ್ಮೆ ಪಡಿಸುತ್ತಾರಾ ಕಾದು ನೋಡಬೇಕಿದೆ. 95ನೇ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ.

ಇತ್ತೀಚೆಗಷ್ಟೆ ಪಾಕಿಸ್ತಾನದ ನಟಿ ಹನಿಯಾ ಆಮಿರ್, ಪಾಕಿಸ್ತಾನದ ವಿವಾಹವೊಂದರಲ್ಲಿ ನಾಟು-ನಾಟು ಹಾಡಿಗೆ ಸಖತ್ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಅವರ ನೃತ್ಯದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.