Home Breaking Entertainment News Kannada Rishab Shetty Remuneration: ಕಾಂತಾರ-2 ಗೆ ರಿಷಬ್ ಶೆಟ್ಟಿ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?! ಅಬ್ಬಬ್ಬಾ.....

Rishab Shetty Remuneration: ಕಾಂತಾರ-2 ಗೆ ರಿಷಬ್ ಶೆಟ್ಟಿ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?! ಅಬ್ಬಬ್ಬಾ.. ನೀವಿದನ್ನು ಊಹಿಸಲೂ ಸಾಧ್ಯವಿಲ್ಲ!!

Rishab Shetty Remuneration

Hindu neighbor gifts plot of land

Hindu neighbour gifts land to Muslim journalist

Rishab Shetty Remuneration: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1ರ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಮುಹೂರ್ತ(Kantara Prequel) ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ನೆರೆವೇರಿದ್ದು, ಇದೀಗ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಎ ಲೆಜೆಂಡ್ ವಾಸ್ ಬಾರ್ನ್ ಎಂಬ ಟೈಟಲ್ನಡಿ ಈ ಫಸ್ಟ್ ಲುಕ್( Kantara A Legend Chapter-1 First Look)ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ರಿಷಬ್ ಅವರ ಫಸ್ಟ್ ಲುಕ್(Kantara Prequel) ) ಪ್ರೇಕ್ಷಕರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾಂತಾರ: ಎ ಲೆಜೆಂಡ್ ಅಧ್ಯಾಯ 1 (Kantara Chapter 1)ಎಂಬ ಶೀರ್ಷಿಕೆಯ ಈ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕಳೆದ ವರ್ಷ ತೆರೆಕಂಡ ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದೊಡ್ಡ ಮಟ್ಟದಲ್ಲಿ ಲೂಟಿ ಮಾಡಿದ್ದು, ವಿಶ್ವಾದ್ಯಂತ 400 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಸಿನಿಮಾಗೆ ರಿಷಬ್ 4 ಕೋಟಿ ಸಂಭಾವನೆ ಪಡೆದಿದ್ದಾರೆ. ಸದ್ಯ ಕಾಂತಾರ ಪ್ರಿಕ್ವೆಲ್ ನಲ್ಲಿ ಬ್ಯುಸಿಯಾಗಿದ್ದು, ಈ ಎರಡನೇ ಭಾಗಕ್ಕೆ ರಿಷಬ್ ಶೆಟ್ಟಿ ಭಾರೀ ಸಂಭಾವನೆ (Rishab Shetty Remuneration)ಪಡೆಯುತ್ತಿದ್ದಾರೆ ಎನ್ನಲಾಗಿದೆ.ಈ ಸಿನಿಮಾದ ಮೇಲೆ ದೊಡ್ದ ಮಟ್ಟದ ನಿರೀಕ್ಷೆಯಿರುವ ಹಿನ್ನೆಲೆ ಸಂಭಾವನೆ ಕೂಡ 25 ಪಟ್ಟು ಜಾಸ್ತಿಯಿದೆಯಂತೆ.

ಕಾಂತಾರ ಪ್ರೀಕ್ವೆಲ್‌ ಸಿನಿಮಾಗಾಗಿ ರಿಷಬ್ ಶೆಟ್ಟಿ 100 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಂಭಾವನೆಯಲ್ಲಿ ಅರ್ಧದಷ್ಟು ಅಂದರೆ 50 ಕೋಟಿಯನ್ನು ಮುಂಗಡವಾಗಿ ಪಡೆದಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ರೈಟ್ಸ್ ಮಾರಾಟವಾದ ಬಳಿಕ ರಿಷಬ್ ಶೆಟ್ಟಿ ಅದರ ಲಾಭದಲ್ಲಿ ಪಾಲು ಕೂಡ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇದನ್ನು ಓದಿ: Health Tip: ದಿನವೂ ಸೊಂಟ, ಮಂಡಿ ನೋವು ಕಾಡುತ್ತಾ?! ಹಾಲಿಗೆ ಈ ಒಂದು ವಸ್ತು ಹಾಕಿ ದಿನಕ್ಕೊಮ್ಮೆ ಗುಟುಕಿಸಿ ಸಾಕು, ಎಲ್ಲಾ ನೋವು ಮಂಗಮಾಯ