Home Breaking Entertainment News Kannada Ravi Kishan: ನಟಿ ನಗ್ಮಾ ಜೊತೆ ವಿವಾಹೇತರ ಸಂಬಂಧದ ವದಂತಿಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ...

Ravi Kishan: ನಟಿ ನಗ್ಮಾ ಜೊತೆ ವಿವಾಹೇತರ ಸಂಬಂಧದ ವದಂತಿಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ ರವಿಕಿಶನ್!!

Ravi Kishan

Hindu neighbor gifts plot of land

Hindu neighbour gifts land to Muslim journalist

Ravi Kishan: ನಾಯಕನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್​ ಅವರು (Ravi Kishan) ಇದೀಗ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದಿದ್ದಾರೆ. ನಟಿ ನಗ್ಮಾ (actress nagma) ಜೊತೆ ವಿವಾಹೇತರ ಸಂಬಂಧದ ವದಂತಿಯ ಬಗ್ಗೆ ನಟ ರವಿಕಿಶನ್ ಮಾತನಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರವಿ ಕಿಶನ್​ ಪ್ರಮುಖ ಹಿಂದಿ (hindi) ಮತ್ತು ಭೋಜಪುರಿ ಚಿತ್ರರಂಗದ ಜನಪ್ರಿಯ ನಟ. ಹಲವು ತೆಲುಗು (Telugu) ಚಿತ್ರಗಳಲ್ಲಿ ನಟಿಸಿದ ಇವರು ಕನ್ನಡದಲ್ಲಿ ಕಿಚ್ಚ ಸುದೀಪ್ (kiccha sudeep) ಅಭಿನಯದ `ಹೆಬ್ಬುಲಿ’ (hebbuli) ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ರಾಜಕಾರಣಿಯೂ ಆಗಿರುವ ರವಿ ಕಿಶನ್, ಉತ್ತರ ಪ್ರದೇಶದ ಗೋರಖ್​ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರೂ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ, ನಟಿ ಹಾಗೂ ಕಾಂಗ್ರೆಸ್ ನಾಯಕಿಯಾದ ನಗ್ಮಾ ಅವರೊಂದಿಗೆ ರವಿಕಿಶನ್‌ಗೆ ವಿವಾಹೇತರ ಸಂಬಂಧ ಇತ್ತು ಎಂಬ ವದಂತಿ ಹಬ್ಬಿತ್ತು. ಇದೀಗ ಈ ವದಂತಿಗೆ ರವಿಕಿಶನ್ ಸ್ಪಷ್ಟನೆ ನೀಡಿದ್ದಾರೆ.

ಜನಪ್ರಿಯ ಕಾರ್ಯಕ್ರಮವಾದ ಆಪ್ ಕಿ ಅದಾಲತ್‌ನಲ್ಲಿ ಮಾತನಾಡಿದ ನಟ, ನಗ್ಮಾ ಜೊತೆಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಹಾಗಾಗಿ ನಮ್ಮ ಸಂಬಂಧದ ಬಗ್ಗೆ ಹಲವು ವದಂತಿಗಳು ಹರಡಿದ್ದು ಸಾಮಾನ್ಯ. ಆದರೆ, ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಎಂದಿದ್ದಾರೆ. ಈ ಕಾರಣದಿಂದನೇ ಹೆಚ್ಚು ಸಿನಿಮಾ ಒಟ್ಟಿಗೆ ಮಾಡಿದ್ದೇವೆ. ಅಲ್ಲದೆ, ನನಗೆ ಈಗಾಗಲೇ ಮದುವೆಯಾಗಿದೆ. ನನ್ನ ಪತ್ನಿ ಪ್ರೀತಿ ಶುಕ್ಲಾ (Preeti Shukla) ಅವರನ್ನು ನಾನು ತುಂಬಾ ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಎಂದು ಹೇಳಿ, ವದಂತಿಗೆ ತೆರೆ ಎಳೆದಿದ್ದಾರೆ.

“ನಾನು ನನ್ನ ಪತ್ನಿಯ ಪಾದಗಳಿಗೆ ನಮಸ್ಕರಿಸುತ್ತೇನೆ, ನನ್ನ ಹೆಂಡತಿ ಮೊದಲಿನಿಂದಲೂ ನನ್ನೊಂದಿಗಿದ್ದಾಳೆ. ನನ್ನ ಬಳಿ ಹಣವಿಲ್ಲದಿದ್ದಾಗ, ಕಷ್ಟದ ಸಮಯದಲ್ಲಿ ಅವಳು ನನ್ನೊಂದಿಗೆ ಇದ್ದಳು. ಸಮಯ ಕಳೆದಂತೆ ನನ್ನ ಸಿನಿಮಾಗಳು ಹಿಟ್ ಆಗಲಾರಂಭಿಸಿದವು, ಆ ಬಳಿಕ ನನ್ನ ಹೆಂಡತಿ ನನಗೆ ಬಿಗ್ ಬಾಸ್ ಶೋಗೆ ಹೋಗುವಂತೆ ಸೂಚಿಸಿದಳು. ನನಗೆ ಹೋಗಲು ಇಷ್ಟವಾಗಲಿಲ್ಲದಿದ್ದರೂ ಹೋದೆ.
ಮೂರು ತಿಂಗಳು ಬಿಗ್‌ಬಾಸ್ ಮನೆಯಲ್ಲಿದ್ದೆ. ಅಲ್ಲಿದ್ದಾಗ ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲ್ಲಿಂದ ಹೊರಬಂದ ನಂತರ
ನನ್ನಲ್ಲಿ ಸಾಕಷ್ಟು ಬದಲಾವಣೆ ಹೊಂದಿ ಸಾಮಾನ್ಯ ವ್ಯಕ್ತಿಯಾಗಿದ್ದೇನೆ.
ಬಿಗ್‌ಬಾಸ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದೇನೆ.
ಈಗ ನನ್ನ ಕುಟುಂಬದ ಜೊತೆಗೆ ಚೆನ್ನಾಗಿದ್ದೇನೆ. ನಾನು ನನ್ನ ಕುಟುಂಬ ಮತ್ತು ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ”ಎಂದು ಹೇಳಿದರು.