Home Breaking Entertainment News Kannada Rashmika Mandanna and Troll : ಓವರ್ ಆಕ್ಟಿಂಗ್ ಕ್ವೀನ್ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್!

Rashmika Mandanna and Troll : ಓವರ್ ಆಕ್ಟಿಂಗ್ ಕ್ವೀನ್ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್!

Rashmika Mandanna Troll

Hindu neighbor gifts plot of land

Hindu neighbour gifts land to Muslim journalist

Rashmika Mandanna Troll : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಕಿರಿಕ್ ಪಾರ್ಟಿ (Kirik Party)ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಕಾಂಟ್ರವರ್ಸಿ ಲೇಡಿ(Controversy Lady)ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ ವಿಚಾರದಲ್ಲಿಯೂ ಟಾಪ್ ಲಿಸ್ಟ್ ನಲ್ಲಿದ್ದಾರೆ. ಇದೀಗ, ಮೊನ್ನೆ ಮಾರ್ಚ್ 31 ರಂದು ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ ಕೂಡ ಟ್ರೊಲ್ (Rashmika Mandanna Troll) ಆಗಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯರ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ನಡೆದಿದ್ದು, ಈ ಪಂದ್ಯ ನಡೆಯುವ ಮುನ್ನ ಈ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಮೆರುಗು ನೀಡಲು ಗಾಯಕ ಹಾಗೂ ಸಂಯೋಜಕ ಅರಿಜಿತ್ ಸಿಂಗ್ ಕೂಡ ಭಾಗಿಯಾಗಿದ್ದರು. ಇವರ ಹಾಡಿನ ವೈಖರಿಗೆ ಎಂಎಸ್ ಧೋನಿ ಕೂಡ ಮೂಕ ಪ್ರೇಕ್ಷಕನಾಗಿ ಚೇರ್ ಮೇಲೆ ಕುಳಿತು ಹಾಡಿಗೆ ತಲೆದೂಗಿದ್ದಾರೆ.

ಇನ್ನು ಈ ಮೂವರ ಪ್ರದರ್ಶನಕ್ಕೂ ಸೋಶಿಯಲ್. ಮೀಡಿಯಾದಲ್ಲಿಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಈ ಮೂವರ ಪೈಕಿ ನಟಿ ರಶ್ಮಿಕಾ ಮಂದಣ್ಣ ಪ್ರದರ್ಶನಕ್ಕೆ ಮಾತ್ರ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಡಾನ್ಸ್ ಹಾಗೂ ಆಕೆ ಮಾತಾಡಿದ ಶೈಲಿಗೆ ಟ್ರೋಲ್ ಆಗುತ್ತಿದ್ದಾರೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ಮಂದಣ್ಣ ಎಂದರೆ ಕನ್ನಡಿಗರು ಸಿಡಿಮಿಡಿ ಆಗೋದು ಕಾಮನ್. ಓವರ್‌ಆಕ್ಟಿಂಗ್, ಇಂತಹ ವೇದಿಕೆ ಮೇಲೂ ಓವರ್ ಆಕ್ಟಿಗ್ ಮಾಡ್ತೀಯಲ್ಲವ್ವ ತಾಯಿ ಎಂದು ನೆಟ್ಟಿಗರು ನ್ಯಾಶನಲ್ ಕ್ರಷ್ ಮೇಲೆ ಹರಿ ಹಾಯ್ದಿದಿದ್ದಾರೆ. ಕನ್ನಡದ ಹೆಚ್ಚಿನ ಎಲ್ಲಾ ಟ್ರೋಲ್ ಪೇಜ್‌ಗಳೂ ಕೂಡ ರಶ್ಮಿಕಾ ಮಂದಣ್ಣಳನ್ನು ಟ್ರೋಲ್ ಮಾಡುತ್ತಿದ್ದಾರೆ. ರಶ್ಮಿಕಾ ವೇದಿಕೆ ಮೇಲೆ ಮಾತನಾಡಿದ್ದನ್ನು ಟೀಕಿಸಿರುವ ಪೇಜ್‌ಗಳು ಈಕೆಯನ್ನು ಆಯ್ಕೆ ಮಾಡಿದ್ದು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.

ಮೂವರ ಪ್ರದರ್ಶನ ಮುಗಿದ ಬಳಿಕ ಫೋಟೊಗೆ ಪೋಸ್ ಕೊಡುವ ವೇಳೆ ನಟಿ ರಶ್ಮಿಕಾ ಮಂದಣ್ಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪಕ್ಕದಲ್ಲಿ ನಿಂತಿದ್ದು, ಇದು ಕೂಡ ಟ್ರೋಲಿಗರ ಪಾಲಿಗೆ ಆಹಾರ ವಾಗಿ ಪರಿಣಮಿಸಿದೆ. ಈ ವಿಷಯವನ್ನೂ ಕೂಡ ಟ್ರೋಲ್ ಮಾಡಿರುವ ನೆಟ್ಟಿಗರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿಗೆ ಇದೇ ಕಾರಣ ಎಂದೂ ಸಹ ಮೀಮ್ಸ್ ಮಾಡಿ ರಶ್ಮಿಕಾ ಅವರನ್ನು ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. ಹದಿನೈದು ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಕೆಟ್ಟ ಘಳಿಗೆ ಎಂದು ಕೂಡ ನಟಿಯನ್ನು ಟೀಕಿಸಿದ್ದಾರೆ.

ರಶ್ಮಿಕಾ ಮಂದಣ್ಣ ಈ ಪ್ರದರ್ಶನದಿಂದ ದೇಶದ ವಿವಿಧ ಭಾಷೆಯ ಟ್ರೋಲರ್‌ಗಳಿಂದಲೂ ಟೀಕೆಗೆ ಒಳಗಾಗಿದ್ದು, ತನ್ನ ಪ್ರದರ್ಶನ ಮುಗಿದ ಬಳಿಕ ಪ್ರದರ್ಶನ ನೀಡಿದ್ದರ ಬಗ್ಗೆ ಖುಷಿ ಹಂಚಿಕೊಂಡು ಪೋಸ್ಟ್ ಹಾಕಿರುವ ರಶ್ಮಿಕಾ ಮಂದಣ್ಣ ಅವರಿಗೆ ತಮನ್ನಾ ಅವರಿಗೆ ಹೋಲಿಕೆ ಮಾಡಿ, ನಿನ್ನ ಪ್ರದರ್ಶನಕ್ಕಿಂತ ತಮನ್ನಾ ಭಾಟಿಯಾ ಅವರ ಡಾನ್ಸ್ ಚೆನ್ನಾಗಿತ್ತು ಎಂದಿದ್ದಾರೆ. ಇನ್ನೂ ಹೆಚ್ಚಿನ ಮಂದಿ, ಈ ಬಾರಿ ಆಯ್ಕೆಯಾಗಿ ಡಾನ್ಸ್ ಮಾಡಿದ್ದು ಆಯಿತು. ಇನ್ನು ಮುಂದೆ ದಯವಿಟ್ಟು ಪ್ರದರ್ಶನ ನೀಡಲು ಒಪ್ಪಿಗೆ ಸೂಚಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Hombale Movie with Sudeep: ಕಿಚ್ಚನ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ! ಏನಿದು ಹೊಸ ವಿಚಾರ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌