Home Breaking Entertainment News Kannada Rashmika Mandanna :ವ್ಹಾರೆ ವ್ಹಾ ಬುಲ್‌ಬುಲ್‌! ತುಂಡುಡುಗೆಯಲ್ಲಿ ಮಿಂಚಿಂಗ್‌, ನ್ಯಾಷನಲ್‌ ಕ್ರಶ್‌ ಮತ್ತೆ ಟ್ರೋಲ್‌!!!

Rashmika Mandanna :ವ್ಹಾರೆ ವ್ಹಾ ಬುಲ್‌ಬುಲ್‌! ತುಂಡುಡುಗೆಯಲ್ಲಿ ಮಿಂಚಿಂಗ್‌, ನ್ಯಾಷನಲ್‌ ಕ್ರಶ್‌ ಮತ್ತೆ ಟ್ರೋಲ್‌!!!

Rashmika Mandanna

Hindu neighbor gifts plot of land

Hindu neighbour gifts land to Muslim journalist

Rashmika Mandanna: ಕಿರಿಕ್ ಪಾರ್ಟಿ (kirik party )ಚಿತ್ರದ(film )ಮೂಲಕ ಚಂದನವನ ಪ್ರವೇಶಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika mandanna )ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದೀಗ ಉರ್ಫಿ ಜಾವೇದ್ ಉಡುಪು(dress )ಸ್ಟೈಲ್ ಜೊತೆಗೆ ಗೆ ರಶ್ಮಿಕಾ ಪೈಪೋಟಿ ಇಳಿದಿರುವುದಾಗಿ ಎಲ್ಲೆಡೆ ಸುದ್ದಿಯಾಗಿದೆ. ಇದು ಎಷ್ಟು ಸತ್ಯ ಎನ್ನುವುದು ಬನ್ನಿ ತಿಳಿಯೋಣ.

ರಶ್ಮಿಕಾ ಮಂದಣ್ಣ ನಟಿ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ. ಇದೀಗ ಆಕೆ ತೊಟ್ಟ ಬಟ್ಟೆ ವಿಷಯ ಸುಖಾ ಸುಮ್ಮನೆ ಜನರ ಬಾಯಿಯಲ್ಲಿ ಚುಯಿಂಗಮ್ ಆಗಿ ಬಿಟ್ಟಿದೆ.

ಹೌದು ಇತ್ತೀಚೆಗಷ್ಟೆ ರಶ್ಮಿಕಾ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ರಶ್ಮಿಕಾ ಉರ್ಫಿ ಜಾವೇದ್ ತರ ತುಂಡುಡುಗೆ ಧರಿಸಿ ಟ್ರೋಲ್ ಆಗಿದ್ದಾರೆ.

ಸದ್ಯ ಬಾಲಿವುಡ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕಪ್ಪು ಬಣ್ಣದ ಬಟ್ಟೆ (black dress )ಧರಿಸಿದ್ದರು. ಚಿಕ್ಕ ಬಟ್ಟೆ ಧರಿಸಿದ್ದ ರಶ್ಮಿಕಾ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಕೆಲವರು ರಶ್ಮಿಕಾ ಲುಕ್ ಬಗ್ಗೆ ಶ್ಲಾಘಿಸಿದ್ದಾರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಸದ್ಯ ರಶ್ಮಿಕಾ ಬಟ್ಟೆ ನೋಡಿ ನೆಟ್ಟಿಗರು ಉರ್ಫಿ ಜಾವೇದ್ ತರ ಯಾಕೆ ಬಟ್ಟೆ ಹಾಕೋದು, ರಶ್ಮಿಕಾ ಉರ್ಫಿನಾ ಫಾಲೋ ಮಾಡುತ್ತಿದ್ದಾರೆ ಎಂದು ಹಲವಾರು ರೀತಿಯ ಕಾಮೆಂಟ್ ಮಾಡಿದ್ದಾರೆ.

ಆದರೆ ಎಂದಿನಂತೆ ಜನರು ಎಷ್ಟೇ ಟ್ರೋಲ್ ಮಾಡಿದರೂ ರಶ್ಮಿಕಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ, ಇನ್ನೂ ಸಿನಿಮಾ ಅವಕಾಶಗಳು ಕಡಿಮೆ ಆಗಿಲ್ಲ. ಸದ್ಯ ಸ್ಯಾಂಡಲ್ ವುಡ್ ನಿಂದ ಟಾಲಿವುಡ್, ನಂತರ ಕಾಲಿವುಡ್ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಲೇ ಇದ್ದಾರೆ.

ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದು, ಸಂದೀಪ್ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬೇಡಿಕೆಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಒಬ್ಬರಾಗಿದ್ದಾರೆ ಅನ್ನುವುದು ಸತ್ಯ.