Home Breaking Entertainment News Kannada The Kerala Story: ʼದಿ ಕೇರಳ ಸ್ಟೋರಿʼ ಸಿನಿಮಾ ಬಗ್ಗೆ ವಿವಾದಗಳ ರಾಜನೆಂದೇ ಪ್ರಖ್ಯಾತಿ ಪಡೆದ...

The Kerala Story: ʼದಿ ಕೇರಳ ಸ್ಟೋರಿʼ ಸಿನಿಮಾ ಬಗ್ಗೆ ವಿವಾದಗಳ ರಾಜನೆಂದೇ ಪ್ರಖ್ಯಾತಿ ಪಡೆದ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿದ್ದಾದರೂ ಏನು?

The Kerala Story
Source: Asianet Telugu news

Hindu neighbor gifts plot of land

Hindu neighbour gifts land to Muslim journalist

The Kerala Story: ದೇಶಾದ್ಯಂತ ವಿವಾದದ ಕಿಡಿಯಿಂದಲೇ ಸದ್ದು ಮಾಡಿದ ‘ಲವ್‌ ಜಿಹಾದ್‌’ ಕಥೆಯಾಧಾರಿತ ಹಿಂದಿ ಸಿನಿಮಾ ‘ದಿ ಕೇರಳ ಸ್ಟೋರಿ’ ಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಮೇ 5ರಂದು ದೇಶದಾದ್ಯಂತ ರಿಲೀಸ್ ಆಗಿದೆ. ಇದೀಗ ಈ ಸಿನಿಮಾದ ಬಗ್ಗೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ (Ram Gopal Varma) ಟ್ವೀಟ್ ಮಾಡಿದ್ದಾರೆ. ಏನಂತಾ ಟ್ವೀಟ್ ಮಾಡಿದ್ರು ಗೊತ್ತಾ?

‘ತಮಿಳು ಮತ್ತು ಮಲಯಾಳಿ ಹುಡುಗಿ ನಟಿಸಿರುವ, ಗುಜರಾತಿ ನಿರ್ಮಾಪಕ, ಬೆಂಗಾಲಿ ನಿರ್ದೇಶಕ, ಹಿಂದಿ ಸಿನಿಮಾ, ಈಗ ಎಲ್ಲಾ ಭಾಷೆಗಳಲ್ಲಿಯೂ ಬ್ಲಾಕ್ ಬಸ್ಟರ್, ಟ್ರೂ ಪ್ಯಾನ್ ಇಂಡಿಯನ್ ಸಿನಿಮಾ’ ಎಂದು ರಾಮ್‌ ಗೋಪಾಲ್‌ ವರ್ಮಾ ಟ್ವೀಟ್ ಮಾಡಿದ್ದು, ಈ ಟ್ವೀಟ್ (Ram Gopal Varma tweet) ಸಖತ್ ವೈರಲ್ ಆಗುತ್ತಿದೆ.

ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಪ್ರೀತಿಯ ನೆಪವೊಡ್ಡಿ ಮತಾಂತರ ಮಾಡಿ ನಂತರ ಮದುವೆಯಾಗಿ, ಯುವತಿಯರನ್ನು ಅಫ್ಘಾನಿಸ್ತಾನಕ್ಕೆ ಕರೆದೊಯ್ದು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವ ಕತೆಯೇ ‘ದಿ ಕೇರಳ ಸ್ಟೋರಿ’. ಇದು ಕೇರಳದಲ್ಲಿ ನಡೆದ ನೈಜ ಘಟನೆಗಳು. ಇದಕ್ಕೆ ಸಾಕ್ಷಿ ಇದೆ ಎಂದು ನಿರ್ಮಾಪಕರು ಹೇಳುತ್ತಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಕೋಮುಗಲಭೆಯನ್ನು ಪ್ರಚೋದಿಸುತ್ತದೆ ಎಂದು ಹಲವೆಡೆ ಆಕ್ರೋಶ ವ್ಯಕ್ತವಾಗಿದ್ದು, ಸಿನಿಮಾವನ್ನು ಬ್ಯಾನ್ ಮಾಡಿ, ಥಿಯೇಟರ್ ನಲ್ಲಿ ತೋರಿಸಬೇಡಿ ಎಂದು ಅಸಮಾಧಾನ ವ್ಯಕ್ತವಾಗಿತ್ತು. ಆದರೆ, ಕೆಲವೆಡೆ ನಿರ್ಬಂಧಗಳ ನಡುವೆಯೇ ಈ ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾ ಕಲೆಕ್ಷನ್‌ ಉತ್ತಮವಾಗಿದ್ದು, ಜನರು ಸಿನಿಮಾದ ಕಥೆಗೆ ತಲೆದೂಗಿದ್ದಾರೆ. ಪ್ರದರ್ಶನಗೊಂಡ ಥಿಯೇಟರ್ ಫುಲ್ ಆಗಿತ್ತು ಎನ್ನಲಾಗಿದೆ. ಕೇವಲ 40 ಕೋಟಿಯಲ್ಲಿ ತಯಾರಾದ ಈ ಚಿತ್ರದ ಗಳಿಕೆ ತುಂಬಾ ಚೆನ್ನಾಗಿದೆ ಎನ್ನಲಾಗುತ್ತಿದೆ. ಚಿತ್ರ ಬ್ಲಾಕ್ ಬಸ್ಟರ್ ಹಿಟ್‌ ಆಗುವ ಲಕ್ಷಣಗಳು ಕಾಣುತ್ತಿವೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

ಈ ಹಿಂದೆ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ (RSS Leader Kalladka Prabhakar Bhat) ಅವರು ‘ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿ ಅಭಿಪ್ರಾಯವನ್ನು ಹಂಚಿಕೊಂಡಿದ್ದರು‌. “ಈ ಸಿನಿಮಾವನ್ನು ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ತನ್ನ ಕುಟುಂಬದ ಜೊತೆಗೆ ನೋಡಬೇಕು. ಹೆಣ್ಣು ಮಗಳ ಮೇಲೆ ಅನ್ಯಾಯ ಆದಾಗ ಸಮಾಜ ಸುಮ್ಮನೆ ಕೂರಬಾರದು. ಈ ಸಿನಿಮಾದ ಪ್ರಕಾರ ಕೇರಳದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ಮತಾಂತರ ಆಗಿದೆ. ನಂತರ ಅವರನ್ನು ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡಲಾಗಿದೆ. ಈ ಚಿತ್ರವನ್ನು ನಿಜಕ್ಕೂ ಹೆಣ್ಣು ಮಕ್ಕಳು ನೋಡಬೇಕು. ಇದರ ಬಗ್ಗೆ ಯೋಚನೆ ಮಾಡಬೇಕು. ತಾಯಿ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಬೇಕು” ಎಂದು ಹೇಳಿದರು.

 

ಇದನ್ನೂ ಓದಿ: Cat Superstition: ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಅಪಶಕುನವೇ? ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?