Home Breaking Entertainment News Kannada Jaggesh: ‘ಪುನೀತ್ ರಾಜಕುಮಾರ್ ಗೆ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಎಂದಿದ್ದ’ – ಗುರುಪ್ರಸಾದ್ ವಿರುದ್ಧ ಮತ್ತೊಂದು...

Jaggesh: ‘ಪುನೀತ್ ರಾಜಕುಮಾರ್ ಗೆ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಎಂದಿದ್ದ’ – ಗುರುಪ್ರಸಾದ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ನಟ ಜಗ್ಗೇಶ್

Hindu neighbor gifts plot of land

Hindu neighbour gifts land to Muslim journalist

Jaggesh : ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ಮಠ ಗುರುಪ್ರಸಾದ್‌ ಅವರು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಗುರುಪ್ರಸಾದ್ ಬಗ್ಗೆ ನಟ, ನವರಸ ನಾಯಕ ಜಗ್ಗೇಶ್(Jaggesh ) ಗುರುಪ್ರಸಾದ್(Guruprasad) ವಿರುದ್ಧ ಕೆಲವೊಂದು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಈ ವೇಳೆ ಅವರು ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್(Punith Rajkumar)ಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಈ ಮನುಷ್ಯ ಹಂಗಿಸಿದ್ದರು ಎಂಬುದಾಗಿ ಆರೋಪ ಮಾಡಿದ್ದಾರೆ.

ಹೌದು, ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ನಿರ್ದೇಶಸಿದ ಸಿನಿಮಾಗಳಲ್ಲಿ ನಟಿಸಿರುವ ನವರಸ ನಾಯಕ ಜಗ್ಗೇಶ್ ಅವರು ತಮ್ಮ ನಿರ್ದೇಶಕ ಅಂದರೆ ಗುರುಪ್ರಸಾದ್ ವಿರುದ್ಧವೇ ಕೆಲವು ಆರೋಪಗಳನ್ನು ಮಾಡಿದ್ದಾರೆ. ಗುರುಪ್ರಸಾದ್ ಅವರು ಪುನೀತ್ ರಾಜಕುಮಾರ್ ಗೆ ಕನ್ನಡ ಮಾತನಾಡಲು ಸರಿಯಾಗಿ ಬರಲ್ಲ. ನಾನೇ ಅವನಿಗೆ ಕನ್ನಡ ಮಾತನಾಡಲು ಹೇಳಿಕೊಟ್ಟಿದ್ದು ಎಂದು ಹೇಳಿದ್ದ ಎಂಬುದಾಗಿ ಜಗ್ಗೇಶ್ ಮಾಧ್ಯಮದವರೊಂದಿಗೆ ಹೇಳಿದ್ದಾರೆ.

ಅಲ್ಲದೆ ನಾನು ಮತ್ತು ಪುನೀತ್ ತಿರುಪತಿಗೆ ಹೋಗುವಂತಹ ಸಂದರ್ಭದಲ್ಲಿ ಪುನೀತ್ ಈ ವಿಚಾರವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ‘ಏನಣ್ಣ ಆ ಮನುಷ್ಯ ಹೇಗೆ ಹೇಳಿದ್ದಾನೆ. ನನಗೆ ಕನ್ನಡವೇ ಬರುವುದಿಲ್ಲ, ಅವನೇ ಕಲಿಸಿ ಕೊಟ್ಟಿದ್ದು ಎಂಬುದಾಗಿ ಹೇಳಿಕೊಂಡಿದ್ದಾನೆ. ಇದರಿಂದ ಪುನೀತ್, ನನಗೆ ತುಂಬಾ ಬೇಜಾರಾಗಿದೆ ಎಂದು ನೊಂದುಕೊಂಡಿದ್ದನು ಎಂದು ಹೇಳಿದ್ದಾರೆ.