Home Breaking Entertainment News Kannada OTT releases:‌ ಈ ವಾರ OTTಯಲ್ಲಿ ರಿಲೀಸ್ ಆಗ್ತಿವೆ ಈ ಎಲ್ಲಾ ಸಿನಿಮಾ ಹಾಗೂ ಶೋ...

OTT releases:‌ ಈ ವಾರ OTTಯಲ್ಲಿ ರಿಲೀಸ್ ಆಗ್ತಿವೆ ಈ ಎಲ್ಲಾ ಸಿನಿಮಾ ಹಾಗೂ ಶೋ ಗಳು- ಮಿಸ್ ಮಾಡ್ದೆ ನೋಡಿ

OTT releases

Hindu neighbor gifts plot of land

Hindu neighbour gifts land to Muslim journalist

OTT releases:‌ ದೀಪಾವಳಿ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡಲು ನಿಮಗೆ ಭರಪೂರ ಮನರಂಜನೆ ನೀಡುವ ನಿಟ್ಟಿನಲ್ಲಿ ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಲಿವೆ ಈ ಎಲ್ಲ ಸಿನಿಮಾ, ಶೋಗಳು!!ಒಟಿಟಿ ವೀಕ್ಷಕರಿಗೆ ಈ ವಾರ ಹಬ್ಬಕ್ಕೆ ಡಬಲ್ ಧಮಾಕಾ!! ವೀಕ್ಷಕರ ಅಭಿರುಚಿಗೆ ತಕ್ಕಂತೆ ಆಯಕ್ಷನ್‌, ಡ್ರಾಮಾ, ರೊಮ್ಯಾನ್ಸ್‌, ಮಿಸ್ಟ್ರಿ ಹೀಗೆ ವೈವಿಧ್ಯಮಯ ಸಿನಿಮಾ, ಸೀರಿಸ್‌ಗಳು ಪ್ರಸಾರವಾಗುತ್ತಿವೆ (OTT releases).

ಒಟಿಟಿಯಲ್ಲಿ ಈ ವಾರದ ರಿಲೀಸ್‌(OTT releases) ಆಗುವ ಸಿನಿಮಾ ಶೋಗಳು ಯಾವುದೆಲ್ಲ ಗೊತ್ತಾ?

# 007: ರೋಡ್‌ ಎ ಮಿಲಿಯನ್‌ (007: Road to a Million), ಅಮೆಜಾನ್‌ ಪ್ರೈಮ್‌ ವಿಡಿಯೊ
‘007: ರೋಡ್ ಟು ಎ ಮಿಲಿಯನ್’ ಶೋ ನವೆಂಬರ್‌ 10ರಿಂದ ಈ ಶೋವನ್ನು ವೀಕ್ಷಿಸಬಹುದು. ಒಂಬತ್ತು ಜೋಡಿ ಜೀವನವನ್ನು ಬದಲಾಯಿಸುವ ಮಿಲಿಯನ್ ಮೊತ್ತದ ಬಹುಮಾನದ ಶೋಧ ಕಾರ್ಯದಲ್ಲಿ ತೊಡಗಿರುವುದನ್ನು ತಿಳಿಸುತ್ತದೆ.

# ದಿ ಕಿಲ್ಲರ್‌ (The Killer), ನೆಟ್‌ಫ್ಲಿಕ್ಸ್‌
ಡೇವಿಡ್ ಫಿಂಚರ್ ನಿರ್ದೇಶಿಸಿರುವ, ‘ದಿ ಕಿಲ್ಲರ್’ ಅಮೆರಿಕಾದ ಆಯಕ್ಷನ್‌ ಥ್ರಿಲ್ಲರ್ ಚಿತ್ರವಾಗಿದೆ. ಮೈಕೆಲ್ ಫಾಸ್ಬೆಂಡರ್, ಅರ್ಲಿಸ್ ಹೊವಾರ್ಡ್, ಚಾರ್ಲ್ಸ್ ಪಾರ್ನೆಲ್, ಕೆರ್ರಿ ಒ’ಮ್ಯಾಲೆ, ಸಲಾ ಬೇಕರ್, ಸೋಫಿ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅಲೆಕ್ಸಿಸ್ ʼಮ್ಯಾಟ್ಜ್ʼ ನೊಲೆಂಟ್ ಮತ್ತು ಲ್ಯೂಕ್ ಜಕಾಮನ್ ಅವರ ಫ್ರೆಂಚ್ ಗ್ರಾಫಿಕ್ ಕಾದಂಬರಿ ಸರಣಿಯನ್ನು ಆಧರಿಸಿದ್ದು, ಈ ಚಿತ್ರ ನವೆಂಬರ್‌ 10ರಿಂದ ಪ್ರಸಾರವಾಗಲಿದೆ.

# ಫೇಮ್‌ ಆಫ್ಟರ್‌ ಫೇಮ್‌ (Fame After Fame), ನೆಟ್‌ಫ್ಲಿಕ್ಸ್‌
Netflix ನಲ್ಲಿ ನವೆಂಬರ್‌ 10ರಿಂದ ವೀಕ್ಷಣೆಗೆ ಲಭ್ಯವಿರುವ ಫೇಮ್‌ ಆಫ್ಟರ್‌ ಫೇಮ್ ರಿಯಾಲಿಟಿ ಶೋ ಸರಣಿಯಾಗಿದೆ. ಸ್ಪ್ಯಾನಿಷ್ ಟಿವಿಯಲ್ಲಿ 14 ಯಶಸ್ವಿ ವರ್ಷಗಳನ್ನು ಪೂರೈಸಿದ ಬಳಿಕ ಅಮೆರಿಕದಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಹುಡುಕುವವರ ಬಗ್ಗೆ ಕಥೆ ಹೆಣೆಯಲಾಗಿದೆ.

# ದೀನಾ ಹಾಶೆಮ್: ಡಾರ್ಕ್‌ ಲಿಟ್ಲ್‌ ಮಿಸ್ಪರ್ಸ್‌ (Dina Hashem: Dark Little Whispers), ಅಮೆಜಾನ್‌ ಪ್ರೈಮ್‌ ವಿಡಿಯೊ
ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ನವೆಂಬರ್‌ 10ರಂದು ಸ್ಟ್ರೀಮಿಂಗ್‌ ಆಗಲಿರುವ ದೀನಾ ಹಾಶೆಮ್: ಡಾರ್ಕ್‌ ಲಿಟ್ಲ್‌ ಮಿಸ್ಪರ್ಸ್‌ ಶೋದಲ್ಲಿ ಸ್ಟ್ಯಾಂಡ್-ಅಪ್ ಕಾಮೆಡಿಯನ್‌ ದೀನಾ ಹಾಶೆಮ್ ಸಾವಿನ ಬೆದರಿಕೆಗಳು, ಅಸ್ತಿತ್ವದ ಸಂದಿಗ್ಧತೆ ಮಾತ್ರವಲ್ಲದೇ ವಿವಿಧ ವಿಷಯಗಳ ಬಗ್ಗೆ ತನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ.

# ದಿ ಗ್ರ್ಯಾಂಡ್‌ ಟೂರ್‌ ಸೀಸನ್‌ 5 (The Grand Tour Season 5), ಅಮೆಜಾನ್‌ ಪ್ರೈಮ್‌ ವಿಡಿಯೊ
ಫಿಲ್ ಚರ್ಚ್ವರ್ಡ್ ನಿರ್ದೇಶಿಸಿರುವ ಕ್ರೀಡಾ ಸಾಕ್ಷ್ಯ ಚಿತ್ರವಾಗಿರುವ ಗ್ರ್ಯಾಂಡ್‌ ಟೂರ್‌ ಸೀಸನ್‌ 5 (The Grand Tour Season 5), ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ನವೆಂಬರ್‌ 16ರಿಂದ ‘ದಿ ಗ್ರ್ಯಾಂಡ್‌ ಟೂರ್‌ ಸೀಸನ್‌ 5’ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಬಹುದು.

# ಅಪೂರ್ವ (Apurva), ಡಿಸ್ನಿ + ಹಾಟ್‌ಸ್ಟಾರ್‌
ನಿಖಿಲ್‌ ನಾಗೇಶ್‌ ಭಟ್‌ ನಿರ್ದೇಶಿಸಿರುವ ಥ್ರಿಲ್ಲರ್ ಹಿಂದಿ ಚಿತ್ರ ʼಅಪೂರ್ವʼ ನವೆಂಬರ್‌ 15ರಂದು ರಿಲೀಸ್‌ ಆಗಲಿದೆ. ಅಭಿಷೇಕ್‌ ಬ್ಯಾನರ್ಜಿ, ತಾರಾ ಸುತಾರಿಯಾ, ಧೈರ್ಯ ಕರ್ವಾ ಮತ್ತು ರಾಜ್‌ಪಾಲ್‌ ಯಾದವ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

# ಎಟ್‌ ದಿ ಮೂವ್‌ಮೆಂಟ್‌ (At the Moment), ನೆಟ್‌ಫ್ಲಿಕ್ಸ್‌
ಡ್ರಾಮಾಗಳ ಸರಣಿಯಾಗಿರುವ ಎಟ್‌ ದಿ ಮೂವ್‌ಮೆಂಟ್‌ (At the Moment), ನೆಟ್‌ಫ್ಲಿಕ್ಸ್‌ ನಲ್ಲಿ ನವೆಂಬರ್‌ 10ರಂದು ಪ್ರಸಾರವಾಗಲಿದೆ . ಕೊರೊನಾ ಸಾಂಕ್ರಾಮಿಕ ರೋಗ ಹರಡಿದ್ದ ಕಾಲಘಟ್ಟದ ಕಥೆಯನ್ನು ಒಳಗೊಂಡಿದ್ದು,10 ವಿಶಿಷ್ಟ ಪ್ರೇಮಕಥೆಯನ್ನ ಒಳಗೊಂಡಿದೆಯಂತೆ.

 

ಇದನ್ನು ಓದಿ: Nandini Milk Price Hike: ರಾಜ್ಯದ ಜನತೆಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ- ಹಾಲಿನ ದರದಲ್ಲಿ ಏರಿಕೆ ?!