Home Breaking Entertainment News Kannada Rocking Star Yash: ನನ್ ಹೆಂಡ್ತಿ ರಾಧಿಕಾ ನನ್ನ ಹತ್ರ ಅದೊಂದು ಬಿಟ್ಟು ಬೇರೇನೂ ಕೇಳಲ್ಲ..!...

Rocking Star Yash: ನನ್ ಹೆಂಡ್ತಿ ರಾಧಿಕಾ ನನ್ನ ಹತ್ರ ಅದೊಂದು ಬಿಟ್ಟು ಬೇರೇನೂ ಕೇಳಲ್ಲ..! ಸಿಕ್ರೇಟ್‌ ರಿವೀಲ್‌ ಮಾಡಿದ ಯಶ್‌

Hindu neighbor gifts plot of land

Hindu neighbour gifts land to Muslim journalist

Rocking Star Yash: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ಹಾಗೂ ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್(Rocking Star) ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು ಈ ವೇಳೆ ವೃತ್ತಿ ಜೀವನ ಹಾಗೂ ಖಾಸಗಿ ಜೀವನದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿ ಹಾಗೂ ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

‘ಬಾಳ ಸಂಗಾತಿ ರಾಧಿಕಾ ಹಾಗೂ ನಾನು ಇಂಡಸ್ಟ್ರಿಯಲ್ಲಿ ಜೊತೆಯಾಗಿ ಬಂದು ಒಟ್ಟಿಗೆ ಬೆಳೆದವರು. ಆಕೆ ನನ್ನ ಸ್ಟ್ರೆಂಥ್‌. ಪತ್ನಿಗಿಂತ ಮೊದಲು ಗೆಳತಿ. ಹೀಗಾಗಿ ನನ್ನ ಬಗ್ಗೆ ಅವಳಿಗೆ, ಅವಳ ಬಗ್ಗೆ ನನಗೆ ಎಲ್ಲ ವಿಚಾರ ಗೊತ್ತು. ಇಲ್ಲವಾದರೆ ನನ್ನಂಥಾ ವರ್ಕೋಹಾಲಿಕ್‌, ಕ್ರೇಜಿ ವ್ಯಕ್ತಿಯ ಜೊತೆ ಬದುಕೋದು ಬಹಳ ಕಷ್ಟ. ನಾನೊಂದು ಸಿನಿಮಾ ಒಪ್ಪಿಕೊಂಡರೆ ಆಕೆ ಈ ಸಿನಿಮಾ ಎಷ್ಟು ದುಡ್ಡು ಮಾಡಬಹುದು ಅಂತೆಲ್ಲ ಕೇಳಲ್ಲ. ಬದಲಿಗೆ ನೀನು ಖುಷಿಯಾಗಿದ್ದೀಯಾ ಅಂತಷ್ಟೇ ಕೇಳ್ತಾಳೆ. ಅವಳು ಕೇಳೋದು ನನ್ನ ಗಮನ ಮತ್ತು ಸಮಯ. ಅದನ್ನೂ ಅವಳಿಗೆ ನೀಡೋದು ಕಷ್ಟವಾಗುತ್ತಿದೆ’ ಎಂದು ಯಶ್‌ ಹೇಳಿದ್ದಾರೆ.

ಅಲ್ಲದೆ ರಾಧಿಕಾ ಯಾವಾಗಲೂ ನನ್ನ ಅಟೆಂಕ್ಷನ್ ಹಾಗೂ ಟೈಮ್ ಮಾತ್ರ ಕೇಳುತ್ತಾಳೆ. ಅದೇ ನನಗೆ ಬಹಳ ಕಷ್ಟ. ಆದರೆ ಅದು ನನ್ನ ಜವಾಬ್ದಾರಿ. ನನ್ನ ಗುರಿ ಸಾಧನೆಗೆ ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ. ಅದಕ್ಕೆ ನನ್ನ ಫ್ಯಾಮಿಲಿ ಬೆಂಬಲವಿದೆ. ರಾಧಿಕಾ ಕೇಳುವುದು ಎಷ್ಟು ದಿನ ಶೂಟಿಂಗ್, ಯಾವಾಗ ಮತ್ತೆ ಸಿಗ್ತೀರಾ? ಈ ಪ್ರಾಜೆಕ್ಟ್ ಎಷ್ಟು ದಿನ ಅಂತ ಕೇಳ್ತಾರೆ. ಹಾಗಾಗಿ ನಾನು ನಿಜಕ್ಕೂ ಅದೃಷ್ಟವಂತ” ಎಂದು ಯಶ್ ಹೇಳಿಕೊಂಡಿದ್ದಾರೆ.