Home Breaking Entertainment News Kannada Actor Vinod Thomas Death: ಕಾರಿನೊಳಗೆ ಶವವಾಗಿ ಪತ್ತೆಯಾದ ಮಾಲಿವುಡ್ ನಟ: ಕಾರಣ ನಿಗೂಢ!

Actor Vinod Thomas Death: ಕಾರಿನೊಳಗೆ ಶವವಾಗಿ ಪತ್ತೆಯಾದ ಮಾಲಿವುಡ್ ನಟ: ಕಾರಣ ನಿಗೂಢ!

Actor Vinod Thomas Death

Hindu neighbor gifts plot of land

Hindu neighbour gifts land to Muslim journalist

Actor Vinod Thomas Death : ಮಲೆಯಾಳಂ ಚಿತ್ರರಂಗದ ಜನಪ್ರಿಯ ನಟ ವಿನೋದ್ ಥಾಮ್ಸ್ (Actor Vinod Thomas Death)ಅವರ ಶವ ಕೇರಳದ ಕೊಟ್ಟಾಯಂನ(Kottayam) ಪಂಪಾಡಿ ಬಳಿಯ ಹೊಟೆಲ್‌ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಪತ್ತೆಯಾಗಿದೆ. ಇದನ್ನು ಕಂಡ ಜನರು ಅಚ್ಚರಿಗೆ ಒಳಗಾಗಿದ್ದಾರೆ.

ಮಲಯಾಳಂ ನಟ ವಿನೋದ್ ಥಾಮಸ್ (45)ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಆವರಣದಲ್ಲಿ ದೀರ್ಘಕಾಲದಿಂದ ನಿಲ್ಲಿಸಿದ ಕಾರಿನೊಳಗೆ ವ್ಯಕ್ತಿಯೊಬ್ಬರಿದ್ದಾರೆಂದು ಹೋಟೆಲ್ ಆಡಳಿತವು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ವಿನೋದ್ ಥಾಮಸ್ ಅವರ ದೇಹ ಕಾರಿನೊಳಗೆ(Death Inside Car) ಕಂಡುಬಂದಿದೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ಡೋರ್ ಒಡೆದು ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಆದರೆ, ಅಲ್ಲಿ ವೈದ್ಯರು ವಿನೋದ್ ಅವರು ಮೃತಪಟ್ಟ ವಿಚಾರ ಘೋಷಿಸಿದ್ದಾರೆ ಎನ್ನಲಾಗಿದೆ.

ನಟನ ಸಾವಿಗೆ ನೈಜ ಕಾರಣವನ್ನು ಖಚಿತಪಡಿಸಿಕೊಳ್ಳಲು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ವರದಿಗಳ ಪ್ರಕಾರ, ಕಾರಿನ ಎಸಿಯಿಂದ ವಿಷಕಾರಿ ಅನಿಲವನ್ನು ಉಸಿರಾಡಿದ ಪರಿಣಾಮ ವಿನೋದ್ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ನಟ ವಿನೋದ್ ಥಾಮಸ್ ಹೀಗೆ ದುರಂತ ಅಂತ್ಯ ಕಂಡಿದ್ದು ಮಲಯಾಳಂ ಚಿತ್ರಪ್ರೇಕ್ಷಕರಿಗೆ ಆಘಾತ ತಂದಿದೆ.

ಇದನ್ನೂ ಓದಿ: Miss Universe 2023: 2023 ರ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಇವರೇ!!