Home Breaking Entertainment News Kannada Meghana Raj: ಅಂತೂ ಚಿರು ಮನೆಯನ್ನು ಕಂಪ್ಲೀಟ್ ಆಗಿ ತೊರೆದ ಮೇಘನಾ ರಾಜ್ – ಈ...

Meghana Raj: ಅಂತೂ ಚಿರು ಮನೆಯನ್ನು ಕಂಪ್ಲೀಟ್ ಆಗಿ ತೊರೆದ ಮೇಘನಾ ರಾಜ್ – ಈ ನಿರ್ಧಾರದ ಹಿಂದಿದೆ ಆ ಬಲವಾದ ಕಾರಣ!!

Hindu neighbor gifts plot of land

Hindu neighbour gifts land to Muslim journalist

Meghana Raj: ಸ್ಯಾಂಡಲ್‌ವುಡ್ ‘ರಾಜಾ ಹುಲಿ’ ನಟಿ ಮೇಘನಾ ರಾಜ್ (Meghana raj Sarja) ಮತ್ತೆ ಸುದ್ದಿಯಲ್ಲಿದ್ದಾರೆ. ಅವರೀಗ ಹೊಸ ಮನೆ ಕಟ್ಟಿಸಿ ಅದರ ‘ಗೃಹಪ್ರವೇಶ’ದ ಮೂಲಕ ಕರುನಾಡ ತುಂಬೆಲ್ಲಾ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಪ್ರತಿಪ್ಠಿತ ಬಡಾವಣೆಯಲ್ಲಿ ಮನೆ ಕಟ್ಟಿಸಿ ಮನೆಯೊಳಕ್ಕೆ ಹೋದ ಮೇಘನಾ ರಾಜ್‌ ಅವರಿಗೆ ಆಪ್ತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಆದ್ರೆ ಮೇಘನಾ ರಾಜ್ ಸರ್ಜಾ ಖುಷಿ ಖುಷಿಯಾಗಿ ಹೊಸಮನೆ ಪೋಟೋ ಹಂಚಿಕೊಳ್ತಿದ್ದಂಗೆ ಚಿರು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇನ್ಮುಂದೇ ಶಾಶ್ವತವಾಗಿ ಮೇಘನಾ ಚಿರು ಮನೆಯಿಂದ ದೂರವಾದ್ರಾ ಅಂತ ಕೊರಗ್ತಿದ್ದಾರೆ.

ಹೌದು, ಹೊಸ ಮನೆ ಕಟ್ಟಿಸಿರೋ ಮೇಘನಾ ತನ್ನ ಮನೆಗೆ ಮೇಘನಾ ರಾಜ್ ಸರ್ಜಾ ಹಾಗೂ ರಾಯನ್ ರಾಜ್ ಎಂದಷ್ಟೇ ಹೆಸರು ಹಾಕಿಸಿದ್ದಾರೆ. ರಾಯನ್ ರಾಜ್ ಮುಂದೇ ಸರ್ಜಾ ಸರ್ ನೇಮ್ ಬಿಟ್ಟಿರೋದು ಚಿರು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.

ಯಸ್, 2021 ರಲ್ಲಿ ನಟಿ ಮೇಘನಾ ರಾಜ್ ಐದು ತಿಂಗಳ ಗರ್ಭೀಣಿ ಆಗಿದ್ದಾಗ ಪತಿ ಹಾಗೂ ನಟ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡರು. ಅಂದಿನಿಂದ ನಟಿ ಮೇಘನಾ ರಾಜ್ ಸರ್ಜಾ ತಮ್ಮ ತವರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮೇಘನಾ ರಾಜ್ ಸರ್ಜಾ ಪೋಷಕರು ಕೂಡ ನಮಗಿರೋದು ಒಂದೇ ಮಗಳು. ಅವಳನ್ನು ಯಾರು ನೋಡೋದು ಬೇಡ ನಾವೇ ನೋಡಿಕೊಳ್ತಿವಿ ಎಂದಿದ್ದರು. ಈಗ ಮೇಘನಾ ತಮಗಾಗಿ ತಮ್ಮದೇ ಆಯ್ಕೆಯಂತೆ ಮನೆ ಕಟ್ಟಿಕೊಂಡಿದ್ದಾರೆ. ಈ ಮನೆ ನೋಡ್ತಿದ್ದಂತೆ ಮೇಘನಾ ಹಾಗೂ ಚಿರು ಅಭಿಮಾನಿಗಳು ಹಾಗಿದ್ದರೇ ಇನ್ನೆಂದೂ ಮೇಘನಾ ರಾಜ್ ಸರ್ಜಾ ಚಿರಂಜೀವಿ ಮನೆಗೆ ಹೋಗಲ್ವಾ ಅಂತ ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ ಚಿರು ಮನೆಯಿಂದ ನಿಜವಾಗಿಯೂ ಮೇಘನಾ ದೂರ ಉಳಿದಿದ್ದಾರೆ. ಆದರೆ ಅದಕ್ಕೂ ಬಲವಾದ ಕಾರಣವಿದೆಯಂತೆ.

ಮೂಲಗಳ ಪ್ರಕಾರ ನಿಜವಾಗಿಯೂ ಚಿರು ಮನೆಯಿಂದ ದೂರ ಇರಲು ಮೇಘನಾ ನಿರ್ಧರಿಸಿದ್ದಾರಂತೆ. ಅದಕ್ಕೂ ಸಕಾರಣವಿದೆ. ಮೇಘನಾ ಚಿರು ಆಮನೆಯಲ್ಲಿ ಖುಷಿ ಖುಷಿಯಾಗಿ ಒಂದಾಗಿ ಬದುಕಿದ್ದರು. ಜೀವನದ ಬಗ್ಗೆ ಭವಿಷ್ಯದ ಬಗ್ಗೆ ಸಾವಿರಾರು ಕನಸು ಕಂಡಿದ್ದರು. ಆದರೆ ಈಗ ಚಿರು ಬದುಕಿಲ್ಲ. ಹೀಗಾಗಿ ಆ ಮನೆಗೆ ಹೋದರೇ ಸದಾಕಾಲ ಮೇಘನಾನೆ ಎಲ್ಲಾ ಕಡೆ ಚಿರು ನೆನಪು ಕಾಡಿ ಮನಸ್ಸಿಗೆ ನೋವಾಗುತ್ತದೆ. ಇತ್ತೀಚಿಗೆ ಕಷ್ಟಪಟ್ಟು ನೋವಿನಿಂದ ಹೊರಬಂದು ಮಗನ ಮುಖ ನೋಡಿ ಹೊಸ ಬದುಕು ಆರಂಭಿಸಿದ್ದಾರೆ. ಹೀಗಾಗಿ ಚಿರು ನೆನಪು ಮತ್ತು ಮಗನ ಬಾಲ್ಯದ ಜೊತೆ ಖುಷಿಯಾಗಿ ಬದುಕಲು ಮೇಘನಾ ಹೊಸ ಮನೆ ಕಟ್ಟಿದ್ದಾರಂತೆ.

ಇನ್ನು ನಟಿ ಮೇಘನಾ ರಾಜ್ ಮನೆಯ ಗೃಹಪ್ರವೇಶ ಫಂಕ್ಷನ್‌ನಲ್ಲಿ ಕನ್ನಡ ಚಿತ್ರರಂಗದ ಆಪ್ತರು ಮತ್ತು ಕನ್ನಡ ಕಿರುತೆರೆಯ ಹಲವರು ಭಾಗಿಯಾಗಿ ನಟಿ ಮೇಘನಾಗೆ ಶುಭ ಹಾರೈಸಿದ್ದಾರೆ. ನೀಲಿ ಬಣ್ಣದ ಜರಿತಾರಿ ಸೀರೆಯಲ್ಲಿ ಮೇಘನಾ ಅಂದು ಮಿಂಚಿದ್ದಾರೆ. ಮೇಘನಾ ಅಪ್ಪ ಸುಂದರ್‌ ರಾಜ್, ಅಮ್ಮ ಪ್ರಮೀಳಾ ಜೋಷಾಯ್ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಳೆ ತಂದಿದ್ದಾರೆ. ಕನ್ನಡದ ‘ರಾಜಾಹುಲಿ’ (Raja Huli) ನಟಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.