Home Breaking Entertainment News Kannada Unni Mukundan: ವೀಡಿಯೋ ಮಾಡಲೆತ್ನಿಸಿದ ಅಭಿಮಾನಿಯ ಮೊಬೈಲ್‌ ಕಿತ್ತು ಕಿಸೆಗೆ ಹಾಕಿದ ʼಮಾರ್ಕೊʼ ಸಿನಿಮಾ ನಟ

Unni Mukundan: ವೀಡಿಯೋ ಮಾಡಲೆತ್ನಿಸಿದ ಅಭಿಮಾನಿಯ ಮೊಬೈಲ್‌ ಕಿತ್ತು ಕಿಸೆಗೆ ಹಾಕಿದ ʼಮಾರ್ಕೊʼ ಸಿನಿಮಾ ನಟ

Hindu neighbor gifts plot of land

Hindu neighbour gifts land to Muslim journalist

Unni Mukundan: ಮಾಲಿವುಡ್‌ ನಟ ಉನ್ನಿ ಮುಕುಂದನ್‌ ತಮ್ಮ ಅಭಿಮಾನಿಯೊಬ್ಬರ ಮೇಲೆ ಸಿಟ್ಟುಗೊಂಡಿರುವ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಾರ್ಕೋ ಸಿನಿಮಾದ ಮೂಲಕ ಖ್ಯಾತಿ ಪಡೆದ ಉನ್ನಿ ಮುಕುಂದನ್‌ ಅವರ ಹೊಸ ಸಿನಿಮಾ ಇತ್ತೀಚೆಗೆ ರಿಲೀಸ್‌ ಆಗಿದೆ. ಅದರ ಪ್ರಚಾರ ಕೆಲಸದಲ್ಲಿ ನಟ ಬ್ಯುಸಿಯಾಗಿದ್ದಾರೆ.

ತಮ್ಮ ಮುಂಬರುವ ಸಿನಿಮಾ ಗೆಟ್‌-ಸೆಟ್‌-ಬೇಬಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಈ ಸಿನಿಮಾ ರಿಲೀಸ್‌ ಆಗಿದ್ದು, ಪ್ರೇಕ್ಷಕರು ತಮ್ಮ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಪ್ರಚಾರಕ್ಕೆಂದು ಬಂದಿದ್ದ ಉನ್ನಿ ಮುಕುಂದನ್‌ ಅವರ ವೀಡಿಯೋ ಮಾಡಲೆಂದು ಅಭಿಮಾನಿಯೊಬ್ಬ ಮುಂದೆ ಬಂದು ಮೊಬೈಲನ್ನು ತೀರಾ ನಟನ ಮುಖದ ಸಮೀಪಕ್ಕೆ ತಂದಿದ್ದು, ಇದರಿಂದ ತಾಳ್ಮೆ ಕಳೆದುಕೊಂಡ ನಟ ಉನ್ನಿ ಮುಕುಂದನ್‌ ಅಭಿಮಾನಿಯ ಮೊಬೈಲ್‌ ಕಿತ್ತು ಕಿಸೆಯೊಳಗೆ ಹಾಕಿ ಕೋಪದಿಂದ ವರ್ತನೆ ಮಾಡಿದ್ದಾರೆ.

ನಂತರ ಅಭಿಮಾನಿ ಮೊಬೈಲ್‌ ಪಡೆದುಕೊಂಡಿದ್ದಾನೆ. ಉನ್ನಿಮುಕುಂದನ್‌ ಅವರಿಗೆ ಯಶಸ್ಸು ತಲೆಗೇರಿದೆ ಅದಕ್ಕೆ ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಕೆಲವರು ಕಮೆಂಟ್‌ ಮಾಡುತ್ತಿದ್ದಾರೆ. ಅಭಿಮಾನಿಗಳಿಂದ ನಿಮ್ಮ ಸಿನಿಮಾ ಯಶಸ್ಸು ಕಂಡಾಗ ಬೆಂಬಲ ನೀಡುವ ಅಭಿಮಾನಿಗಳು ನಿಮ್ಮ ಬಳಿಗೆ ಬಂದಾಗ ನಿಮಗೆ ಕಿರಿಕಿರಿ ಆಗುತ್ತದೆಯೇ ಎಂದು ಕಮೆಂಟ್‌ ಮಾಡಿದ್ದಾರೆ.