Home Breaking Entertainment News Kannada Bigg Boss Kannada Season 10: ಬಿಗ್ ಬಾಸ್ ಸೀಸನ್-10ಕ್ಕೆ ಎಂಟ್ರಿ ಕೊಡೋ ಸ್ಪರ್ಧಿಗಳ ಪಟ್ಟಿ...

Bigg Boss Kannada Season 10: ಬಿಗ್ ಬಾಸ್ ಸೀಸನ್-10ಕ್ಕೆ ಎಂಟ್ರಿ ಕೊಡೋ ಸ್ಪರ್ಧಿಗಳ ಪಟ್ಟಿ ರಿಲೀಸ್- ನಿಮ್ಮ ಫೇವರಿಟ್ ಯಾರಾದ್ರೂ ಇದ್ದಾರಾ ?!

Bigg Boss Kannada Season 10

Hindu neighbor gifts plot of land

Hindu neighbour gifts land to Muslim journalist

Bigg Boss Kannada Season 10: ಕಲರ್ಸ್ ಕನ್ನಡ (colors kannada) ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ (biggboss) ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ಕಾರ್ಯಕ್ರಮದ ತಯಾರಕರು ಸೀಸನ್ 10 ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಬಿಗ್ ಬಾಸ್ 10 ಈಗಾಗಲೇ ಇದರ ಭರ್ಜರಿ ಟೀಸರ್ ಜೊತೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಹೀಗಾಗಿ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಅಲ್ಲದೇ ದೊಡ್ಮನೆ ಆಟಕ್ಕೆ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಕನ್ನಡಿಗರೂ ಕಾರ್ಯಕ್ರಮದ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ಆಟ ಶುರುವಾಗಲು ನಾಲ್ಕು ದಿನ ಬಾಕಿಯಿದ್ದು, ಈ ಬಾರಿ ದೊಡ್ಮನೆ ಆಟದಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬುದರ ಮತ್ತೊಂದು ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಹರಿದಾಡುತ್ತಿದೆ. ಅಕ್ಟೋಬರ್ 8ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪ್‌ನಿಂಗ್‌ಗೆ ಸಾಕಷ್ಟು ತಯಾರಿ ನಡೆಯುತ್ತಿದ್ದು, ಈಗ ಮತ್ತೆ ಒಂದಿಷ್ಟು ಹೊಸ ಸ್ಪರ್ಧಿಗಳ ಹೆಸರು ವೈರಲ್ ಆಗುತ್ತಿದೆ.

ದೊಡ್ಮನೆಗೆ ಆಟಕ್ಕೆ ಮೊದಲ ಸ್ಪರ್ಧಿಯಾಗಿ ‘777 ಚಾರ್ಲಿ’ ಎಂಟ್ರಿ ಕೊಡುವ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ. ನಟ ಸುನೀಲ್ ರಾವ್, ಭವ್ಯಾ ಗೌಡ (Bhavya Gowda), ರಘು ಮುಖರ್ಜಿ, ಸಮಾಜ ಸೇವಕಿ ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ‘ಕೆಜಿಎಫ್’ ನಟಿ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ರಕ್ಷಕ್ ಬುಲೆಟ್ ಪ್ರಕಾಶ್, ರ‍್ಯಾಪರ್ ಇಶಾನಿ ಸೇರಿದಂತೆ ಹಲವರು ಬಿಗ್ ಬಾಸ್ ಸ್ಪರ್ಧಿಸುವ ಸ್ಯಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 8ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ, ಮೊದಲ ದಿನ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಮರುದಿನದಿಂದ ಪ್ರತಿ ರಾತ್ರಿ 9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಪ್ರೋಮೋ ಕೂಡ ಮಾಡಿದೆ