Home Breaking Entertainment News Kannada KSCA: FIR ರದ್ದು ಮಾಡುವಂತೆ KSCA ಅರ್ಜಿ: ಷರತ್ತುಬದ್ಧ ರಿಲೀಫ್ ನೀಡಿದ ಹೈ ಕೋರ್ಟ್

KSCA: FIR ರದ್ದು ಮಾಡುವಂತೆ KSCA ಅರ್ಜಿ: ಷರತ್ತುಬದ್ಧ ರಿಲೀಫ್ ನೀಡಿದ ಹೈ ಕೋರ್ಟ್

Hindu neighbor gifts plot of land

Hindu neighbour gifts land to Muslim journalist

KSCA: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಮಾಡುವಂತೆ ಕೆಎಸ್ಸಿಎ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟ್ ಷರತ್ತುಬದ್ಧ ರಿಲೀಫ್ ಅನ್ನು ನೀಡಿದೆ.

ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡವೆಂದು, ವಿಚಾರಣೆಗೆ ಸಹಕಾರ ನೀಡುವಂತೆ ಷರತ್ತು ವಿಧಿಸಿದೆ. ಇದರಿಂದಾಗಿ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜೈರಾಮ್‌ ಅವರಿಗೆ ರಿಲೀಫ್ ಸಿಕ್ಕಿದೆ.