Home Breaking Entertainment News Kannada Krithi Shetty: ಬಿಕನಿ ಹಾಕ್ತೀನಿ, ಬೋಲ್ಡ್ ಪಾತ್ರನೂ ಮಾಡ್ತೀನಿ – ನಿರ್ಮಾಪಕರಿಗೆ ಬಿಗ್ ಆಫರ್ ಕೊಟ್ಟ...

Krithi Shetty: ಬಿಕನಿ ಹಾಕ್ತೀನಿ, ಬೋಲ್ಡ್ ಪಾತ್ರನೂ ಮಾಡ್ತೀನಿ – ನಿರ್ಮಾಪಕರಿಗೆ ಬಿಗ್ ಆಫರ್ ಕೊಟ್ಟ ಕೃತಿ ಶೆಟ್ಟಿ!!

Krithi Shetty

Hindu neighbor gifts plot of land

Hindu neighbour gifts land to Muslim journalist

Krithi Shetty: ದಕ್ಷಿಣ ಭಾರತ ಸಿನಿಮಾಗಳಲ್ಲಿ ಆರಂಭದ ದಿನಗಳಲ್ಲಿ ಹೊಸ ಭರವಸೆ ಮೂಡಿಸಿದ್ದ ಮಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ(Krithi Shetty) ನಟನೆಯ ಕೆಲ ತೆಲುಗು ಸಿನಿಮಾಗಳು ಒಂದರ ಹಿಂದೊಂದು ಫ್ಲಾಪ್ ಆಗಿದ್ದವು. ಈಗಂತೂ ಯಾವ ಆಫರ್ ಗಳಿಲ್ಲದೆ ನಟಿ ಮನೆಯಲ್ಲೇ ಕೂರುವ ಸ್ಥಿತಿ ಬಂದಿದೆ. ಆದರೀಗ ಅಚ್ಚರಿ ಎಂಬಂತೆ ನಟಿ ಎಲ್ಲಾ ನಿರ್ಮಾಪಕರಿಗೆ ಬಿಗ್ ಆಫರ್ ನೀಡಿದ್ದು ತಾನು ಬೋಲ್ಡ್ ಸೀನ್ ಗಳಲ್ಲಿ ನಟಿಸಲು ರೆಡಿ ಎಂದಿದ್ದಾರೆ.

ಇದನ್ನೂ ಓದಿ: BJP ಸದಸ್ಯತ್ವಕ್ಕೆ ಸಂಸದ ಕರಡಿ ಸಂಗಣ್ಣ ರಾಜೀನಾಮೆ!!

ಹೌದು, ‘ಬಿಕಿನಿ'(Bikini)ಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ಎರಡಲ್ಲ ”ಐದು ಕೋಟಿ”ಯನ್ನ ಕೋಡಬೇಕೆಂದು, ಕೃತಿ ಶೆಟ್ಟಿ ಹಿಂದೆ ಪಟ್ಟು ಹಿಡಿದಿದು ಆಂಧ್ರದಲ್ಲಿ ಈ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಗೀಡಾಗಿದ್ದ ಕೃತಿ ಶೆಟ್ಟಿ ಇದಕ್ಕೆ ತಕ್ಕ ಶಿಕ್ಷೆ ಅನುಭವಿಸಿದರು. ಈಕೆಗೆ ಹಣದ ಮೇಲೆ ಇರುವ ”ಪ್ರೀತಿ”ಯನ್ನ ಕಂಡು ಟಾಲಿವುಡ್ಡಿಗೆ ಟಾಲಿವುಡ್ಡೇ ಬೆಚ್ಚಿ ಬಿದ್ದಿತ್ತು. ಈ ‘ಮೋಹ-ದಾಹ’ವೇ ಈಕೆಯನ್ನು ಮೂಲೆಗುಂಪಾಗಿಸಿತು. ಇದೀಗ ಎಲ್ಲದರಿಂದಲೂ ಸರಿಯಾಗಿ ಬುದ್ಧಿ ಕಲಿತಿರುವ ನಟಿ ಓಪನ್ ಆಗಿ ನಿರ್ಮಾಪಕರಿಗೆ ಆಫರ್ ನೀಡಿ ತಾನು ಎಲ್ಲಾ ಪಾತ್ರಕ್ಕೂ ರೆಡಿ, ತುಂಡುಡುಗೆಯನ್ನೂ ಹಾಕ್ತೀನಿ, ಎಲ್ಲಾ ಬೋಲ್ಡ್ ಡ್ರೆಸ್ ಕೂಡ ತೊಡ್ತೀನಿ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ 10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಹೃತಿಕ್ ರೋಷನ್ (Hrithik Roshan) ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರ ‘ಉಪ್ಪೇನ’ ಮತ್ತು ‘ಬಂಗಾರ್‌ರಾಜು’ ಸಿನಿಮಾ ಗೆಲ್ತಿದ್ದಂತೆ ತಮ್ಮ ಸಂಭಾವನೆಯನ್ನ ಏರಿಸಿದ್ದರು. ಉಪ್ಪೇನ” ಚಿತ್ರದ ಮೂಲಕ, ಸಿಹಿಯಾದ ಲಿಂಬು ಉಪ್ಪಿನಕಾಯಿಯನ್ನ ಸವಿದ ”ಕೃತಿ”, ಆ ನಂತರ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡುವುದರ ಮೂಲಕ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದರು. ”ಎರಡು ಕೋಟಿ” ಕಡಿಮೆ ಒಂದು ರೂಪಾಯಿಯನ್ನೂ ತೆಗೆದುಕೊಳ್ಳಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಸುದ್ದಿಯಾಗಿದ್ದರು. ಸಂಚಲನವನ್ನೂ ಸೃಷ್ಟಿಸಿದ್ದರು.

ಆದರೀಗ ಹಿಂದೆ ಎರಡು ಕೋಟಿ ಸಂಭಾವನೆ ಕೊಟ್ರಷ್ಟೇ ಮುಂದಿನ ಮಾತು-ಕಥೆ ಅನ್ನುತ್ತಿದ್ದ ಕೃತಿ, ಇದೀಗ ”ಒಂದೂವರೆ ಕೋಟಿ” ಕೊಡಿ ಸಾಕು ಎನ್ನುತ್ತಿದ್ದಾರೆ ಎಂಬ ಮಾತು ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ. ಇನ್ನು ಕೃತಿ ಶೆಟ್ಟಿಯ ಈ ಆಫರ್‌ ಕೇಳಿ, ”ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಹಣ ಗ್ಯಾರಂಟಿ ಹೊಂದಿಸುತ್ತೇನೆ ಎಂದು ಅನೇಕ ನಿರ್ಮಾಪಕರು” ನಿಜಾಮ್ ನಗರದ ಸುತ್ತ ಮುತ್ತ ಓಡಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.