Home Breaking Entertainment News Kannada Keerthi Suresh: ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿದ ಕೀರ್ತಿ ಸುರೇಶ್; ನಿಗೂಢ ವ್ಯಕ್ತಿ ನೋಡಿ...

Keerthi Suresh: ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿದ ಕೀರ್ತಿ ಸುರೇಶ್; ನಿಗೂಢ ವ್ಯಕ್ತಿ ನೋಡಿ ಇದು ಸ್ನೇಹನಾ ಪ್ರೀತಿನಾ? ಎಂದ ಫ್ಯಾನ್ಸ್!!

Keerthi Suresh
Image source- FilmiBeat kannada

Hindu neighbor gifts plot of land

Hindu neighbour gifts land to Muslim journalist

Keerthi Suresh: ದಕ್ಷಿಣ ಭಾರತ ಸಿನಿಮಾರಂಗದ(South Film Industry) ಖ್ಯಾತ ನಟಿ ಕೀರ್ತಿ ಸುರೇಶ್(Keerthi Suresh) ಮದುವೆ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಕೀರ್ತಿ ಸುರೇಶ್ ಮದ್ವೆ ಫಿಕ್ಸ್ ಆಗಿದೆ, ಉದ್ಯಮಿ ಜೊತೆ ಹಸಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಆದರೀಗ ಕೀರ್ತಿ ಸುರೇಶ್ ಅವರು ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಗಳನ್ನು ಎಬ್ಬಿಸಿವೆ. ಕೀರ್ತಿ ಇದು ಸ್ನೇಹನಾ, ಪ್ರೀತಿನಾ? ಇಲ್ಲಾ ಬಾಯ್‌ಫ್ರೆಂಡ್‌ನ(Boy Friend) ಪರಿಚಯಿಸಿದ್ರಾ? ಎಂಬ ಗುಮಾನಿಗಳು ಮೂಡಿವೆ.

ಹೌದು, ಸೌತ್ ಸಿನಿಮಾರಂಗದಲ್ಲಿ ಗಟ್ಟಿ ನಾಯಕಿಯಾಗಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಆಗಾಗ ಮದುವೆ (Wedding) ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ದಳಪತಿ ವಿಜಯ್ (Thalapathy Vijay) ಜೊತೆ ಕೀರ್ತಿ ಸುರೇಶ್ ಮದುವೆ ಎಂದು ಹೇಳಲಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಕೀರ್ತಿ ತಾಯಿ ಬ್ರೇಕ್ ಹಾಕಿದ್ದರು. ಈಗ ಉದ್ಯಮಿಯೊಬ್ಬರ ಜೊತೆ ಕೀರ್ತಿ ಸುರೇಶ್ ಇರುವ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಬಾಯ್‌ಫ್ರೆಂಡ್‌ನ ಪರಿಚಯಿಸಿದ್ರಾ? ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.

ಹೀಗಾಗಿ ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ಇದೀಗ ವೈರಲ್ ಆಗ್ತಿದೆ. ಇತ್ತೀಚೆಗೆ ಆಕೆ ಹಂಚಿಕೊಂಡಿದ್ದ ಫೋಟೊವೊಂದು ಇಂತಹದ್ದೊಂದು ಚರ್ಚೆ ಹುಟ್ಟಾಕಿದೆ. ಒಬ್ಬರ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನ ಬರ್ತ್‌ಡೇ ಪಾರ್ಟಿಯಲ್ಲಿ(Birthday Party) ಭಾಗವಹಿಸಿದ್ದಾರೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಟಿ ಶುಭಾಶಯ ಕೋರಿದ್ದಾರೆ. ಫೋಟೊ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆಗಿರುವ ಆ ವ್ಯಕ್ತಿ ಯಾರು ಎಂದು ಕೆಲವರು ಹುಡುಕಾಟ ಶುರು ಮಾಡಿದ್ದಾರೆ.

ಅಂದಹಾಗೆ ಕೀರ್ತಿ ಪಕ್ಕದಲ್ಲಿ ಇರುವ ವ್ಯಕ್ತಿ ಫರ್ಹಾನ್ ಬಿನ್ ಲೈತ್(Farhan bin Laith) ಎನ್ನಲಾಗಿದೆ. ಈತ ರಿಯಲ್ ಎಸ್ಟೇಟ್(Real Estate) ಉದ್ಯಮಿ. ಫರ್ಹಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೀರ್ತಿ ಭಾಗಿಯಾಗಿದ್ದರು. ಅಷ್ಟೆಯಲ್ಲ ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿ ಫೋಟೋಗೆ ಪೋಸ್ ನೀಡಿದ್ದರು. ಇಬ್ಬರೂ ಆಪ್ತವಾಗಿರುವ ಫೋಟೋ ನೋಡ್ತಿದ್ರೆ ಅನುಮಾನ ಮೂಡಿಸುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಫೋಟೋ ಶೇರ್ ಮಾಡಿ ಫರ್ಹಾನ್‌ಗೆ ವಿಶ್ ಮಾಡಿದ್ದರು. ಫರ್ಹಾನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇಬ್ಬರ ಮಾತುಕತೆ ಅಭಿಮಾನಿಗಳಿಗೆ ಮತ್ತಷ್ಟು ಅನುಮಾನ ಮೂಡಿಸಿತ್ತು.

ಇನ್ನು ಈ ಬಗ್ಗೆ ಕೀರ್ತಿ ಆಪ್ತ ಮೂಲಗಳು ಬಹಿರಂಗ ಪಡಿಸಿದ್ದು, ಇಬ್ಬರೂ ಸ್ನೇಹಿತರು ಅಷ್ಟೆ, ವದಂತಿ ಹಬ್ಬಿಸಬೇಡಿ ಎಂದು ಹೇಳುತ್ತಿದ್ದಾರೆ. ಆದರೂ ಇದು ನಿಜಕ್ಕೂ ಸ್ನೇಹನಾ ಅಥವಾ ಪ್ರೀತಿನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಸದ್ಯ ಈ ಚೆನ್ನೈ ಚೆಲುವೆ ಕೈಯಲ್ಲಿ 5 ಸಿನಿಮಾಗಳಿವೆ. ತೆಲುಗಿನ ‘ಭೋಳಾ ಶಂಕರ್’ ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ನಟಿಸ್ತಿದ್ದಾರೆ. ತಮಿಳಿನ ‘ಮಾಮನನ್’, ‘ಸಿರೇನ್’, ‘ರಘು ತಾತ’ ಹಾಗೂ ‘ರಿವಾಲ್ವರ್ ರೀಟಾ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ರಘು ತಾತ’ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ.

 

ಇದನ್ನು ಓದಿ: Sudhakar vs MTB Nagraj: Sudhakar vs MTB Nagraj : ಬಿಜೆಪಿ ಪಾಳಯದಲ್ಲಿ ಮಾಜಿ ‘ಕಾಂಗಿ’ಗಳ ಕಚ್ಚಾಟ ; ಸಿದ್ದು ವಿರುದ್ಧದ ಟ್ವೀಟ್ ಬೆನ್ನಲ್ಲೇ ಸುಧಾಕರ್ ವಿರುದ್ಧ ತಿರುಗಿಬಿದ್ದ ಎಂಟಿಬಿ!