Home Breaking Entertainment News Kannada Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡೋಕೆ ಈ ಖ್ಯಾತ ನಿರ್ದೇಶಕನೇ ಕಾರಣಂತೆ!

Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡೋಕೆ ಈ ಖ್ಯಾತ ನಿರ್ದೇಶಕನೇ ಕಾರಣಂತೆ!

Priyanka Chopra

Hindu neighbor gifts plot of land

Hindu neighbour gifts land to Muslim journalist

Priyanka Chopra :ಗ್ಲೋಬಲ್ ಐಕಾನ್ ಸ್ಟಾರ್ ಪ್ರಿಯಾಂಕಾ ಚೋಪ್ರಾ(Priyanka Chopra) ಬಾಲಿವುಡ್(Bollywood) ನಲ್ಲಿ ಹೊಸ ಕ್ರೇಜ್ ಸೃಷ್ಟಿ ಮಾಡಿದ್ದ ನಟಿ. ನಂತರದಲ್ಲಿ ಬಾಲಿವುಡ್ ನಿಂದ ಹಾಲಿವುಡ್(Hollywood)ಗೆ ಹಾರಿ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಆದರೀಗ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ವಿದೇಶದಲ್ಲಿ ನೆಲೆಸಲು ಹಾಗೂ ಬಾಲಿವುಡ್ ನಿಂದ ದೂರವಾಗಲು ಈ ಖ್ಯಾತ ನಿರ್ದೇಶಕನೇ ಕಾರಣ ಎಂದು ಹೇಳುವ ಮೂಲಕ ನಟಿ ಕಂಗನಾ ರಣಾವತ್(Kangana Ranaut). ಬಿರುಗಾಳಿ ಎಬ್ಬಿಸಿದ್ದಾರೆ.

ಹೌದು, ಪ್ರಿಯಾಂಕಾ ಚೋಪ್ರಾ (Priyanka Chopra) ವಿದೇಶದಲ್ಲಿ ನೆಲೆಸಲು ಹಾಗೂ ಬಾಲಿವುಡ್ ನಿಂದ ದೂರವಾಗಲು ಬಾಲಿವುಡ್ ಖ್ಯಾತ ನಿರ್ದೇಶಕರಾದ ಕರಣ್ ಜೋಹಾರ್(Karan Johar) ಅವರೇ ಕಾರಣ ಎಂದು ಕಂಗನಾ ರಣಾವತ್(Kangana Ranavat) ಆರೋಪ ಮಾಡಿದ್ದು, ನೇರವಾಗಿ ಸೋಷಿಯಲ್ ಮೀಡಿಯಾದಲ್ಲೇ ಈ ಕುರಿತು ಬರೆದುಕೊಂಡಿದ್ದಾರೆ. ಕಂಗನಾ, ಕರಣ್ ಜೋಹಾರ್ (Karan Johar) ಮೇಲೆ ಮಾಡಿರುವ ಈ ಗಂಭೀರ ಆರೋಪ ಸದ್ಯ ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.

ಅಂದಹಾಗೆ ಹಿಂದಿ ಚಿತ್ರರಂಗ ಅರ್ಥಾತ್ ಬಾಲಿವುಡ್‌ಗೆ ತಾವು ಗುಡ್‌ ಬೈ ಹೇಳಿದ್ಯಾಕೆ ಎಂಬುದರ ಬಗ್ಗೆ ಡ್ಯಾಕ್ಸ್ ಶೆಫರ್ಡ್ ಅವರ ಪಾಡ್‌ಕಾಸ್ಟ್ ‘ಆರ್ಮ್‌ಚೇರ್ ಎಕ್ಸ್‌ಪರ್ಟ್‌’ನಲ್ಲಿ ಪ್ರಿಯಾಂಕಾ ಚೋಪ್ರಾ ವಿವರಿಸಿದ್ದು ‘ನಾನು ಬಾಲಿವುಡ್ ನಿಂದ ದೂರವಾಗಲು ಮತ್ತು ಅಲ್ಲಿನ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಮುಖ್ಯ ಕಾರಣ ಅಲ್ಲಿನ ಒಳ ರಾಜಕೀಯ. ಹಿಂದಿ ಚಿತ್ರರಂಗದಲ್ಲಿನ ರಾಜಕೀಯದಿಂದ ನಾನು ಬೇಸೆತ್ತಿದ್ದೆ. ಇದ್ದಕ್ಕಿದ್ದಂತೆ ಎಲ್ಲೋ ಒಂದು ಕಡೆ ನನ್ನನ್ನು ತುಳಿಯುವುದಕ್ಕೆ ಶುರು ಮಾಡಿದ್ದಾರೆ ಅನಿಸಿತು. ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ ಎನ್ನುವ ವಿಚಾರ ಗೊತ್ತಾಯಿತು. ನಟಿಸಲು ನನಗೆ ಅವಕಾಶ ನೀಡುತ್ತಿರಲಿಲ್ಲ. ಕೆಲವರ ವಿರೋಧವನ್ನು ಕಟ್ಟಿಕೊಂಡಿದ್ದೆ. ಅದಕ್ಕೆ ನನಗೆ ಪಾತ್ರಗಳು ಸಿಗುತ್ತಿರಲಿಲ್ಲ. ಕೆಲವರೊಂದಿಗೆ ನಾನು ಕಿತ್ತಾಡಿಕೊಂಡಿದ್ದೆ. ನನಗೆ ಒಂದು ಬ್ರೇಕ್‌ನ ಅವಶ್ಯಕತೆ ಇತ್ತು. ಹೀಗಾಗಿ ನಾನು ಹಾಲಿವುಡ್ ಕಡೆ ಮುಖಮಾಡಿದೆ, ವಿದೇಶಕ್ಕೆ ಹಾರಿದೆ’ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆಯೇ ಈ ಅಖಾಡಕ್ಕೆ ಕಂಗನಾ ಇಳಿದಿದ್ದು, ನೇರವಾಗಿ ಕರಣ್ ಜೋಹಾರ್ ಬಗ್ಗೆಯೇ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿದ ಕಂಗನಾ ‘ಕರಣ್ ಜೋಹಾರ್ ನಿಮ್ಮನ್ನು ಬ್ಯಾನ್ ಮಾಡಿದ್ದರು. ಹಲವರು ಗುಂಪು ಕಟ್ಟಿಕೊಂಡು ಓಡಿಸಿದರು. ಈ ಕಾರಣಕ್ಕಾಗಿಯೇ ಪ್ರಿಯಾಂಕಾ ಬಾಲಿವುಡ್ ಬಿಟ್ಟರು’ ಎಂದು ಬರೆದುಕೊಂಡಿದ್ದಾರೆ.

ನೇರ ಮಾತುಗಳಿಂದಾಗಿಯೇ ಕಂಗನಾ ಸುಖಾಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅದರಲ್ಲೂ ಕರಣ್ ಜೋಹಾರ್ ವಿಷಯದಲ್ಲಿ ಸದಾ ಆರೋಪ ಮಾಡುತ್ತಲೇ ಇದ್ದಾರೆ. ಈ ಬಾರಿಯೂ ಕರಣ್ ಮೇಲೆಯೇ ಆರೋಪ ಮಾಡಿರುವ ಕಂಗನಾ, ಒಂದು ಕಾಲದ ವಿರೋಧಿಯಾಗಿದ್ದ ಪ್ರಿಯಾಂಕಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಪ್ರಿಯಾಂಕಾ ಮತ್ತು ಕಂಗನಾ 2008 ರಲ್ಲಿ ಫ್ಯಾಶನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

2015ರ ಟೆಲಿವಿಷನ್ ಸೀರೀಸ್ ‘ಕ್ವಾಂಟಿಕೋ’ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ಗೆ ಕಾಲಿಟ್ಟರು. ಅದಕ್ಕೂ ಮುನ್ನ ಪ್ರಿಯಾಂಕಾ ಚೋಪ್ರಾ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು. ಇಂಟರ್‌ನ್ಯಾಷನಲ್ ಮ್ಯೂಸಿಕ್ ಆರ್ಟಿಸ್ಟ್‌ ಆಗಿ ಗುರುತಿಸಿಕೊಳ್ಳಲು ಪ್ರಿಯಾಂಕಾ ಚೋಪ್ರಾ ಪ್ರಯತ್ನಿಸಿದ್ದರು. ‘ಇನ್ ಮೈ ಸಿಟಿ’ ಮತ್ತು ‘ಎಕ್ಸೊಟಿಕ್’ ಎಂಬ ಹಾಡುಗಳ ಮುಖಾಂತರ ಪ್ರಿಯಾಂಕಾ ಚೋಪ್ರಾ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ಇದನ್ನೂ ಓದಿ: Rakshit Shetty-Srinidhi Shetty: ಶ್ರೀನಿಧಿ ಶೆಟ್ಟಿ ಫೋಟೋಗೆ ರಕ್ಷಿತ್ ಶೆಟ್ಟಿ ಕಮೆಂಟ್! ‘ಏನ್ ಶೆಟ್ರೆ, ಲವ್ವಾ?’ ಎಂದ ಫ್ಯಾನ್ಸ್!