Home Breaking Entertainment News Kannada Kantara Film : ಮನೆ ಮನೆಗೆ ಬರುತ್ತಿದೆ ತುಳುವಿನ ‘ಕಾಂತಾರ’ ! ಹೊಸ ವರ್ಷಕ್ಕೆ ಸಿಹಿ...

Kantara Film : ಮನೆ ಮನೆಗೆ ಬರುತ್ತಿದೆ ತುಳುವಿನ ‘ಕಾಂತಾರ’ ! ಹೊಸ ವರ್ಷಕ್ಕೆ ಸಿಹಿ ಸುದ್ದಿ!

Hindu neighbor gifts plot of land

Hindu neighbour gifts land to Muslim journalist

Kantara Film: ಕಾಂತಾರ ಸಿನಿಮಾದ (Kantara Film) ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತಿರುವ, ಇಷ್ಟಪಟ್ಟಿರುವ ಸಿನಿಮಾವಿದು. ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ ಹಿಟ್ ಸಿನಿಮಾ (blockbuster hit movie) ಕೂಡ ಹೌದು. ಕಾಂತಾರವು ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್‌ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ (kannada film). ಸದ್ಯ ತುಳುನಾಡಿನ ಕಲೆಯನ್ನು ದೇಶ- ವಿದೇಶದಾದ್ಯಂತ ಸಾರಿದ ಸಿನಿಮಾ ಇದೀಗ ತುಳುವಿನಲ್ಲೇ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದ ಕಾಂತಾರ ಆನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್​ (Hindi dubbing) ಮಾಡಿ ರಿಲೀಸ್​ ಆಗಿದ್ದು, ಎಲ್ಲ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ, ಭರ್ಜರಿ ಕಲೆಕ್ಷನ್ ದೊರೆತಿದ್ದು, ಒಟಿಟಿ (ott) ಪ್ರೇಕ್ಷಕರಿಗಾಗಿ ಇಂಗ್ಲಿಷ್​ ವರ್ಷನ್​ ಕೂಡ ರಿಲೀಸ್​ ಆಯಿತು. ಇದೀಗ ತುಳು ಭಾಷೆಯಲ್ಲೂ ರಿಲೀಸ್ (kantara film in Tulu language) ಆಗಲಿದೆ. ಯಾವಾಗ? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ.

‘ಕಾಂತಾರ’ ಏಪ್ರಿಲ್ 15 ರಂದು ಸ್ಟಾರ್ ಸುವರ್ಣದಲ್ಲಿ (star suvarna) ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಏಪ್ರಿಲ್ 15ರಂದು ತುಳುವರ ಹೊಸ ವರ್ಷ ದಿನ. ಆ ದಿನವೇ ಸ್ಟಾರ್ ಸುವರ್ಣದಲ್ಲಿ ಸಿನಿಮಾ ತುಳು ಭಾಷೆಯಲ್ಲಿ ಪ್ರಸಾರವಾಗುತ್ತಿದೆ. ಈ ವಿಚಾರ ತುಳುವರಿಗೆ ಹೆಮ್ಮೆಯೂ ಹೌದು, ಖುಷಿಯೂ ಹೌದು. ತುಳು ಸಂಸ್ಕೃತಿ, ಕಲೆಯನ್ನೊಳಗೊಂಡ ಸಿನಿಮಾವನ್ನು ಮೂಲ ಭಾಷೆಯಲ್ಲೇ ನೋಡಲು ಹೆಚ್ಚು ಖುಷಿ ಇರುತ್ತದೆ. ಹಾಗೇ ಇದೇ ತರ ಹೆಚ್ಚೆಚ್ಚು ತುಳು ಸಿನಿಮಾಗಳನ್ನು ಪ್ರಸಾರ ಮಾಡಿ ಎಂದೂ ಕೆಲ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕಿದ್ದಾರೆ.

ಸದ್ಯ ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ‘ಕಾಂತಾರ’ ದ ಹವಾ ಇಂದಿಗೂ ತಗ್ಗಿಲ್ಲ. ನಟ ರಿಷಬ್ ಶೆಟ್ಟಿಗೆ (rishab shetty) ಈ ಸಿನಿಮಾದಿಂದ ಅಪಾರ ಯಶಸ್ಸು ಲಭಿಸಿತು ಎಂದರೆ ತಪ್ಪಾಗಲಾರದು. ಸದ್ಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ನಟಿ ಸಪ್ತಮಿ ಗೌಡಗೂ (sapthami gowda) ಕೂಡ ‘ಕಾಂತಾರ’ ನಂತರ ಉತ್ತಮ ವೃತ್ತಿ ಜೀವನ ಲಭಿಸಿದೆ. ಇನ್ನು ಕಾಂತಾರ ನಂತರ ಕಾಂತಾರ-2 (kantara-2) ಸಿನಿಮಾ ಬಿಡುಗಡೆಗೆ ತಯಾರಿಯಲ್ಲಿದ್ದು, ಸಿನಿಪ್ರಿಯರು ಸಿನಿಮಾಗಾಗಿ ಕಾದು ಕುಳಿತಿದ್ದಾರೆ.