Home Breaking Entertainment News Kannada ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಇನ್ನಿಲ್ಲ

Hindu neighbor gifts plot of land

Hindu neighbour gifts land to Muslim journalist

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ಅವರು. ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಯಲ್ಲಿ ನಿಧನರಾದರು.

ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಅವರು, ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು.ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಅನಾರೋಗ್ಯದ ಕಾರಣ ಸತ್ಯಜಿತ್​ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಸ್ಯಾಂಡಲ್​ ವುಡ್​ನಲ್ಲಿ ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜೀತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್ 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಒಂದು ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿದ್ದ ಪೋಷಕ ನಟ ಎಂದೇ ಗುರುತಿಸಿಕೊಂಡಿದ್ದರು. ಖಳ ನಾಯಕನ ಪಾತ್ರಗಳಿಗೆ ಅದ್ಭುತವಾಗಿ ಬಣ್ಣ ಹಚ್ಚುತ್ತಿದ್ದ ಇವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ.

650 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಎಸ್​ಆರ್​ಟಿಸಿಯಲ್ಲಿ ಚಾಲಕನಾಗಿದ್ದ ಇವರಿಗೆ ಮೊದಲು ನಾನ ಪಾಟೇಕರ್ ಜತೆ ಅಂಕುಶ್​ ಸಿನಿಮಾದಲ್ಲಿ ವಿಲನ್​ ಆಗಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ.

ಸತ್ಯಜೀತ್ ಅಭಿನಯಿಸಿದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪುಟ್ನಂಜ (೧೯೯೫), ಶಿವ ಮೆಚ್ಚಿದ ಕಣ್ಣಪ್ಪ (೧೯೮೮), ಚೈತ್ರಾದ ಪ್ರೇಮಾಂಜಲಿ ( ೧೯೯೨), ಆಪ್ತಮತ್ರ (೨೦೦೪) ಹೀಗೆ ಸೂಪರ್​ ಹಿಟ್​ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಅಷ್ಟೇ ಅಲ್ಲದೇ, ಅರುಣ ರಾಗ, ಅಂತಿಮ ತೀರ್ಪು, ಶಿವ ಮೆಚ್ಚಿದ ಕಣ್ಣಪ್ಪ, ರಣರಂಗ, ನಮ್ಮೂರ ರಾಜ, ನ್ಯಾಯಕ್ಕಾಗಿ ನಾನು, ಯುದ್ಧಕಾಂಡ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕಪ್, ಮನೆದೇವ್ರು, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಸರ್ಕಲ್ ಇನ್ಸ್‌ಪೆಕ್ಟರ್, ಪಟೇಲ, ದುರ್ಗದ ಹುಲಿ, ಅಪ್ಪು, ಧಮ್, ಅಭಿ, ಆಪ್ತಮಿತ್ರ, ಅರಸು, ಇಂದ್ರ, ಭಾಗ್ಯದ ಬಳೆಗಾರ, ಕಲ್ಪನಾ, ಗಾಡ್ ಫಾದರ್, ಲಕ್ಕಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.