Home Breaking Entertainment News Kannada BBK-11: ಹನುಮಂತ ಮುಗ್ಧನೋ, ಅಲ್ವೋ? ಎಂದ ಕಿಚ್ಚ – ಇನೋಸೆಂಟ್ ಅಲ್ಲ ಎಂದ ಮನೆಮಂದಿಗೆ...

BBK-11: ಹನುಮಂತ ಮುಗ್ಧನೋ, ಅಲ್ವೋ? ಎಂದ ಕಿಚ್ಚ – ಇನೋಸೆಂಟ್ ಅಲ್ಲ ಎಂದ ಮನೆಮಂದಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಹನುಮಂತ, ಕಿಚ್ಚನೇ ಶಾಕ್

Hindu neighbor gifts plot of land

Hindu neighbour gifts land to Muslim journalist

BBK-11: ಬಿಗ್ ಬಾಸ್ ಕನ್ನಡ ಸೀಸನ್ 11 ಅದ್ಭುತವಾದ ಪ್ರದರ್ಶನವನ್ನು ಕಾಣುತ್ತಿದೆ. ಈಗ 6 ವಾರವನ್ನು ದಾಟಿ ಏಳನೇ ವಾರದತ್ತ ಪಾದರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕಿಚ್ಚನ ಪಂಚಾಯಿತಿ ನಡೆಯಲಿದೆ. ಈ ಪಂಚಾಯಿತಿಯಲ್ಲಿ ಕಿಚ್ಚ ಅವರು ಹನುಮಂತನ ಇನೋಸೆಂಟ್ ಬಗ್ಗೆ ಪ್ರಶ್ನೆ ಮಾಡಿದ್ದು ಮನೆಯವರು ಬಗೆ ಬಗೆಯ ಉತ್ತರಗಳನ್ನು ನೀಡಿದ್ದಾರೆ. ಈ ವೇಳೆ ಇದರಿಂದ ಸಿಟ್ಟಾದ ಹನುಮಂತ(Hanumanta) ಚಪ್ಪಲಿಗೆ ಬಟ್ಟೆ ಸುತ್ತುಕೊಂಡವರಂತೆ ಎಲ್ಲರಿಗೂ ಸ್ಲಿಪ್ಪರ್ ಶಾಟ್ ನೀಡಿದ್ದಾನೆ.

ಹೌದು, ಬಿಗ್ ಬಾಸ್(BBK-11) ಮನೆ ಒಳಗಡೆ ಹನುಮಂತ ಎಂಟ್ರಿಕೊಟ್ಟಾಗಿನಿಂದಲೂ ಆತನ ಇನ್ನೋಸೆಂಟ್ ಬಗ್ಗೆ ಚರ್ಚೆ ಆಗುತ್ತದೆ. ಆತ ನಿಜವಾಗಿಯೂ ಮುಗ್ಧನೋ ಅಥವಾ ಮುಗ್ದನಂತೆ ನಟಿಸುತ್ತಿದ್ದಾನೋ ಎಂಬುದು ಹಲವರ ಪ್ರಶ್ನೆ. ಕಳೆದ ವಾರ ಯೋಗರಾಜ್ ಭಟ್ಟ ಅವರು ಬಂದಂತ ಸಂದರ್ಭದಲ್ಲಿಯೂ ಈ ಪ್ರಶ್ನೆ ಮುನ್ನಲಗೆ ಬಂದಿತ್ತು. ಅಂತೆಯೇ ಇದೀಗ ಮತ್ತೆ ಕಿಚ್ಚನ ಪಂಚಾಯಿತಿಯಲ್ಲಿ ಈ ಪ್ರಶ್ನೆ ಎದುರಾಗಿದೆ. ವೀಕೆಂಡ್​​ನಲ್ಲಿ ಈ ಪ್ರಶ್ನೆಯನ್ನು ಸುದೀಪ್ ಎತ್ತಿದ್ದಾರೆ. ಆದರೆ, ಇದಕ್ಕೆ ಹನುಮಂತ ಕೊಟ್ಟ ಉತ್ತರ ನೋಡಿ ಸ್ವತಃ ಸುದೀಪ್ ಅವರೇ ದಂಗಾಗಿದ್ದಾರೆ.

ಮೋಕ್ಷಿತಾ ಪೈ ಅವರು, ‘ಹನುಮಂತ ಇನೋಸೆಂಟ್ ಆಗಿ ಕಾಣಿಸ್ತಾ ಇರೋರು ಆದರೆ ಅವರು ಇನೋಸೆಂಟ್ ಅಲ್ಲ. ಅವನಿಗೆ ಗೊತ್ತಿಗೆ ಚೆನ್ನಾಗಿ ಮೈಂಡ್ ಗೇಮ್ ಹೇಗೆ ಆಡೋದು’ ಅಂತ ಎಂದಿದ್ದಾರೆ. ತ್ರಿವಿಕ್ರಮ್ ಅವರು, ‘ಅವರ ಫೇಸ್ ಅವನು ಇರೋದು ಇನೋಸೆಂಟ್ ಅನ್ಸುತ್ತೆ ಆದರೆ ಅವನು ತುಂಬಾ ಕ್ಲೆವರ್’ ಎಂದರೆ, ಚೈತ್ರಾ ಕುಂದಾಪುರ ಅವರು ‘ಹನುಮಂತ ಹೊರಗಡೆ ಕಾಣಿಸಿಕೊಳ್ಳುತ್ತಿರುವಷ್ಟು ಇನೋಸೆಂಟ್ ಅಲ್ಲವೇ ಅಲ್ಲ’ ಎಂದಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ಹನುಮಂತ, ‘ಇಲ್ಲಿ ಬಂದಿರೋರು ಎಲ್ಲ ಇನೋಸೆಂಟ್, ಯಾರೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಾ ಇದ್ದಾರೆ, ನನ್ನ ಹಿಂಡ್ಕೊಂಡ್ರು ನಾನೂ ಅವನೇ’ ಎಂದು ಹೇಳಿದ್ದಾರೆ. ಈ ಕುರಿತಾದ ಪ್ರೊಮೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.