Home Breaking Entertainment News Kannada ಇನ್ಸ್ಟಾಗ್ರಾಂ ನಲ್ಲಿ ಹಾಕುವ ಪ್ರತಿ ಪೋಸ್ಟ್ ಗೂ ಕೊಹ್ಲಿ ಪಡೆಯುವ ಸಂಭಾವನೆ ಎಂತವರನ್ನೂ ಬೆರಗಾಗಿಸುವುದು ಖಂಡಿತ...

ಇನ್ಸ್ಟಾಗ್ರಾಂ ನಲ್ಲಿ ಹಾಕುವ ಪ್ರತಿ ಪೋಸ್ಟ್ ಗೂ ಕೊಹ್ಲಿ ಪಡೆಯುವ ಸಂಭಾವನೆ ಎಂತವರನ್ನೂ ಬೆರಗಾಗಿಸುವುದು ಖಂಡಿತ !!!

Hindu neighbor gifts plot of land

Hindu neighbour gifts land to Muslim journalist

ತನ್ನ ನೆಚ್ಚಿನ ಸ್ಟಾರನ್ನು ಅಭಿಮಾನಿಗಳು ಮನತುಂಬಿ ಆರಾಧಿಸುತ್ತಾರೆ. ಈ ಮಾತು ಸುಳ್ಳಲ್ಲ. ಏಕೆಂದರೆ ಈ ರೀತಿಯಾಗಿ ಅಭಿಮಾನಿ ಫಾಲೋವರ್ಸ್ ಗಳಿಂದ ಈ ಸೆಲೆಬ್ರಿಟಿ ಸ್ಟಾರ್ ಗಳು ಡಾಲರ್ ಗಟ್ಟಲೇ ದುಡ್ಡನ್ನು ಕುಳಿತಲ್ಲಿಂದಲೇ ಸಂಪಾದನೆ ಮಾಡುತ್ತಾರೆ. ಇದಕ್ಕೆ ಆಟಗಾರರು ಕೂಡಾ ಹೊರತಲ್ಲ.

ತಮ್ಮ ಮೆಚ್ಚಿನ ಕ್ರೀಡಾಪಟುವಿನ ವೈಯಕ್ತಿಕ ಜೀವನದ ಸಣ್ಣಪುಟ್ಟ ಝಲಕ್ ನ್ನೂ ಕೂಡಾ ಭಾರೀ ಕಾತರದಿಂದ ನೋಡಿ ಧನ್ಯರಾಗುವ ಅಭಿಮಾನಿಗಳಿಂದಾಗಿ ಕ್ರೀಡಾಪಟುಗಳು ಇನ್ಸ್ಟಾಗ್ರಾಂ ನಲ್ಲಿ ಮಾಡುವ ಒಂದೊಂದು ಪೋಸ್ಟಿಗೂ ಭಾರೀ ದುಡ್ಡು ಮಾಡುತ್ತಿದ್ದಾರೆ.

ಈ ಲಿಸ್ಟ್ ನಲ್ಲಿ ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಜಾಗತಿಕವಾಗಿ ಮುಂದೆ ಇದ್ದರೆ, ಭಾರತೀಯ ಆಟಗಾರರ ಪೈಕಿ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲಿಗರು. ಜಾಗತಿಕವಾಗಿ ಕೊಹ್ಲಿ 19 ನೇ ಸ್ಥಾನದಲ್ಲಿದ್ದಾರೆ.

ಈ ವಿಚಾರದಲ್ಲಿ ಬಾಲಿವುಡ್ ನಟರೂ ಕೂಡಾ ಹಿಂದೆ ಬಿದ್ದಿಲ್ಲ. ವಿರಾಟ್ ಕೊಹ್ಲಿ ಬಳಿಕ ಒಳ್ಳೆ ಸಂಪಾದನೆ ಮಾಡುತ್ತಿರುವುದು‌ ಪ್ರಿಯಾಂಕಾ ಚೋಪ್ರಾ.

ಕೊಹ್ಲಿ ಇನ್ಸ್ಟಾಗ್ರಾಂ ನಲ್ಲಿ ಮಾಡುವ ಒಂದು ಪೋಸ್ಟ್ ನಿಂದ 5 ಕೋಟಿ ರೂಪಾಯಿ ಪಡೆದರೆ, ಪ್ರಿಯಾಂಕಾ ಚೋಪ್ರಾ 4 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ರೊನಾಲ್ಡೋ ಮಾಡುವ ಒಂದೊಂದು ಪೋಸ್ಟಿಗೂ 12 ಕೋಟಿ ರೂಪಾಯಿ ಪಡೆಯುತ್ತಾರೆ.