Home Breaking Entertainment News Kannada Anchor Anushree : ಮದುವೆ ವಿಷಯದಲ್ಲಿ ಬಿಗ್‌ ಅಪ್ಡೇಟ್‌ ನೀಡಿದ ಅನುಶ್ರೀ! ಕೊರಗಜ್ಜ ಹೇಳಿದಾಗೆ ಮಾಡ್ತೇನೆ...

Anchor Anushree : ಮದುವೆ ವಿಷಯದಲ್ಲಿ ಬಿಗ್‌ ಅಪ್ಡೇಟ್‌ ನೀಡಿದ ಅನುಶ್ರೀ! ಕೊರಗಜ್ಜ ಹೇಳಿದಾಗೆ ಮಾಡ್ತೇನೆ ಎಂದ ಮಾತಿನ ಮಲ್ಲಿ!

Anchor Anushree

Hindu neighbor gifts plot of land

Hindu neighbour gifts land to Muslim journalist

Anchor Anushree: ಸ್ಯಾಂಡಲ್ ವುಡ್ (sandalwood) ಖ್ಯಾತ ನಿರೂಪಕಿ, ನಟಿ, ಮಾತಿನ ಮಲ್ಲಿ ಅನುಶ್ರೀ (anchor Anushree) ತಮ್ಮ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹರಳು ಹುರಿದಂತೆ ಮಾತನಾಡುವ ಮಾತಿನ ಮಲ್ಲಿ ಇದೀಗ ಮದುವೆ ವಿಷಯದಲ್ಲಿ ಬಿಗ್‌ ಅಪ್ಡೇಟ್‌ ನೀಡಿದ್ದಾರೆ.

ಅನುಶ್ರೀ ಕನ್ನಡ ಕಿರುತೆರೆ ಲೋಕದಲ್ಲಿ ಟಾಪ್ ನಿರೂಪಕಿ ಎಂದರೆ ತಪ್ಪಾಗಲಾರದು. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ, ಮಾತ್ರವಲ್ಲದೇ ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಇದೀಗ ಅನುಶ್ರೀ ಕೊನೆಗೂ ಮದುವೆ (marriage) ವಿಚಾರದಲ್ಲಿ ಮೌನ ಮುರಿದಿದ್ದಾರೆ. ನಿಮ್ಮ ಮದುವೆ ಯಾವಾಗ ? ಎಂದು ಕೇಳುವವರಿಗೆ ಅನುಶ್ರೀ ಇನ್‌ಸ್ಟಾಗ್ರಾಂನಲ್ಲಿ (Instagram) ಲೈವ್‌ ಬಂದು ಅಪ್ಡೇಟ್‌ ನೀಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದು (Anushree Instagram live updates) ನಿರೂಪಕಿ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅನುಶ್ರಿಗೆ ಎಲ್ಲಿ ಹೋದರೂ ನಿಮ್ಮ ಮದುವೆ ಯಾವಾಗ? ಎಂದು ಕೇಳುವವರೇ ಹೆಚ್ಚು. ಹಾಗೇ ಹಲವಾರು ಜನರು ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾರಂತೆ. ಇದೀಗ ಈ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಮದುವೆ ಮಾಡಿಕೊಳ್ಳುವುದಕ್ಕೆ ಇನ್ನು ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕು. ಹಾಗೇ ಮದುವೆ ಜೀವನದಲ್ಲಿ ಒಂದು ಸಲ ಮಾತ್ರ ಘಟಿಸುವ ಸುಂದರ ಘಟನೆ. ಹಾಗಾಗಿ ಸುಮ್ಮನೆ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು
ಅನುಶ್ರೀ ಲೈವ್ ನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಅಭಿಮಾನಿಗಳು ನಿಮಗೆ ವಯಸ್ಸಾಯ್ತು ಮದುವೆ ಆಗಿ ಅಂತಾರೆ. ಹಾಗೇ ಮನೆಯಲ್ಲಿ ಅಮ್ಮ ಕೂಡ ಮದುವೆ ಆಗು ಅಂತ‌ ಹೇಳ್ತಾರೆ. ಆದ್ರೆ ಇವರೆಲ್ಲಾ ಹೀಗೆ ಹೇಳುತ್ತಾರೆ ಅಂತ ನಾನು ಮದುವೆ ಆಗೋದಿಕ್ಕೆ ಆಗಲ್ಲ. ಮದುವೆ ವಿಚಾರವನ್ನು ಕೊರಗಜ್ಜನ (koragajja) ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ’ ಎಂದು ಅನುಶ್ರೀ ಹೇಳಿದ್ದಾರೆ.

ಆದ್ರೆ, ನನಗೆ ಒಂದು ಭಯವಿದೆ ನನ್ನನ್ನು ಯಾರಾದ್ರೂ ಬಿಟ್ಟು ಹೋಗುತ್ತಾರೆ ಅಂತ ಭಯ. ನನಗೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಎನ್ನುತ್ತಲೇ ಅನು ಭಾವುಕರಾಗಿದ್ದಾರೆ. ಇನ್ನೂ ಕೆಲವರು ನೀವು ಅರೇಂಜ್ಡ್‌ ಮ್ಯಾರೇಜ್ (arrange marriage) ಅಥವಾ ಲವ್ ಮ್ಯಾರೇಜ್ (love marriage) ಆಗ್ತೀರಾ ಎಂದು ಕೇಳುತ್ತಾರೆ. ನಾನು ಈ ವಿಚಾರದ ಬಗ್ಗೆ ಯೋಚನೆ ಮಾಡಿಲ್ಲ. ಮೊದಲು ಲವ್ ಆಗಬೇಕು ಅಲ್ವಾ!! ಅಂತ ಅಭಿಮಾನಿಗಳನ್ನೇ ಕೇಳಿದ್ದಾರೆ. ಹಾಗೇ ನಮ್ಮನ್ನು ಯಾರು ಲವ್ ಮಾಡ್ತಾರೆ ಬಿಡಿ’ ಅಂತನೂ ಅಂದಿದ್ದಾರೆ ಅನುಶ್ರೀ. ಹಾಗೇ ಲೈವ್ ನಲ್ಲಿ ತಮ್ಮ ನೆಚ್ಚಿನ ಅಭಿಮಾನಿಗಳ ಜೊತೆ ಮಾತನಾಡುತ್ತಾ ಅನುಶ್ರೀ ಮನೆಯಲ್ಲಿನ ಪುನೀತ್ ರಾಜ್ ಕುಮಾರ್ (puneeth Rajkumar) ಫೋಟೋಗಳನ್ನು ತೋರಿಸಿದ್ದಾರೆ. ಅವರನ್ನು ನೆನೆದು ಭಾವುಕರಾದರು.