Home Breaking Entertainment News Kannada ‘ ಹೆಡ್ ಬುಷ್ ‘ ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ, ಕೋಪ...

‘ ಹೆಡ್ ಬುಷ್ ‘ ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ, ಕೋಪ ‘ಡಾಲಿ’ ಮೇಲಾ ಅಲ್ಲ ಅಗ್ನಿ ಶ್ರೀಧರ್ ಮೇಲಾ ?!

Hindu neighbor gifts plot of land

Hindu neighbour gifts land to Muslim journalist

ಡಾಲಿ ಧನಂಜಯ್ ನಟಿಸಿರುವ ಹೆಡ್ ಬುಷ್ (Head bush) ಸಿನಿಮಾದಲ್ಲಿ  ವೀರಗಾಸೆ (Veera gase) ಕುಣಿತಕ್ಕೆ ಅಪಮಾನ ಮಾಡಲಾಗಿದೆ, ಹಿಂದೂ ಧರ್ಮಕ್ಕೆ (Hindu Religion) ಅವಮಾನವಾಗಿದೆ ಎಂದು  ಎಂದು ಕುಪಿತ ಭಜರಂಗದಳದ (Bajrang Dal) ಕಾರ್ಯಕರ್ತರು ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ, ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಈ ಘಟನೆ, ತುಮಕೂರಿನ ತಿಪಟೂರು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಡಾಲಿ ಧನಂಜಯ (Dhananjaya) ಕ್ಷಮೆ ಕೇಳಬೇಕು. ಚಿತ್ರದಿಂದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಇಲ್ಲದಿದ್ದರೇ ಯಾವ ಚಿತ್ರಮಂದಿರಗಳಲ್ಲೂ ಈ ಚಿತ್ರ ಪ್ರದರ್ಶನ ಮಾಡದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದಲ್ಲಿ ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್ ಕೂಗು ಒಂದೆಡೆ ಕೇಳಿಬಂದಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಎತ್ತಿದ್ದಾರೆ.

ನಿಜಕ್ಕೂ ಈ ವಿರೋಧ ಹೆಡ್ ಬುಷ್ ಚಿತ್ರಕ್ಕೋ, ಅಥವಾ ದಾಳಿ ಧನಂಜಯ್ ಮೇಲೆಯೋ ಅಲ್ಲಾ ಆ ಚಿತ್ರದ ನಿರ್ದೇಶಕ ಅಗ್ನಿ ಶ್ರೀಧರ್ ಮೇಲೆಯೋ ಎಂಬ ಬಗ್ಗೆ ಅನುಮಾನ ಕಾಡುತ್ತಿದೆ. ಸದಾ ಹಿಂದೂ ವಿರೋಧಿಯಾಗಿದ್ದುಕೊಂಡು, ಕೇವಲ ಹಿಂದೂ ಧರ್ಮವನ್ನು ಅವಮಾನಿಸುವ ಅಗ್ನಿ ಶ್ರೀಧರ್, ಆತನ ಸಹವರ್ತಿ ಚಿತ್ರ ನಟ ಚೇತನ್ ಮತ್ತಿತರ ಜನರ ಮೇಲೆ ಹಿಂದೂ ಸಂಘಟನೆಗಳು ಕಣ್ಣು ಕೆಂಪಗೆ ಮಾಡಿಕೊಂಡದ್ದು ಸಹಜ. ಈಗ ಈ ಪ್ರತಿಭಟನೆಯೆಲ್ಲಾ, ಡಾಲಿ ಧನಂಜಯ್ ಮೇಲೆ ಅಲ್ಲದೆ ಇರಬಹುದು ! ಹೆಚ್ಚಿನ ಕ್ರೋಶಾ ಈ ಚಿತ್ರದ ರೂವಾರಿ ಶ್ರೀಧರ್ ಮೇಲೆ ಎನ್ನಲಾಗುತ್ತಿದೆ. 

ಕನ್ನಡದ ಇತರ ಸ್ಟಾರ್ ನಟ ಜೊತೆಗಿರುವ ಡಾಲಿ ಧನಂಜಯ್ ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಟ್ವಿಟ್ಟರ್‌ನಲ್ಲಿ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.