Home Breaking Entertainment News Kannada ಕಿರುತೆರೆಯಿಂದ ವಿಷ್ಣುವರ್ಧನ್ ಅಳಿಯ ಬ್ಯಾನ್ | ಕಿರುತೆರೆ ನಿರ್ಮಾಪಕ ಸಂಘದವರ ನಿರ್ಧಾರವೇನು?

ಕಿರುತೆರೆಯಿಂದ ವಿಷ್ಣುವರ್ಧನ್ ಅಳಿಯ ಬ್ಯಾನ್ | ಕಿರುತೆರೆ ನಿರ್ಮಾಪಕ ಸಂಘದವರ ನಿರ್ಧಾರವೇನು?

Hindu neighbor gifts plot of land

Hindu neighbour gifts land to Muslim journalist

ಕಿರುತೆರೆಯ ಧಾರಾವಾಹಿ ಜೊತೆ ಜೊತೆಯಲಿ ವಿಷಯ ಈಗ ತಾರಕಕ್ಕೇರಿದ್ದು, ನಟ ಅನಿರುದ್ಧ ಕಿಕ್‌ ಔಟ್‌ ಮಾಡಿದ ವಿಚಾರವಾಗಿ ನಿರ್ಮಾಪಕ ಸಂಘದ ಅಧ್ಯಕ್ಷ  ಭಾಸ್ಕರ್‌ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನಟ ಅನಿರುದ್ಧ ಬ್ಯಾನ್‌ ಮಾಡಿಲ್ಲ, 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಡಲಾಗಿದೆ ಎಂದು ಹೇಳಿದ್ದಾರೆ. ಸ್ಕ್ರಿಪ್‌ ವಿಚಾರಕ್ಕೆ ನಿರ್ದೇಶಕ ಮಧು ಅವರಿಗೆ ಮೂರ್ಖ ಎಂದು ಕರೆದು, ನಿಂದಿಸಿ,
ಧಾರವಾಹಿಯ ದೃಶ್ಯ ಬದಲಾವಣೆ ಮಾಡುವಂತೆ ಜಗಳ ಮಾಡಿದ್ದಾರೆ.  ಇದರಿಂದಾಗಿ ನಟ ಅನಿರುದ್ಧ ಧಾರವಾಹಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಈ ರೀತಿ ಹಲವು ಬಾರಿ ಆಡಿದ ಜಗಳಕ್ಕೆ ನಿರ್ಮಾಪಕ ಆರೂರು ಜಗದೀಶ್‌ ಬೇಸತ್ತು, ಕಿರುತೆರೆ ನಿರ್ಮಾಪಕ ಸಂಘದ ಸಭೆ ಕೆರೆದು  ಚರ್ಚೆ ನಡೆಸಿ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ನಿರ್ಧಾರಿಸಿದ್ದಾರೆ. 

ಹಾಗಾಗಿ ಚರ್ಚೆ ನಡೆದು, ನಟ ಅನಿರುದ್ಧನನ್ನು ಬ್ಯಾನ್‌ ಮಾಡಿಲ್ಲʼ 2 ವರ್ಷಗಳ ಕಾಲ ದೂರ ಇಟ್ಟಿದ್ದೇವೆ  ಮಾಧ್ಯಮಗಳೊಂದಿಗೆ ಮಾತನಾಡಿ ನಿರ್ಮಾಪಕ ಸಂಘದ ಅಧ್ಯಕ್ಷ  ಭಾಸ್ಕರ್‌ ಸ್ಪಷ್ಟನೆ ನೀಡಿದ್ದಾರೆ.