Home Breaking Entertainment News Kannada Actress Nithya Menen Marriage: ಬಟ್ಟಲು ಕಂಗಳ ಚೆಲುವೆ ನಟಿ ನಿತ್ಯಾ ಮೆನನ್‌ ಮದುವೆ ಫಿಕ್ಸ್‌!!!

Actress Nithya Menen Marriage: ಬಟ್ಟಲು ಕಂಗಳ ಚೆಲುವೆ ನಟಿ ನಿತ್ಯಾ ಮೆನನ್‌ ಮದುವೆ ಫಿಕ್ಸ್‌!!!

Actress Nithya Menen Marriage
Image credit: The prime time

Hindu neighbor gifts plot of land

Hindu neighbour gifts land to Muslim journalist

Actress Nithya Menen Marriage: ದಕ್ಷಿಣ ಭಾರತದ ಖ್ಯಾತ ನಟಿ ಬಹುಭಾಷೆಯಲ್ಲಿ ಮಿಂಚಿರುವ ನಿತ್ಯಾ ಮೆನನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ನಿತ್ಯ ಮೆನನ್ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಟ್ಟಲು ಕಂಗಳ ಚೆಲುವೆ ನಿತ್ಯಾ ಮೆನನ್ ಮದುವೆ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ.

ತನ್ನ ಸಹಜ ಅಭಿನಯದ ಮೂಲಕ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಮೈನಾ ಚಿತ್ರದ ಖ್ಯಾತಿಯ ನಿತ್ಯಾ ಮೆನನ್ (Actress Nithya Menen) ಮದುವೆಯಾಗಲಿದ್ದಾರೆ. ಅನೇಕ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿತ್ಯಾ ಮೆನನ್ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಮದುವೆಯಾಗುವ (Actress Nithya Menen Marriage) ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ವರ್ಷಗಟ್ಟಲೆ ಮದುವೆ ಸುದ್ದಿಯನ್ನು ಅಲ್ಲಗಳೆದಿರುವ ನಿತ್ಯಾ ಮೆನನ್ ಈ ಬಾರಿ ಮದುವೆಯಾಗಲು ರೆಡಿಯಾಗಿದ್ದಾರಂತೆ. ಈ ಕುರಿತು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ ಅಲ್ಲದೆ, ಆಪ್ತ ಸ್ನೇಹಿತ ಮತ್ತು ಉದ್ಯಮಿ ಜೊತೆ ಮದುವೆಯಾಗುವ ಸಾಧ್ಯತೆಗಳಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಹಿತಿ ಹರಿದಾಡುತ್ತಿದ್ದಂತೆ ಮೈನಾ ಸುಂದರಿಯ ಕೈಹಿಡಿಯುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಿತ್ಯಾ ಮೆನನ್ 1998ರಲ್ಲಿ ಬಣ್ಣ ಹಚ್ಚಿದ್ದಾರೆ. ಮುನ್ನ (Munna) ಎನ್ನುವ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಳಿಕ 7 ಓ ಕ್ಲಾಕ್ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡದಿಂದ ದಿಢೀರ್ ಮಲಯಾಳಂಗೆ ಹಾರಿದ ನಟಿ ಆಕಾಶ ಗೋಪುರಂ ಸಿನಿಮಾದಲ್ಲಿ ಮಿಂಚಿದರು. ಬಳಿಕ ಮತ್ತೆ ಜೋಷ್ (Josh) ಸಿನಿಮಾ ಮೂಲಕ ಕನ್ನಡಕ್ಕೆ ವಾಪಾಸ್ ಆದರು. ಆ ನಂತರ ನಿತ್ಯಾ ಹೆಚ್ಚಾಗಿ ಮಲಯಾಳಂ ಸಿನಿಮಾರಂಗದಲ್ಲಿ (Malayalam Industry) ಬ್ಯುಸಿಯಾದರು. ದೀರ್ಘ ಸಮಯದ ಬಳಿಕ ಮೈನಾ (myna) ಮೂಲಕ ಕನ್ನಡಕ್ಕೆ ವಾಪಾಸ್ ಆದ ನಿತ್ಯಾಗೆ ದೊಡ್ಡ ಮಟ್ಟದ ಹಿಟ್ ತಂದುಕೊಟ್ಟಿತು. ನಟ ಸುದೀಪ್ (Actor sudeep) ಕೋಟಿಗೊಬ್ಬ 2 (kotigobba 2) ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: LPG Cylinder : ಹಬ್ಬದ ಖುಷಿ ಜೊತೆಗೆ ಜನತೆಗೆ ಮತ್ತೊಂದು ಸಿಹಿ ಸುದ್ದಿ! LPG ಸಿಲಿಂಡರ್‌ಗಳ ಬೆಲೆ ಇಳಿಕೆ!!!